Saturday, March 14, 2026
Flats for sale
Homeರಾಜ್ಯಕಲಬುರ್ಗಿ : ಬುರ್ಖಾ ಧರಿಸಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿನಿಯೊಬ್ಬಳನ್ನು ಬಸ್‌ನಿಂದ ಕೆಳಗಿಳಿಸುವಂತೆ ಒತ್ತಾಯಿಸಿದ : ಕೆಕೆಆರ್‌ಟಿಸಿ...

ಕಲಬುರ್ಗಿ : ಬುರ್ಖಾ ಧರಿಸಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿನಿಯೊಬ್ಬಳನ್ನು ಬಸ್‌ನಿಂದ ಕೆಳಗಿಳಿಸುವಂತೆ ಒತ್ತಾಯಿಸಿದ : ಕೆಕೆಆರ್‌ಟಿಸಿ ಬಸ್ ಚಾಲಕ.

ಕಲಬುರ್ಗಿ : ಕೆಕೆಆರ್‌ಟಿಸಿ ಬಸ್ ಚಾಲಕನೊಬ್ಬ ಬುರ್ಖಾ ಧರಿಸಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿನಿಯೊಬ್ಬಳನ್ನು ಬಸ್‌ನಿಂದ ಕೆಳಗಿಳಿಸುವಂತೆ ಒತ್ತಾಯಿಸಿದ ಘಟನೆ ಮಂಗಳವಾರ ಇಲ್ಲಿಗೆ ಸಮೀಪದ ಕಮಲಾಪುರದಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಬಸ್ ಚಾಲಕನ ವಿರುದ್ಧ ಶಾಲಾ ಮುಖ್ಯೋಪಾಧ್ಯಾಯರು ದೂರು ನೀಡಿದ್ದಾರೆ.

ನೀನು ಮುಸಲ್ಮಾನಳಾ ಎಂದು ಪ್ರಶ್ನಿಸಿ ಹೆಸರು ಹೇಳುವಂತೆ ಚಾಲಕ ಕೇಳಿದ್ದಾರೆ. ಆದರೆ ನಾವು ಹೆಸರು ಹೇಳಲಿಲ್ಲ. ಈ ವೇಳೆ ಚಾಲಕ, ನೀನು ಮುಸಲ್ಮಾನರಾಗಿದ್ದರೆ ಮೊದಲು ಬುರ್ಖಾ ಹಾಕಿಕೊಂಡು ಮಾತನಾಡು ಎಂದು ಹೇಳಿದ್ದಾರೆ. ಅದಾಗ್ಯೂ, ಬಸ್ ಹತ್ತಲು ಯತ್ನಿಸಿದಾಗ ಹತ್ತಲು ಬಿಡಲಿಲ್ಲ ಎಂದು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಸಂಜೆ ಶಾಲೆಯಿಂದ ಮನೆಗೆ ಹಿಂದಿರುಗುವಾಗ ಹಲವಾರು ವಿದ್ಯಾರ್ಥಿನಿಯರು ಬಸವಕಲ್ಯಾಣ ಮತ್ತು ಕಲಬುರಗಿ ನಡುವೆ ಸಂಚರಿಸುವ ಸರ್ಕಾರಿ ಬಸ್ ಸಂಖ್ಯೆ KA-38/F1074 ಅನ್ನು ಹತ್ತಲು ಪ್ರಯತ್ನಿಸಿದರು. ವಿದ್ಯಾರ್ಥಿನಿ ಮುಸ್ಲಿಂ ಸಮುದಾಯದವಳು ಎಂಬ ಕಾರಣಕ್ಕೆ ಬಸ್‌ ಹತ್ತಲು ಬಯಸಿದರೆ ಹಿಜಾಬ್‌ ಧರಿಸಿ ಎಂದು ಬಸ್‌ ಚಾಲಕ ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ.

ವಿದ್ಯಾರ್ಥಿನಿಯರ ಜೊತೆಗಿದ್ದ ಶಿಕ್ಷಕರು ಬಸ್ಸಿನಲ್ಲಿ ಪ್ರಯಾಣಿಸಲು ಅವಕಾಶ ನೀಡುವಂತೆ ಬಸ್ ಚಾಲಕನಿಗೆ ಮನವಿ ಮಾಡಿದರು. ಆದರೆ, ಚಾಲಕ ಶಿಕ್ಷಕರೊಂದಿಗೆ ವಾಗ್ವಾದಕ್ಕಿಳಿದಿದ್ದು, ಆತನ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿದ್ದಾನೆ. ನಂತರ ಶಿಕ್ಷಕರು ಶಾಲಾ ಮುಖ್ಯೋಪಾಧ್ಯಾಯರಿಗೆ ದೂರು ನೀಡಿದ್ದು, ಅವರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular