Saturday, November 23, 2024
Flats for sale
Homeಜಿಲ್ಲೆಕಾಸರಗೋಡು : ವಿಷ ಸೇವಿಸಿ ತಾಯಿ ಇಬ್ಬರು ಮಕ್ಕಳು ಆತ್ಮಹತ್ಯೆಗೆ ಶರಣು.

ಕಾಸರಗೋಡು : ವಿಷ ಸೇವಿಸಿ ತಾಯಿ ಇಬ್ಬರು ಮಕ್ಕಳು ಆತ್ಮಹತ್ಯೆಗೆ ಶರಣು.

ಕಾಸರಗೋಡು : ತಾಯಿ ಹಾಗೂ ಇಬ್ಬರು ಮಕ್ಕಳ ಮೃತದೇಹ ಕಾಸರಗೋಡು ಜಿಲ್ಲೆಯ ಚಿಮೇನಿ ಬಳಿ ಪತ್ತೆಯಾಗಿರುವ ಘಟನೆ ಚೆಂಬ್ರಕಾನದಲ್ಲಿ ನಡೆದಿದೆ. ಮೃತರನ್ನು ರಂಜಿತ್ ಅವರ ಪತ್ನಿ ಸಜೀನಾ, 34, ಮಕ್ಕಳಾದ ಗೌತಮ್, 9, ಮತ್ತು ತೇಜಸ್, 6 ಎಂದು ಗುರುತಿಸಲಾಗಿದ್ದು, ಇವರು ಚೆಂಬ್ರಕಾನ್‌ ನಿವಾಸಿಗಳೆಂದು ತಿಳಿದುಬಂದಿದೆ.

ಏಪ್ರಿಲ್ 9ರ ಮಂಗಳವಾರ ಮಧ್ಯಾಹ್ನ ಈ ಘಟನೆ ಬೆಳಕಿಗೆ ಬಂದಿದ್ದು ಮಕ್ಕಳು ವಿಷ ಸೇವಿಸಿ ಮೃತಪಟ್ಟಿದ್ದು, ತಾಯಿ ಸಜೀನಾ ನೇಣು ಬಿಗಿದುಕೊಂಡು ಕೈಯ ನರವನ್ನು ಕತ್ತರಿಸಿಕೊಂಡು ಸಾವನ್ನಪ್ಪಿದ್ದಾರೆ. ಸಜೀನಾ ಪೆರಿಂಗೋ ವಯಕ್ಕರ ಪಂಚಾಯತ್ ಕಚೇರಿಯಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಮಾಹಿತಿ ಪಡೆದ ಚಿಮೇನಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ತನಿಖೆ ಆರಂಭಿಸಿದ್ದಾರೆ. ಈ ಕೃತ್ಯಕ್ಕೆ ಕಾರಣ ತಿಳಿದು ಬಂದಿಲ್ಲ ಮತ್ತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular