Thursday, March 12, 2026
Flats for sale
Homeದೇಶಕೆ.ಆರ್.ಪೇಟೆ : ಚಂದ್ರಯಾನ-03 ಯಶಸ್ಸಿನಲ್ಲಿ‌ ಕೆ.ಆರ್.ಪೇಟೆ ತಾಲ್ಲೂಕಿನ ಇಬ್ಬರು ಯುವ ವಿಜ್ಞಾನಿಗಳು ಭಾಗಿ, ಹೆಚ್ಚಿದ ತಾಲ್ಲೂಕಿನ...

ಕೆ.ಆರ್.ಪೇಟೆ : ಚಂದ್ರಯಾನ-03 ಯಶಸ್ಸಿನಲ್ಲಿ‌ ಕೆ.ಆರ್.ಪೇಟೆ ತಾಲ್ಲೂಕಿನ ಇಬ್ಬರು ಯುವ ವಿಜ್ಞಾನಿಗಳು ಭಾಗಿ, ಹೆಚ್ಚಿದ ತಾಲ್ಲೂಕಿನ ಕೀರ್ತಿ.

ಕೆ.ಆರ್.ಪೇಟೆ : ಚಂದ್ರಯಾನ -3 ರ ಯಶಸ್ವಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ತಾಲೂಕಿನ ಸುಪುತ್ರರಾದ ಆಕಾಶ್ ಮತ್ತು ವಿನೋದ್ ರಾಜ್ ಪಾಲ್ಗೊಳ್ಳುವ ಮೂಲಕ ತಾಲೊಕಿನ ಕೀರ್ತಿಯನ್ನು ಬೆಳಗಿದ್ದಾರೆ.
ಕೆ.ಆರ್.ಪೇಟೆ ಪಟ್ಟಣದ ಜಯನಗರ ಬಡಾವಣೆಯ ನಿವಾಸಿ ದಿ. ಟೈಲರ್ ಬಾಲಾಜಿ ಮತ್ತು ಭಾಗ್ಯಮ್ಮ ದಂಪತಿಗಳ ಪುತ್ರ ಆಕಾಶ್ ಇಸ್ರೋ ಸಂಸ್ಥೆಯಲ್ಲಿ ತಾಂತ್ರಿಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹೊಸಹೊಳಲು ಸರ್ಕಾರಿ ಶಾಲೆಯಲ್ಲಿ ಮಾಡಿದ್ದಾರೆ, ಪ್ರೌಢ ಶಿಕ್ಷಣವನ್ನು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಾಡಿ ನಂತರ ಕೆ.ಆರ್.ಪೇಟೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದಲ್ಲಿ ಡಿಪ್ಲೊಮಾ ಶಿಕ್ಷಣವನ್ನು ಮುಗಿಸಿ ನಂತರ ಮೈಸೂರಿನ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿದರು, 2008 ಎಪ್ರಿಲ್ ತಿಂಗಳಿನಲ್ಲಿ ಇಸ್ರೋ ಅಂಗಸಂಸ್ಥೆ ಇಸ್ಟ್ಯಾಕ್ ಮೂಲಕ ಆಕಾಶ್ ತಾಂತ್ರಿಕ ವಿಭಾಗಕ್ಕೆ ಆಯ್ಕೆಯಾಗಿ ಮಾರ್ಗದರ್ಶಕರ ಸೂಚನೆಯಂತೆ ಕರ್ತವ್ಯ ನಿರ್ವಹಿಸುತ್ತಿರುವ ಆಕಾಶ್ ಪ್ರಸ್ತುತ ಚಂದ್ರಯಾನ -3 ಕಾರ್ಯಾಚರಣೆಯಲ್ಲಿ ತಾಂತ್ರಿಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದು ಚಂದ್ರಯಾನ-3 ಯಶಸ್ಸಿನಲ್ಲಿ ಪಾಲು ಪಡೆದಿದ್ದಾರೆ.

ಅದೇ ರೀತಿ ಕೆ.ಆರ್.ಪೇಟೆ ತಾಲೂಕಿನ ಕಸಬಾ ಹೋಬಳಿಯ ತೆರ್ನೇನಹಳ್ಳಿ ಗ್ರಾಮದ ರೈತ ಜಯರಾಂ ಮತ್ತು ರತ್ನಮ್ಮ ದಂಪತಿಗಳ ಪುತ್ರ ವಿನೋದ್ ರಾಜ್ ಸ್ವಗ್ರಾಮ ತೆರ್ನೇನಹಳ್ಳಿ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಕವನ್ನು, ಮಾಧ್ಯಮಿಕ ಶಿಕ್ಷಣವನ್ನು ಬೊಮ್ಮೇನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಾಗೂ ಫ್ರೌಢ ಶಿಕ್ಷಣವನ್ನು ಹರಿಹರಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಹಾಗೂ ತಾಂತ್ರಿಕ ಶಿಕ್ಷಣವನ್ನು ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಹಾಗೂ ಇಂಜಿನಿಯರಿಂಗ್ ಶಿಕ್ಷಣವನ್ನು ಮಂಡ್ಯದ ಪಿಇಎಸ್ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿ 2013 ರಲ್ಲಿ ಇಸ್ರೋದಲ್ಲಿ ಕೆಲಸಕ್ಕೆ ಸೇರಿದರು, ಚಂದ್ರಯಾನ -2 ರಲ್ಲಿಯೂ ಇವರು ಭಾಗಿಯಾಗಿದ್ದರು, ಪ್ರಸ್ತುತ ಚಂದ್ರಯಾನ -3 ರಲ್ಲಿ ಡೀಪ್ ಸ್ವೇಸ್ ನೆಟ್ ವರ್ಕ್ ವಿಭಾಗದಲ್ಲಿ ಆಂಟೇನಾ ಡಿಸೈನಿಂಗ್ ಕ್ಷೇತ್ರದಲ್ಲಿ ತಮ್ಮ ಮಾರ್ಗದರ್ಶಕರ ಹಾಗೂ ತಂಡದ ಸದಸ್ಯರೊಂದಿಗೆ ಕೆಲಸ ನಿರ್ವಹಿಸುತ್ತಿದ್ದಾರೆ.

ಚಂದ್ರಯಾನ-3 ಯಶಸ್ವಿಯಾಗಿರುವ ಕಾರಣ ಇದಕ್ಕೆ ತೆರೆಮರೆಯಲ್ಲಿ ಆಕಾಶ್ ಮತ್ತು ವಿನೋದ್ ರಾಜ್ ಗ್ರಾಮೀಣ ಪ್ರತಿಭೆಗಳಾಗಿ ಕಷ್ಟಪಟ್ಟು ವ್ಯಾಸಂಗ ಮಾಡಿ ವಿಜ್ಞಾನ ಕ್ಷೇತ್ರದಲ್ಲಿ ಇರುವ ಅವಕಾಶಗಳನ್ನು ಬಳಸಿಕೊಂಡು ಸಾಧನೆ ಮಾಡಿದ ತಾಲೊಕಿನ ಸುಪುತ್ರರಿಗೆ ಶಾಸಕ ಹೆಚ್.ಟಿ.ಮಂಜು, ಮಾಜಿ ಸಚಿವ ನಾರಾಯಣಗೌಡ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್ ,ಬಿ.ಪ್ರಕಾಶ್,ಬಿ.ಎಲ್.ದೇವರಾಜ್, ಜಾನಕಿ ರಾಮ್, ಸಮಾಜ ಸೇವಕರಾದ ಆರ್.ಟಿ.ಓ ಅಧಿಕಾರಿ ಮಲ್ಲಿಕಾರ್ಜುನ್, ಮಿತ್ರ ಫೌಂಡೇಷನ್‌ ಸಂಸ್ಥೆಯ ಅಧ್ಯಕ್ಷ ವಿಜಯ್ ರಾಮೇಗೌಡ, ಮನ್ ಮುಲ್ ನಿರ್ದೇಶಕ ಡಾಲು ರವಿ, ತಾಲ್ಲೂಕು ಕುವೆಂಪು ಕನ್ನಡ ಗೆಳೆಯದ ಬಳಗ ಸೇವಾ ಟ್ರಸ್ಟಿನ ಅಧ್ಯಕ್ಷ ಕೆಬಿಸಿ ಮಂಜುನಾಥ್, ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ತಾಲ್ಲೋಕು ಅಧ್ಯಕ್ಷರಾದ ಹೆಚ್.ಕೆ.ಮಂಜುನಾಥ್, ಟಿ.ವೈ.ಆನಂದ್, ಅಗ್ರಹಾರಬಾಚಹಳ್ಳಿ ಗ್ರಾ.ಪಂ.ಅಧ್ಯಕ್ಷ ದಿವಿಕುಮಾರ್, ಗ್ರಾ.ಪಂ.ಸದಸ್ಯ ಚಿಲ್ಲದಹಳ್ಳಿ ಶ್ರೀನಿವಾಸ್ ಸೇರಿದಂತೆ ಹಲವು ಗಣ್ಯರು ಅಭಿನಂದನೆಗಳನ್ನು ‌ಸಲ್ಲಿಸಿದ್ದಾರೆ,

RELATED ARTICLES

LEAVE A REPLY

Please enter your comment!
Please enter your name here

Most Popular