ಕಾಸರಗೋಡು : ಇನ್ನೇನು ಕೆಲವೇ ತಿಂಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು ಬಿಜೆಪಿ 195 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು ಅಳೆದೂ ತೂಗಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ.ಕೇರಳದ 20 ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಆದರೆ ಈ ಬಾರಿ ಮಹಿಳಾ ಕಾರ್ಯಕರ್ತೆ ಶಿಕ್ಷಕಿ, ಕನ್ನಡತಿ ಎಂ.ಎಲ್.ಅಶ್ವಿನಿ ಅವರಿಗೆ ಟಿಕೆಟ್ ಲಭಿಸಿದೆ.
ಗಡಿನಾಡು ಕೇರಳ ಅಂದರೆ LDF,UDF ಗಳ ಕೋಟೆ ಇಲ್ಲಿ ಪಕ್ಷಕ್ಕೆ ಸೋಲು ಗೆಲುವು ಇದ್ದದೇ,ಆದರೆ ಈ ಬಾರಿ ಯುವ ನಾಯಕಿ ಅಶ್ವಿನಿಯವರಿಗೆ ಟಿಕೆಟ್ ಲಭಿಸಿರುವುದು ಸಂತೋಷದ ವಿಷಯ ಎಂದು ಬಿಜೆಪಿ ಕಾರ್ಯಕರ್ತ ಚಂದ್ರಕಾಂತ್ ಶೆಟ್ಟಿ ಹರ್ಷ ವ್ಯಕ್ತಪಡಿಸಿದ್ದಾರೆ.ಈ ಬಾರಿ ಅಶ್ವಿನಿ ಅಕ್ಕನವರ ಪ್ರಚಾರ ಕಾರ್ಯದಲ್ಲಿ ಎಲ್ಲಾ ಯುವ ಹಾಗೂ ಮಹಿಳಾ ಕಾರ್ಯಕರ್ತರನ್ನು ಒಗ್ಗೂಡಿಸಿ ಅವರ ಗೆಲುವಿಗೆ ಶ್ರಮಿಸಲಿದ್ದಾರೆ ಎಂದು ಸಿ.ಕೆ ಶೆಟ್ಟೆಯವರು ತಿಳಿಸಿದ್ದಾರೆ.
ಕಳೆದ ಹಲವು ಸಮಯದಿಂದ ಕಾರ್ಯಕರ್ತರ ಜೊತೆ ಆಕ್ಟಿವ್ ಹಾಗಿದ್ದ ಅಶ್ವಿನಿ ಅವರು ಮಂಜೇಶ್ವರ ತಾಲೂಕು ಪಂಚಾಯತ್ ಕಡಂಬಾರ್ ಡಿವಿಷನ್ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು, ಮೊದಲ ಪ್ರಯತ್ನದಲ್ಲೇ ಜಯಗಳಿಸಿ,ಮಹಿಳಾ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯೆಯಾಗಿಯೂ ಕಾರ್ಯನಿರ್ವಹಿಸಿದ್ದರು.ಇದೀಗ ಕಾಸರಗೋಡು ಲೋಕಸಭಾ ಕ್ಷೇತ್ರದ ಅಭ್ಯರ್ತಿಯಾಗುವ ಮೂಲಕ ಮತ್ತೊಂದು ಸುತ್ತಿನ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.ಅಂತಿಮವಾಗಿ ಅಶ್ವಿನಿ ಹೆಸರನ್ನು ಪಕ್ಷ ಘೋಷಿಸಿದೆ. ಸಮರ್ಥ ನಾಯಕತ್ವವೇ ಅವರ ಆಯ್ಕೆಗೆ ಕಾರಣ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪಕ್ಷದ ಜಿಲ್ಲಾಧ್ಯಕ್ಷ ರವೀಶ್ ತಂತ್ರಿ ಅವರು ತಾನು ಟಿಕೆಟ್ ಆಕಾಂಕ್ಷಿ ಅಲ್ಲ ಎಂದು ಮೊದಲೇ ಹೇಳಿದ್ದು,ರಾಜ್ಯ ಬಿಜೆಪಿ ಪದಾಧಿಕಾರಿ ಪಿ.ಕೆ.ಕೃಷ್ಣದಾಸ್ ಮತ್ತು ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಪ್ರಮೀಳಾ ಸಿ. ನಾಯಕ್ ಟಿಕೆಟ್ ಆಕಾಂಕ್ಷಿಗಳಾಗಿದ್ದರು.ಅಂತಿಮವಾಗಿ ಅಶ್ವಿನಿ ಹೆಸರನ್ನು ಪಕ್ಷ ಘೋಷಿಸಿದೆ. ಸಮರ್ಥ ನಾಯಕತ್ವವೇ ಅವರ ಆಯ್ಕೆಗೆ ಕಾರಣ ಎಂದು ಪಕ್ಷದ ಮೂಲಗಳು ತಿಳಿಸಿವೆ.ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಕಾಸರಗೋಡು ಲೋಕಸಭಾ ಕ್ಷೇತ್ರದತ್ತ ಸಹಜವಾಗಿ ಕುತೂಹಲ ಮೂಡಿದೆ. ಕರ್ನಾಟಕದವರೂ ಇಲ್ಲಿನ ಫಲಿತಾಂಶದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾರೆ. ಹೀಗಾಗಿ ಬಿಜೆಪಿ ಈ ಭಾರೀ ಕಸರತ್ತು ನಡೆಸಿ ಅಭ್ಯರ್ಥಿಯ ಆಯ್ಕೆ ನಡೆಸಿದೆ. ಹೀಗಾಗಿ ಯಾರಿಗೆ ಮುಂದೆ ಗೆಲುವಾಗಲಿದೆ ಎಂದು ಕಾದುನೋಡಬೇಕಾಗಿದೆ


