Saturday, March 14, 2026
Flats for sale
Homeಜಿಲ್ಲೆಕುಂದಾಪುರ : ಸಿಬ್ಬಂದಿಗಳ ನಿರ್ಲಕ್ಷ್ಯ : ಖಾಸಗಿ ರೆಸಾರ್ಟ್‌ನ ಈಜುಕೊಳದಲ್ಲಿ ಮುಳುಗಿ ಬಾಲಕ ಸಾವು.

ಕುಂದಾಪುರ : ಸಿಬ್ಬಂದಿಗಳ ನಿರ್ಲಕ್ಷ್ಯ : ಖಾಸಗಿ ರೆಸಾರ್ಟ್‌ನ ಈಜುಕೊಳದಲ್ಲಿ ಮುಳುಗಿ ಬಾಲಕ ಸಾವು.

ಕುಂದಾಪುರ ; ಈದ್ ಹಬ್ಬದ ದಿನದಂದು ಗುರುವಾರ ಶಂಕರನಾರಾಯಣದ ಖಾಸಗಿ ರೆಸಾರ್ಟ್‌ನ ಈಜುಕೊಳದಲ್ಲಿ 10 ವರ್ಷದ ಬಾಲಕ ಮುಳುಗಿ ಸಾವನ್ನಪ್ಪಿದ್ದಾನೆ.

ಮಹಮ್ಮದ್ ಅರಿಜ್ (10) ಮೃತ ಬಾಲಕ. ಬಾಲಕ ಗುರುವಾರ ಕುಟುಂಬ ಸಮೇತ ಹೆಂಗವಳ್ಳಿಯ ರೆಸಾರ್ಟ್‌ಗೆ ಹೋಗಿದ್ದು . ನೀರಿಗೆ ಬಿದ್ದ ಅವರು ಚಿಂತಾಜನಕ ಸ್ಥಿತಿಯಲ್ಲಿ ಬಾಲಕ ಪತ್ತೆಯಾಗಿದ್ದಾನೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರ ಪ್ರಾಣ ಉಳಿಸಲಾಗಲಿಲ್ಲ ಎಂದು ವರದಿಯಾಗಿದೆ.

ರೆಸಾರ್ಟ್ ಆಡಳಿತ ಮಂಡಳಿ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣ ಎನ್ನಲಾಗಿದೆ. ಲೈಫ್ ಜಾಕೆಟ್ ಮತ್ತು ಇತರ ಸುರಕ್ಷತಾ ಸಾಧನಗಳನ್ನು ಒದಗಿಸಲು ರೆಸಾರ್ಟ್ ಆಡಳಿತ ವಿಫಲವಾಗಿದೆ ಎಂದು ಕುಟುಂಬ ಆರೋಪಿಸಿದೆ.

ಮೃತ ಬಾಲಕ ಹೂಡೆಯ ದಾರುಸ್ಸಲಾಂ ಆಂಗ್ಲ ಮಾಧ್ಯಮ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ.

RELATED ARTICLES

LEAVE A REPLY

Please enter your comment!
Please enter your name here

Most Popular