ಕಾಸರಗೋಡು : ಕಾಸರಗೋಡು ಮುನ್ಸಿಪಲ್ ಸ್ಟೇಡಿಯಂ ರಸ್ತೆಗೆ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಅವರ ಹೆಸರನ್ನು ಕಾಸರಗೋಡು ಟಿಎಂಸಿ ಮರುನಾಮಕರಣ ಮಾಡಿದೆ. ಶುಕ್ರವಾರ ನಡೆದ ಭವ್ಯ ಸಮಾರಂಭದಲ್ಲಿ ಸುನಿಲ್ ಗವಾಸ್ಕರ್ ಮುನ್ಸಿಪಲ್ ಸ್ಟೇಡಿಯಂ ರಸ್ತೆಯ ನಾಮಫಲಕವನ್ನು ಸುನಿಲ್ ಗವಾಸ್ಕರ್ ಅವರ ಸಮ್ಮುಖದಲ್ಲಿ ಅನಾವರಣಗೊಳಿಸಲಾಯಿತು.
ಕಾಸರಗೋಡಿಗೆ ಆಗಮಿಸಿದ ಗವಾಸ್ಕರ್ ಅವರಿಗೆ ಅದ್ಧೂರಿ ಸ್ವಾಗತ ನೀಡಲಾಯಿತು. ಸುನಿಲ್ ಗವಾಸ್ಕರ್ ಅವರನ್ನು ನೋಡಲು ಹಲವಾರು ಅಧಿಕಾರಿಗಳು ಮತ್ತು ಕ್ರಿಕೆಟ್ ಅಭಿಮಾನಿಗಳು ಜಮಾಯಿಸಿದ್ದರು. ಕಾಸರಗೋಡು ಶಾಸಕ ಎನ್ ಎ ನೆಲ್ಲಿಕುನ್ನು ಇದೊಂದು ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದ್ದು, ಗವಾಸ್ಕರ್ ಆಗಮನದಿಂದ ಸ್ಥಳೀಯ ಆಟಗಾರರಿಗೆ ಸ್ಪೂರ್ತಿಯಾಗಲಿ ಎಂದು ಆಶಿಸಿದರು.