ಕಲಬುರ್ಗಿ ; ಮದುವೆಗೆ ನಿರಾಕರಿಸಿದ್ದಕ್ಕೆ ಕಲಬುರಗಿಯಲ್ಲಿ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕಲಬುರಗಿ ನಗರ ಹೊರವಲಯದ ಯಲ್ಲಾಲಿಂಗ್ ಕಾಲೋನಿಯಲ್ಲಿ ಬಾಡಿಗೆ ರೂಂನಲ್ಲಿ ವಾಸವಾಗಿದ್ದ ಆಳಂದ ತಾಲ್ಲುಕಿನ ಕೌಲಗಾ ಗ್ರಾಮದ ಯುವತಿ ಪುಷ್ಪಾ(26) ನಿನ್ನೆ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
UPSC ಪರಿಕ್ಷಾ ಸಿದ್ದತೆಗೆ ಕಲಬುರಗಿಯಲ್ಲಿದ್ದು ವ್ಯಾಸಾಂಗ ಮಾಡುತ್ತಿದ್ದು,ನಾಲ್ಕು ವರ್ಷದಿಂದ ಕಿರಣ್ ಎಂಬ ಯುವಕನ ಜತೆ ಪ್ರೀತಿಸುತ್ತಿದ್ದರು ಕಿರಣ್ ಹಾಗೂ ಪುಷ್ಪಾ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು ಕೆಲ ದಿನಗಳಿಂದ ಮದುವೆ ಮಾಡಿಕೊಳ್ಳುವಂತೆ ಪುಷ್ಪಾ ಕಿರಣ್ ಗೆ ಒತ್ತಾಯ ಮಾಡುತ್ತಿದ್ದಳು.ಅನ್ಯ ಜಾತಿ ಹಿನ್ನೆಲೆ ಯುವತಿ ಮದುವೆಗೆ ಕಿರಣ್ ಮನೆಯವರು ನಿರಾಕರಿಸಿದ್ದರು. ಹೀಗಾಗಿ ಕಿರಣ್ ಕೂಡ ಈಗಲೇ ಮದುವೆ ಬೇಡವೆಂದು ಪುಷ್ಪಾಗೆ ಸಮಾಧಾನ ಮಾಡಿದ್ದ. ಆದರೆ ಇದರಿಂದ ಮನನೊಂದ ಪುಷ್ಪಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ತನಿಖೆ ನಡೆಯುತ್ತಿದೆ


