ಕಾಸರಗೋಡು ; ಕಾಸರಗೋಡು ತಲಪಾಡಿ ರಸ್ತೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು ಇಲ್ಲಿ ತಾತ್ಕಲಿಕ ಅಲ್ಲಲ್ಲಿ ತಡೆಗೋಡೆ ಹಾಗೂ ಡಿವೈಡರ್ ನಿರ್ಮಿಸುವುದರಿಂದ ವಾಹನ ಚಾಲಕರಿಗೆ ಗೊಂದಲ ಉಂಟಾಗಿ ಹಲವು ಅಪಘಾತ ಸಂಭವಿಸಿದೆ.
ಇಂದು ಮಂಜೇಶ್ವರ ಬಳಿಯ ಉಪ್ಪಳ ಬ್ರಿಡ್ಜ್ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಡಿವೈಡರ್ ಗೆ ಕಾರು ಡಿಕ್ಕಿ ಯಾದ ರಭಸಕ್ಕೆ ಕಾರು ತುಂಡು ತುಂಡಾಗಿ ರಸ್ತೆಗೆಸೆಯಲ್ಪಟ್ಟ ಘಟನೆ ವರದಿಯಾಗಿದೆ.
ಕಾರಿನಲ್ಲಿದ್ಡ ನಾಲ್ವರಲ್ಲಿ ಮೂವರು ಸಾವನಪ್ಪಿದ್ದು ಇನ್ನೊಬ್ಬರು ಗಂಭೀರ..
ಗಾಯಗೊಂಡಿದ್ದಾರೆಂದು ತಿಳಿದಿದೆ.
ಮೃತರನ್ನು ಕಾಸರಗೋಡು ಪೈವಳಿಕೆ ಬಾಯಿಕಟ್ಚೆಯ ನಿವಾಸಿ
ಜನಾರ್ದನ, ವರುನ್,ಕೃಷ್ಣ ಎಂದು ತಿಳಿದುಬಂದಿದೆ . ಮೃತದೇಹವನ್ನು ಮಂಗಳೂರಿನ ಆಸ್ಪತ್ರೆಗೆ ರವಾನಿಸಿದ್ದು ಸ್ಥಳಕ್ಕೆ ಸ್ಥಳೀಯ ಪೋಲಿಸರು ಭೇಟಿನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.