ಕಾಸರಗೋಡು : ಈ ಬಾರಿಯೂ ದೀಪಾವಳಿ ಅಂಗವಾಗಿ ನಡೆದ ಪೂಜಾ ಬಂಪರ್ ಲಾಟರಿಯಲ್ಲಿ ವ್ಯಕ್ತಿಯೊಬ್ಬರಿಗೆ 12 ಕೋಟಿ ರೂ. ಲಾಟರಿ ಬಂದಿದೆ. ಅವರು ಕಾಸರಗೋಡಿನವರು. ಕೇರಳ ರಾಜ್ಯ ಲಾಟರಿ ಇಲಾಖೆಯ ಪೂಜಾ ಬಂಪರ್ ಲಾಟರಿಯಲ್ಲಿ ಜೆಸಿ 253199 ಟಿಕೆಟ್ ಆಕರ್ಷಕ 12 ಕೋಟಿ ರೂ. ಕಾಸರಗೋಡಿನ ಮಂಜೇಶ್ವರದ ಅನ್ನಕಲ್ ಮೂಲದ ಮೇರಿಕುಟ್ಟಿ ಜೋಜೋ ಈ ಟಿಕೆಟ್‌ನ ಹಿಂದೆ ಮಾರಾಟಗಾರರಾಗಿದ್ದರು.
ಕೇರಳ ಸರ್ಕಾರದ ಲಾಟರಿ ವಿಭಾಗವು ನಡೆಸುವ ಲಾಟರಿಯನ್ನು ಪ್ರಕಟಿಸಲಾಗಿದ್ದು. ಕಾಸರಗೋಡಿನ ವ್ಯಕ್ತಿಗೆ ಬಂಪರ್ ಬಹುಮಾನ ಬಂದಿದೆ. ಆದರೆ ಅವರು ಯಾರು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.
ಜೆಸಿ 253199 ಸಂಖ್ಯೆಯ ಲಾಟರಿಗೆ ಬಂಪರ್ ಬಹುಮಾನ ಲಭಿಸಿದೆ. ಈ ಲಾಟರಿ ಕಾಸರಗೋಡಿನಲ್ಲಿ ಮಾರಾಟವಾಗಿತ್ತು. 12 ಕೋಟಿ ರೂ. ಬಂಪರ್ ಲಾಟರಿಯಿದು. ತೆರಿಗೆಯೆಲ್ಲಾ ಕಡಿತಗೊಳಿಸಿ 7.56 ಕೋಟಿ ರೂ. ಹಣ ವಿಜೇತರಿಗೆ ಲಭಿಸಲಿದೆ ಎನ್ನುವುದು ಕೇರಳ ಲಾಟರಿ ವಿಭಾಗದ ಅಧಿಕಾರಿಗಳ ವಿವರಣೆ.
ಇದಲ್ಲದೇ ನಾಲ್ಕು ಟಿಕೆಟ್‌ಗಳಿಗೆ ತಲಾ ಒಂದು ಕೋಟಿ ರೂ. ಕೂಡ ಲಭಿಸಿದೆ. ಅದರಲ್ಲಿ ಜೆಡಿ 504106, ಜೆಸಿ 748835, ಜೆಸಿ 293247, and ಜೆಸಿ 781889 ಸಂಖ್ಯೆಯ ಲಾಟರಿಗಳಿಗೆ ತಲಾ ಒಂದು ಕೋಟಿ ರೂ. ಸಿಗಲಿದೆ.
ಇದಲ್ಲದೇ 10 ಲಾಟರಿಗಳಿಗೆ ತಲಾ 10 ಲಕ್ಷ ರೂ. ಬಹುಮಾನ ಸಿಗಲಿದೆ. ಜೆಎ 269609, ಜೆಬಿ 117859, ಜೆಸಿ 284717, ಜೆಡಿ 239603, ಜೆಇ 765533, ಜೆಎ 538789, ಜೆಬಿ 271191, ಜೆಸಿ 542383, ಜೆಡಿ 899020, ಜೆಇ 588634 ಸಂಖ್ಯೆಯ ಲಾಟರಿಗಳು ತಲಾ 10 ಲಕ್ಷ ರೂ. ಬಹುಮಾನಕ್ಕೆ ಆಯ್ಕೆಯಾಗಿವೆ.
ಹಬ್ಬಗಳನ್ನು ಗಮನದಲ್ಲಿಟ್ಟುಕೊಂಡು ಕೇರಳ ಸರ್ಕಾರದ ಲಾಟರಿ ವಿಭಾಗವು ಹಲವಾರು ಬಂಪರ್ ಲಾಟರಿ ನಡೆಸುತ್ತದೆ. ಇದರಲ್ಲಿ ಪೂಜಾ ಬಂಪರ್, ಸ್ತ್ರೀಶಕ್ತಿ, ವಿನ್ ವಿನ್, ಅಕ್ಷಯಾ, ಕಾರುಣ್ಯ, ನಿರ್ಮಲ್ , ಕಾರುಣ್ಯ ಪ್ಲಸ್, ಫಿಪ್ಟಿ ಫಿಪ್ಟಿ ಪ್ರಮುಖವಾದ ಲಾಟರಿಗಳು.


