ಕಾಂಗೋ : ಪೂರ್ವ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದ ಕಿವು ಸರೋವರದಲ್ಲಿ ದೋಣಿ ಮುಳುಗಿದ ನಂತರ ಕನಿಷ್ಠ 78 ಜನರು ಸಾವನ್ನಪ್ಪಿದ್ದಾರೆ ಎಂದು ಪ್ರಾಂತೀಯ ಗವರ್ನರ್ ರಾಯಿಟರ್ಸ್ಗೆ ತಿಳಿಸಿದ್ದಾರೆ.

ದಕ್ಷಿಣ ಕಿವು ಪ್ರಾಂತ್ಯದ ಗವರ್ನರ್ ಜೀನ್ ಜಾಕ್ವೆಸ್ ಪುರಿಸಿ ಗುರುವಾರ ಸುದ್ದಿ ಸಂಸ್ಥೆಗೆ ತಿಳಿಸಿದ್ದು , ದೋಣಿ ಉರುಳುವ ಮೊದಲು 278 ಜನರು ಅದರಲ್ಲಿದ್ದುಕನಿಷ್ಠ 58 ಜನರನ್ನು ರಕ್ಷಿಸಲಾಗಿದೆ, “ನಿಖರವಾದ ಸಂಖ್ಯೆಗಳನ್ನು ಪಡೆಯಲು ಕನಿಷ್ಠ ಮೂರು ದಿನಗಳನ್ನು ತೆಗೆದುಕೊಳ್ಳುತ್ತದೆ, ಏಕೆಂದರೆ ಎಲ್ಲಾ ದೇಹಗಳು ಇನ್ನೂ ಪತ್ತೆಯಾಗಿಲ್ಲ” ಎಂದು ಪುರಿಸಿ ತಿಳಿಸಿದ್ದಾರೆ .
ದಕ್ಷಿಣ ಕಿವು ಪ್ರಾಂತ್ಯದ ಮಿನೋವಾ ಪಟ್ಟಣದಿಂದ ಬಂದಿದ್ದ ದೋಣಿ ಗುರುವಾರ ಬೆಳಿಗ್ಗೆ ಗೋಮಾ ತೀರದಲ್ಲಿ ತನ್ನ ಗಮ್ಯಸ್ಥಾನದಿಂದ ಕೇವಲ 100 ಮೀಟರ್ (328 ಅಡಿ) ದೂರದಲ್ಲಿ ಮುಳುಗಿದೆ.ಈ ಭಯಾನಕ ದೃಶ್ಯ ವಿಡಿಯೋದಲ್ಲಿ ಸೀರೆಯಾಗಿದ್ದು ಹಲವರು ಗೋವಾದಲ್ಲಿ ನಡೆದ ಘಟನೆಯೆಂದು ಬಣ್ಣಿಸಿ wಟ್ಸ್ ಅಪ್,ಫೇಸ್ಬುಕ್ ನಲ್ಲಿ ಫಾರ್ವರ್ಡ್ ಮಾಡುತ್ತಿದ್ದಾರೆ.