Monday, February 2, 2026
Flats for sale
Homeಜಿಲ್ಲೆಕಾಸರಗೋಡು: ಕಾರು-ಬೈಕ್ ಡಿಕ್ಕಿ ಕಾಲೇಜು ವಿದ್ಯಾರ್ಥಿ ಸಾವು.

ಕಾಸರಗೋಡು: ಕಾರು-ಬೈಕ್ ಡಿಕ್ಕಿ ಕಾಲೇಜು ವಿದ್ಯಾರ್ಥಿ ಸಾವು.

ಕಾಸರಗೋಡು : ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಬೇಕಲ ಪೊಲೀಸ್ ಠಾಣಾ ವ್ಯಾಪ್ತಿಯ ಚೆಮ್ನಾಡ್ ಬಳಿ ಡಿ.18 ಸೋಮವಾರ ಮಧ್ಯಾಹ್ನ ನಡೆದಿದೆ.

ಚೆಮ್ನಾಡಿನ ಸಫ್ರಾಜುಲ್ ಅಮಾನ್ (20) ಮೃತ ವ್ಯಕ್ತಿ. ತೀವ್ರವಾಗಿ ಗಾಯಗೊಂಡ ಸಫ್ರಾಜುಲ್‌ನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತನ ಪ್ರಾಣಾಪಾಯದಿಂದ ಪಾರಾಗಲಿಲ್ಲ.

ಈತ ಮಂಗಳೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿಯಾಗಿದ್ದ.ಬೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular