Tuesday, November 4, 2025
Flats for sale
Homeಜಿಲ್ಲೆಕಾಸರಗೋಡು ; ರಾಷ್ಟ್ರೀಯ ಹೆದ್ದಾರಿಯಲ್ಲಿ ಅಜಾಗರೂಕತೆಯಿಂದ ರಸ್ತೆ ದಾಟುತ್ತಿದ್ದಾಗ ಪಾದಚಾರಿ ಮಹಿಳೆಗೆ ಕಾರು ಡಿಕ್ಕಿ ,ಚಿಕಿತ್ಸೆ...

ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿಯಲ್ಲಿ ಅಜಾಗರೂಕತೆಯಿಂದ ರಸ್ತೆ ದಾಟುತ್ತಿದ್ದಾಗ ಪಾದಚಾರಿ ಮಹಿಳೆಗೆ ಕಾರು ಡಿಕ್ಕಿ ,ಚಿಕಿತ್ಸೆ ಫಲಕಾರಿಯಾಗದೆ ಸಾವು, ಡಿಕ್ಕಿ ರಭಸಕ್ಕೆ 50 ಮೀಟರ್ ಎತ್ತರಕ್ಕೆ ಎಸೆದ ವೀಡಿಯೋ ವೈರಲ್…!

ಕಾಸರಗೋಡು : ಕಾಸರಗೋಡಿನ ಬಳಿ ನಡೆದ ಬೀಕರ ರಸ್ತೆ ಅಪಘಾತದಲ್ಲಿ ಅಡ್ಕತ್ತಬೈಲು ಕೋಡೆ ಹಿತ್ತಿಲು ನಿವಾಸಿ,STU ತಲೆಹೊರೆ ಕಾರ್ಮಿಕನಾಗಿರುವ ಎ.ಎ ಯೂಸುಪ್ ಎಂಬವರ ಪತ್ನಿ ನಸಿಯಾರವರು ಮೃತಪಟ್ಟ ಘಟನೆ ನಡೆದಿದೆ‌.

ನಿನ್ನೆ ಸಂಜೆ ಕಾರ್ಯದ ನಿಮಿತ್ತ ಹೆದ್ದಾರಿ ಅಡ್ಕತ್ತಬೈಲಿನ ಬಲಿ ಒಂದು ವಾಹನವನ್ನು ದಾಟಿ ಮತ್ತೊಂದು ವಾಹನವನ್ನು ಗಮನಿಸದೆ ದಾಟುತ್ತಿದ್ದಾಗ ರಭಸದಿಂದ ಬಂದ ಕಾರು ಮಹಿಳೆಗೆ ದಿಕ್ಕಿ ಹೊಡೆದಿದೆ.ಡಿಕ್ಕೆ ರಭಸಕ್ಕೆ ಮಹಿಳೆ 50 ಮೀಟರ್ ಎತ್ತರಕ್ಕೆ ಎಸೆದಿದ್ದು ವೀಡಿಯೋ ವೈರಲ್ ಆಗಿದೆ. ಬಳಿಕ ಸ್ಥಳೀಯರು ಮಹಿಳೆಯನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಿದ್ದು ಹೆಚ್ಚಿನ ಚಿಕಿತ್ಸೆ ಗಾಗಿ ಮಂಗಳೂರಿಗೆ ಕೊಂಡೊಯ್ಯುವ ವೇಳೆ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular