ಕಿತ್ತೂರು : ನೂತನವಾಗಿ ನಿರ್ಮಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 3 ಕಟ್ಟಡಗಳು ಅತ್ಯಂತ ಕಳಪೆ ಕಾಮಗಾರಿಯಾಗಿ ನಿರ್ಮಿಸಲಾಗಿದೆ ಎಂದು ಆರೋಪಿಸಿ ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಬಸ್ಸಾಪೂರ ಗ್ರಾಮಸ್ಥರು ಹಾಗೂ ಪಾಲಕರು ಪ್ರತಿಭಟನೆ ನಡೆಸಿದರು.
ಲೋಕೋಪಯೋಗಿ ಇಲಾಖೆಯಿಂದ ಅಂದಾಜು 25 ಲಕ್ಷ ವೆಚ್ಚದಲ್ಲಿ ಈ ಕಟ್ಟಡ ಕಾಮಗಾರಿಯನ್ನು 3 ಜನ ಗುತ್ತಿಗೆದಾರರಿಗೆ ಹಂಚಲಾಯಿತು. ಆದರೆ ಮೂರು ಜನ ಸೇರಿ ಈ ಶಾಲಾ ಕಟ್ಟಡ ಕಾಮಗಾರಿಯನ್ನು ಹಳ್ಳ ಹಿಡಿಸಿದ್ದಾರೆ.
ಮಳೆಗಾಲದಲ್ಲಿ ಶಾಲಾ ಗೋಡೆಯಲ್ಲಿ ನೀರು ಇಳಿಯುತ್ತಿದೆ. ಸರಿಯಾಗಿ ಕಿಟಕಿ, ಬಾಗಿಲು ಕುಡಿಸಿಲ್ಲ, ಗೋಡೆಗಳು ಬಿರುಕು ಬಿಟ್ಟಿದ್ದಾವೆ. ಮೆಟ್ಟಿಲುಗಳು ಕೆಳಗೆ ಕುಸಿದಿದೆ. ಈ ಕಡೆ ಅಧಿಕಾರಿಗಳು ಬಂದು ಪರಿಶೀಲಿಸಿ ಶಾಲಾ ಕಟ್ಟಡವನ್ನು ಸರಿಪಡಿಸಬೇಕು ಇಲ್ಲವಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಗ್ರಾಮಸ್ಥ ಬಸವರಾಜ ಬಬ್ಲಿ ಆಗ್ರಹಿಸಿದ್ದಾರೆ.


