Sunday, March 15, 2026
Flats for sale
Homeರಾಜ್ಯಕಲಬುರಗಿ : ಹಣಕ್ಕಾಗಿ ಸೆಕೆಂಡ್ ಹ್ಯಾಂಡ್ ಕಾರು ಡೀಲರ್ ನ್ನು ಬೆತ್ತಲೆ ಮಾಡಿ ಮರ್ಮಾಂಗಕ್ಕೆ ವಿದ್ಯುತ್...

ಕಲಬುರಗಿ : ಹಣಕ್ಕಾಗಿ ಸೆಕೆಂಡ್ ಹ್ಯಾಂಡ್ ಕಾರು ಡೀಲರ್ ನ್ನು ಬೆತ್ತಲೆ ಮಾಡಿ ಮರ್ಮಾಂಗಕ್ಕೆ ವಿದ್ಯುತ್ ಶಾಕ್ ಕೊಟ್ಟು ಟಾರ್ಚರ್ ನೀಡಿದ ದುಷ್ಕರ್ಮಿಗಳು.!

ಕಲಬುರಗಿ : ಸೆಕೆಂಡ್ ಹ್ಯಾಂಡ್ ಕಾರ್ ತೋರಿಸಲು ಬಂದ ಡೀಲರ್ ಗಳನ್ನೂ ಕೂಡಿಹಾಕಿ ಬೆತ್ತಲೆ ಮಾಡಿ ಮರ್ಮಾಂಗಕ್ಕೆ ವಿದ್ಯುತ್ ಶಾಕ್ ಕೊಟ್ಟು ಟಾರ್ಚರ್ ನೀಡಿದ ಘಟನೆ ಕಬಲಬುರಗಿಯಲ್ಲಿ ವರದಿಯಾಗಿದೆ.

ರಮೇಶ್ ಎಂಬಾತನಿಗೆ ಸೆಕೆಂಡ್ ಹ್ಯಾಂಡ್ ಕಾರು ತೋರಿಸಲು ಬಂದಾಗ ಈ ಘಟನೆ ನಡೆದಿದ್ದು ಹಣಕ್ಕಾಗಿ ಬೇಡಿಕೆ ಇಟ್ಟು ಸೆಕೆಂಡ್ ಹ್ಯಾಂಡ್ ಕಾರು ವ್ಯಾಪರಿ ಮೇಲೆ ಹಲ್ಲೆ ನಡೆಸಿ ಸೆಕೆಂಡ್ ಹ್ಯಾಂಡ್ ಕಾರು ವಾಪಾರಿಯನ್ನ ಬೆತ್ತಲೆ ಮಾಡಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ .

ಸೆಕೆಂಡ್ ಹ್ಯಾಂಡ್ ಕಾರು ವ್ಯಾಪರಿ ಅರ್ಜುನ್ ಮಡಿವಾಳ ಸೇರಿ ಮೂವರಿಗೆ ಟಾರ್ಚರ್ ನೀಡಿದ್ದು ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ದೇವನೂರ ಗ್ರಾಮದ ನಿವಾಸಿಗಳೆಂದು ತಿಳಿದುಬಂದಿದೆ.

ಇಮ್ರಾನ್ ಪಟೇಲ್ ,ಮಹಮ್ಮದ್ ಮತೀನ್ ಹಾಗೂ ಹಲವಾರು ಸೇರಿ ಕಲಬುರಗಿ ನಗರದ ಹಾಗರಗಾ ಕ್ರಾಸ್ ಬಳಿಯ ಮನೆಯಲ್ಲಿ ಕೂಡಿ ಹಾಕಿದ್ದು ದುಷ್ಕರ್ಮಿಗಳು ಹಣಕ್ಕಾಗಿ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.

ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಹಲ್ಲೆ ಮಾಡಿದ ಏಳು ಆರೋಪಿಗಳ ಬಂಧಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular