Saturday, March 7, 2026
Flats for sale
Homeಜಿಲ್ಲೆಕಾಸರಗೋಡು : ಬಾವಿಯಲ್ಲಿ ತಾಯಿ,ಮಗಳ ಮೃತದೇಹ ಪತ್ತೆ.

ಕಾಸರಗೋಡು : ಬಾವಿಯಲ್ಲಿ ತಾಯಿ,ಮಗಳ ಮೃತದೇಹ ಪತ್ತೆ.

ಕಾಸರಗೋಡು  : ಮಹಿಳೆ ಮತ್ತು ಆಕೆಯ ಮಗಳ ಮೃತದೇಹವು ಉದುಮ ಸಮೀಪದ ಕಲ್ನಾಡಿನ ಬಾವಿಯಲ್ಲಿ ಶುಕ್ರವಾರ ಪತ್ತೆಯಾಗಿದೆ.

ಮೃತರನ್ನು ಕಲ್ನಾಡ ಅರಮಂಗ ನಿವಾಸಿ ತಾಜುದ್ದೀನ್ ಎಂಬವರ ಪತ್ನಿ ರುಬೀನಾ (33) ಹಾಗೂ ಅವರ ಪುತ್ರಿ ಹನನ್ ಮರಿಯಾ (5) ಎಂದು ಗುರುತಿಸಲಾಗಿದೆ. ಇವರಿಬ್ಬರು ಪ್ರಾಣ ಕಳೆದುಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಮಧ್ಯಾಹ್ನ 12 ಗಂಟೆಯಿಂದ ತಾಯಿ ಮತ್ತು ಮಗಳು ನಾಪತ್ತೆಯಾಗಿದ್ದರು. ಅಕ್ಕಪಕ್ಕದವರು ಹಾಗೂ ಮನೆಯವರು ಹುಡುಕಾಡಿದಾಗ ಮನೆ ಸಮೀಪದ ಬಾವಿಯಲ್ಲಿ ಶವ ಪತ್ತೆಯಾಗಿದೆ. ಮೇಲ್ಪರಂಬ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹಗಳನ್ನು ಬಾವಿಯಿಂದ ಹೊರತೆಗೆದು ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಿದ್ದಾರೆ. ರುಬೀನಾ ಪತಿ ತಾಜುದ್ದೀನ್ ಗಲ್ಫ್‌ನಲ್ಲಿ ಉದ್ಯೋಗಿಯಾಗಿದ್ದಾರೆ ಎನ್ನಲಾಗಿದೆ. ಶಂಕಿತ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular