ಕಾಬುಲ್ : ಕಳೆದ ವಾರ ತಾಲೀಬಾನ್ ಗಳ ಮೇಲೆ ಪಾಕ್ ಪಡೆಗಳು ನಡೆಸಿದ್ದ ದಾಳಿಗೆ ಪ್ರತೀಕಾರವಾಗಿ, ತಾಲಿಬಾನ್ ಪಡೆಗಳು ಶುಕ್ರವಾರ ರಾತ್ರಿ ಪಾಕಿಸ್ತಾನದ ಹಲವು ಕಡೆಗಳ ಮೇಲೆ ಪ್ರತಿ ದಾಳಿ ನಡೆಸಿದೆ.
ತಾಲೀಬಾನ್ ರಕ್ಷಣಾ ಇಲಾಖೆ ಇದನ್ನು ಖಚಿತಪಡಿಸಿದೆ. ಪಾಕಿಸ್ತಾನದಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಪಾಕಿಸ್ತಾನವನ್ನೇ ಗುರಿಯನ್ನಾಗಿಟ್ಟುಕೊಂಡು ದಾಳಿ ನಡೆಸಲಾಯಿತೋ ಅಥವಾ ನಿರ್ದಿಷ್ಟ ವ್ಯಕ್ತಿ ಅಥವಾ ಸಂಘಟನೆಗಳ ಮೇಲೆ ದಾಳಿ ನಡೆಸಲಾಗಿದೆಯೋ ಎನ್ನುವುದನ್ನು ಅದು ಖಚಿತಪಡಿಸಿಲ್ಲ. ಆದರೆ ಇವು ಆಫ್ಘಾನಿಸ್ತಾನದ ಮೇಲೆ ದಾಳಿ ನಡೆಸಿದವರು ಅವಿತಿಟ್ಟುಕೊಂಡಿದ್ದ ಸ್ಥಳಗಳಾಗಿವೆ ಎಂದು ಹೇಳಿದೆ.
ಎರಡೂ ದೇಶಗಳು ಮೊದಲಿ ನಿಂದಲೂ ಉತ್ತಮ ಸ್ನೇಹ ಹೊಂದಿದ್ದವು. ತಾಲೀಬಾನ್‌ಗೆ ಆಫ್ಘಾನಿಸ್ತಾನವನ್ನು ಗೆಲ್ಲುವ ಮೊದಲು ಪಾಕಿಸ್ತಾನವನ್ನು ಆಶ್ರಯತಾಣವನ್ನಾಗಿ ಮಾಡಿಕೊಂಡಿದ್ದವು. ಆದರೆ ಎರಡರ ನಡುವೆ ಗಡಿ ವಿಷಯದಲ್ಲಿ ಸಂಬಂಧ ಹಳಿಸಿದ್ದು, ಉದ್ವಿಗ್ನತೆ ಹೆಚ್ಚಾಗಿದೆ.
ಕಳೆದ ವಾರ ತಾಲಿಬಾನ್ ಮೇಲೆ ದಾಳಿ ನಡೆಸಿ 46 ಜನರನ್ನು ಕೊಂದಿದ್ದ ಪಾಕ್ ಸೇಡು ತೀರಿಸಿಕೊಳ್ಳಲು ಇದೀಗ ಆಫ್ಘನ್‌ನಿಂದ ಪಾಕ್ ಮೇಲೆ ಭಾರಿ ದಾಳಿ ನಡೆದಿದೆ.ಹಿಂದೆ ಆಪ್ತ ಸ್ನೇಹಿತರಾಗಿದ್ದ ರಾಷ್ಟçಗಳಲ್ಲೇ ಈಗ ಕಾಳಗ ಉಂಟಾಗಿದ್ದು ಪರಿಸ್ಥಿತಿ ಉದ್ವಿಗ್ನಗೊಂಡಿದೆ.


