ಕೊಟ್ಟಾಯಂ : ಕೇರಳ ಸರಕಾರಕ್ಕೆ ಆದಾಯ ತರುವಂತಹ ದೇವಸ್ಥಾನ ಅಂದರೆ ಅದು ಶಬರಿಮಲೆ ಆದರೆ ಅಲ್ಲಿನ ಕಮ್ಯುನಿಸ್ಟ್ ಸರ್ಕಾರದ ನಿರ್ಲಕ್ಸ್ಯದಿಂದ ಅಯ್ಯಪ್ಪ ಯಾತ್ರಾರ್ಥಿಗಳಿಗೆ ನಿರಾಶೆಯುಂಟಾಗಿದೆ ಕಾರಣ ಈ ಬಾರಿ ಅತಿಯಾಗಿ ಭಕ್ತರ ಸಂಖ್ಯೆ ಜಾಸ್ತಿಯಾಗಿರುವುದು .
ಅಯ್ಯಪ್ಪಸ್ವಾಮಿ ದರ್ಶನ ಪಡೆಯಲು ಶಬರಿಮಲೆಗೆ ಆಗಮಿಸಿರುವ ಯಾತ್ರಾರ್ಥಿಗಳಿಗೆ ಸೂಕ್ತ ವ್ಯವಸ್ಥೆಯಿಲ್ಲದೆ ನರಕಯಾತನೆ ಅನುಭವಿಸುವಂತಾಗಿದೆ. 8-10 ಗಂಟೆಗಳ ಕಾಲ ಬಿಸಿಲಲ್ಲಿ ಕ್ಯೂನಲ್ಲಿ ನಿಲ್ಲಬೇಕಾಗಿ ಬಂದಿದೆ. ಕುಡಿಯುವ ನೀರಿನ ಸೂಕ್ತ ವ್ಯವಸ್ಥೆಯೂ ಇಲ್ಲದ ಕಾರಣ ಕರ್ನಾಟಕದ ಅನೇಕ ಭಕ್ತರು ದರ್ಶನ ಪಡೆದುಕೊಳ್ಳಲಾಗದೆ ವಾಪಸ್ಸಾಗುತ್ತಿದ್ದಾರೆ.
ಭಾರಿ ಪ್ರಮಾಣದ ನೂಕು ನುಗ್ಗಲು ಉಂಟಾಗಿರುವುದರಿAದ ಸಣ್ಣ ಮಕ್ಕಳು ಗುಂಪಿನಲ್ಲಿ ಕಳೆದು ಹೋಗುತ್ತಿದ್ದು, ಮಕ್ಕಳು ಮತ್ತು ಪೋಷಕರು ಇಬ್ಬರಲ್ಲೂ ಆತಂಕ ಸೃಷ್ಟಿಯಾಗಿದೆ.

ಎರಡು ಪ್ರತ್ಯೇಕ ಘಟನೆಗಳಲ್ಲಿ ಸಹಾಯಕ ಅರ್ಚಕ ಹಾಗೂ ಒಬ್ಬ ಬಾಲಕಿ ನಿಧನರಾಗಿರುವುದು ಪರಿಸ್ಥಿತಿಯ ವಿಷಮತೆಯನ್ನು ಬಿಂಬಿಸುತ್ತದೆ. ಈ ನಡುವೆ ಭಕ್ತಾದಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಹೈಕೋರ್ಟ್ ಸೂಚಿಸಿದೆ. ನೀಲಕ್ಕಲ್ ಬಳಿ ವಾಹನಗಳು ಹೆಚ್ಚಾಗಿರುವುದರಿಂದ ಸಮಸ್ಯೆ ಉಂಟಾಗಿದೆ ಎಂದು ಕೋರ್ಟ್ಗೆ ಸರ್ಕಾರ ತಿಳಿಸಿದೆ. ನೀಲಕ್ಕಲ್ ಬಳಿ ವಾಹನ ದಟ್ಟಣೆ ಜಾಸ್ತಿಯಾದಲ್ಲಿ, ಬೇರೆ ಕಡೆ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡುವಂತೆಯೂ ಹೈಕೋರ್ಟ್ ನಿರ್ದೇಶಿಸಿದೆ. ಇದಕ್ಕಾಗಿ ಸ್ವಯಂಸೇವಕರ ನೆರವನ್ನು ಪಡೆದುಕೊಳ್ಳುವಂತೆ ದೇವಸ್ವಂಗೆ ನ್ಯಾಯಪೀಠ ಸೂಚಿಸಿದೆ. ಇಷ್ಟೆಲ್ಲ ಆದ ನಂತರ, ಭಕ್ತರನ್ನು ನಿಯಂತ್ರಿಸುವಲ್ಲಿ ವಿಫಲವಾಗಿರುವ ಪೊಲೀಸ್ ಅಧಿಕಾರಿಗಳನ್ನು ವರ್ಗಾಯಿಸಲಾಗಿದೆ.
ಪ್ರತಿ ವರ್ಷ ಈ ಸಮಯದಲ್ಲಿ 66 ಸಾವಿರ ಭಕ್ತರು ದೇವಾಲಯಕ್ಕೆ ಬರುತ್ತಿದ್ದರು. ಈಗ ಇದು ಒಂದು ಲಕ್ಷ ಮೀರಿದೆ. ಆದರೂ ಸರ್ಕಾರ ಭಕ್ತರಿಗೆ ಎಲ್ಲ ಮಾಡುತ್ತಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಮರ್ಥನೆ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.
ವಾರ್ಷಿಕ ಮಂಡಲಂ ಯಾತ್ರೆಗಾಗಿ ಶಬರಿಮಲೆಯ ಅಯ್ಯಪ್ಪ ದೇಗುಲದಲ್ಲಿ ಯಾತ್ರಾರ್ಥಿಗಳ ನೂಕುನುಗ್ಗಲು ಬುಧವಾರ ನಿಯಂತ್ರಣಕ್ಕೆ ಬಂದಿದ್ದು, ಯಾತತ್ರಿಗಳು ಸಾಲಿನಲ್ಲಿ ಗಂಟೆಗಟ್ಟಲೆ ಬೀಡುಬಿಟ್ಟಿರುವ ಪರಿಸ್ಥಿತಿ ಬಂದಿದೆ. ದರ್ಶನ ಸಮಯವನ್ನು ಒಂದು ಗಂಟೆ ಹೆಚ್ಚಿಸಿದ್ದಾರೆ ಮತ್ತು ದೇವಾಲಯಕ್ಕೆ ಹೋಗುವ ಮಾರ್ಗದಲ್ಲಿ ಭದ್ರತಾ ಕ್ರಮಗಳನ್ನು ಹೆಚ್ಚಿಸಿದ್ದಾರೆ.
ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್ಡಿಎಫ್) ನೇತೃತ್ವದ ಕೇರಳ ಸರ್ಕಾರವು ಶಬರಿಮಲೆಯಲ್ಲಿ ಭಾಕ್ತಾದಿಗಳಿಗೆ ನೀಡುವ ವ್ಯವಸ್ಥೆಯನ್ನು ನಿರ್ವಹಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ತೀವ್ರ ಟೀಕೆಗೆ ಒಳಗಾಗಿದ್ದು, ಜನಸಂದಣಿ ನಿರ್ವಹಣೆಯನ್ನು ಪರಿಶೀಲಿಸಲು ದೇವಸ್ವಂ ಸಚಿವ ಕೆ ರಾಧಾಕೃಷ್ಣನ್ ಅವರು ಶಬರಿಮಲೆಗೆ ದೌಡಾಯಿಸಿದ್ಧಾರೆ. ದೇವಾಲಯವನ್ನು ನಿರ್ವಹಿಸುವ ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಉನ್ನತ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸರಿಯಾದ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.


