ಕಲಬುರಗಿ : ವೈನ್‌ಶಾಪ್ ಒಂದರ ಮೇಲ್ಛಾವಣಿಯ ಪತ್ರಾಗಳನ್ನು ಎತ್ತಿ ಒಳಗೆ ಇಳಿದು ಹಣದ ಜೊತೆಗೆ ಹೆಂಡದ ಬಾಟಲಿಗಳನ್ನು ದೋಚಿಕೊಂಡು ಹೋಗಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ಶಹಬಜಾರ್ ನಾಕಾ ಬಸ್ಸ್ಟ್ಯಾಂಡ್ ಹತ್ತಿರವಿರುವ ರಾಜ ಮಹಲ್ ಲಿಕ್ಕರ್ಸ್ ಪ್ಯಾರಾಡೈಸ್ ವೈನ್‌ಶಾಪ್‌ನ ಮೇಲ್ಛಾವಣಿಯ ಪತ್ರಾಗಳನ್ನು ಎತ್ತಿ ಒಳಗೆ ಇಳಿದಿರುವ ಕಳ್ಳ ಕ್ಯಾಶ್ ಕೌಂಟರ್‌ನ ಗಲ್ಲಾದಲ್ಲಿ ಇಟ್ಟಿದ್ದ 10, 20, 50 ರೂ.ನೋಟುಗಳು ಮತ್ತು ಚಿಲ್ಲರೆ ಹಣ ಸೇರಿ 17538 ರೂ.ನಗದು ಮತ್ತು 1040 ರೂ., 450, 180, 200, 300 ಮೌಲ್ಯದ ವಿವಿಧ ನಮೂನೆಯ ಮದ್ಯದ ಬಾಟಲ್‌ಗಳು ಸೇರಿ 19,528 ರೂ. ಮೌಲ್ಯದ ಹಣ ಮತ್ತು ಮದ್ಯದ ಬಾಟಲ್‌ಗಳನ್ನು ಕಳವು ಮಾಡಿಕೊಂಡು ಹೋಗಿದ್ದಾನೆ.
ಈ ಸಂಬಂಧ ವೈನ್‌ಶಾಪ್ ಮ್ಯಾನೇಜರ್ ಶರಣು ಗುತ್ತೇದಾರ ಅವರು ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.