Saturday, March 14, 2026
Flats for sale
Homeರಾಜಕೀಯಕಲಬುರಗಿ : ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಸಿಎಂ ಸ್ಥಾನ ನೀಡಬೇಕು : ಶ್ರೀ ರಂಭಾಪುರಿ...

ಕಲಬುರಗಿ : ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಸಿಎಂ ಸ್ಥಾನ ನೀಡಬೇಕು : ಶ್ರೀ ರಂಭಾಪುರಿ ಡಾ.ವೀರ‌ಸೋಮೇಶ್ವರ ಜಗದ್ಗುರು.

ಕಲಬುರಗಿ : ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ದಿನದಿಂದ ದಿನಕ್ಕೆ ಬಣ ರಾಜಕೀಯ ಸೃಷ್ಟಿಯಾಗಿರುವುದು ಅಂತೂ ನಿಜವಾದ ಮಾತು.ಕಾಂಗ್ರೆಸ್ ಸರಕಾರದಲ್ಲಿ ಯಾವುದು ಸರಿಯಿಲ್ಲ ಎಂದು ಇದೀಗ ಜನಸಾಮನ್ಯರಿಗೆ ತಿಳಿಯುತ್ತಾಯಿದೆ. ರಾಜ್ಯದಲ್ಲಿ‌ಸಿಎಂ ಬದಲಾವಣೆ ಕೂಗೂ ಕೇಳಿ ಬರುತ್ತಿದ್ದು ಒಂದೊಂದಾಗಿ ಸಮುದಾಯದ ಸ್ವಾಮೀಜಿಗಳು ದಿನಕ್ಕೊಂದು ಹೇಳಿಕೆ ಕೊಡುತ್ತಿರುವುದು ಕಂಡುಬಂದಿದೆ.

ರಾಜ್ಯದಲ್ಲಿ ವೀರೇಶ್ವರ ಲಿಂಗಾಯತ ರಲ್ಲಿ ವೀರೆಂದ್ರ ಪಾಟೀಲ್ ಬಿಟ್ಟರೆ, ಬೇರೆ ಯಾರು ಸಿಎಂ ಆಗಿಲ್ಲಾ,ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರಿಗೆ ಸಿಎಂ ಸ್ಥಾನ ಕೊಡಿ ಎಂದು ರಂಭಾಪುರಿ‌ಶ್ರೀಗಳು ಶಾಮನೂರು‌ ಶಿವಶಂಕರಪ್ಪ ಪರ ಬ್ಯಾಟಿಂಗ್ ಮಾಡಿದ್ದಾರೆ. ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯದಲ್ಲಿ ಶಾಮನೂರು ಶಿವಶಂಕರಪ್ಪ, ಎಂ.ಬಿ.ಪಾಟೀಲ್, ಈಶ್ವರ್ ಖಂಡ್ರೆ ಅವರು ಪ್ರಭಾವಿ ಲಿಂಗಾಯತ ನಾಯಕರುಗಳಿದ್ದಾರೆ. ಇವರಲ್ಲಿ ಯಾರಿಗಾದ್ರು ಒಬ್ಬರಿಗೆ ಜವಾಬ್ದಾರಿ ಕೊಟ್ಟರೆ ರಾಜ್ಯದಲ್ಲಿ ಇನ್ನು ಉತ್ತಮ ಆಡಳಿತ ನಡೆಯುತ್ತೆ ಎಂದು ಹೇಳಿದ್ದಾರೆ.

ರಾಜಕೀಯ ವಿಚಾರದಲ್ಲಿ ಹೆಚ್ಚು ಮಾತನಾಡಲು ಇಚ್ಚೆ ಪಡೊಲ್ಲಾ. ಯಾವ ಕಾಲದಲ್ಲಿ ಏನು ಆಗಬೇಕು ಅದು ಆಗುತ್ತೆ.. ವೀರಶೈವ ಲಿಂಗಾಯತ ಸಮುದಾಯಕ್ಕೆ ಸಿಎಂ ಸ್ಥಾನ ಕೊಟ್ಟರೂ ತಪ್ಪಿಲ್ಲಾ ಬಹುಸಂಖ್ಯಾತ ವೀರಶೈವ ಲಿಂಗಾಯ ಸಮುದಾಯ‌ ಕಾಂಗ್ರೇಸ್ ಪಕ್ಷಕ್ಕೆ ಬೆಂ‌ಬಲ ಕೊಟ್ಟಿದೆ,ಲಿಂಗಾಯತ ಸಮುದಾಯ ಬೆಂಬಲ‌ಕೊಟ್ಟಿದ್ದಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ,ಲಿಂಗಾಯ ಸಮುದಾಯಕ್ಕೆ ಸಿಎಂ ಸ್ಥಾನ ಕೊಟ್ಟರೆ ರಾಜ್ಯದಲ್ಲಿ ಒಳ್ಳೆ ಅಭಿವೃದ್ಧಿ ಯಾಗುತ್ತೆ ,ಸಿಎಂ ಸ್ಥಾನ ಅಲ್ಲದಿದ್ದರೂ ಡಿಸಿಎಂ ಹುದ್ದೆ ಕೊಡಬೇಕು ಎಂದು ಶ್ರೀಗಳು ಈ ನಾಯಕರ ಪರ ಮಾತನಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular