ಕೆ ಆರ್ ಪುರಂ : ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಸ್ಪೋಟಗೊಂಡು ಇಡೀ ಮನೆ ಸಂಪೂರ್ಣ ನೆಲಸಮ ವಾದ ಘಟನೆ ಕೆ ಆರ್ ಪುರ ದ ತ್ರಿವೇಣಿ ನಗರದಲ್ಲಿ ನಡೆದಿದೆ.


ಇಂದು ಬೆಳಗ್ಗೆ ಈ ಅವಘಡ ನಡೆಡಿದ್ದು ಮನೆ ಅವಶೇಷಗಳಲ್ಲಿ ಮೂವರು ಸಿಲುಕಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ ನಡೆದಿದ್ದು ಸ್ಥಳಕ್ಕೆ ಕೆ ಆರ್ ಪುರ ಪೊಲೀಸರು ದೌಡಹಿಸಿದ್ದಾರೆ. ಘಟನೆಯಲ್ಲಿ ಮನೆಯ ಕಟ್ಟಡ ಅವಶೇಷ ಬಿದ್ದು ಮಹಿಳೆ ಸಾವನ್ನಪ್ಪಿದ್ದಾರೆ. ಮೃತ ಮಹಿಳೆ ಅಕ್ಕಯಮ್ಮ {80} ಎಂದು ತಿಳಿದಿದೆ.
ಈ ಘಟನೆಯಿಂದ ಅಕ್ಕಪಕ್ಕದ ಮನೆಗಳಿಗೂ ಹಾನಿಯಾಗಿದೆ.ಘಟನೆಯಲ್ಲಿ ಶೇಖರ್ (52) ಕಿರಣ್ (22) ಚಂದನ್ (25) ಗಾಯಗಳಾಗಿದ್ದು ಕೆಆರ್ ಪುರದ ಖಾಸಗೀ ಆಸ್ಪತ್ರೆಗೆ ದಾಖಲಿಸಿದ್ದಾರೆ.


