ಕಲಬುರಗಿ : ಜಿಲ್ಲೆಯಾ ಜೇವರ್ಗಿ ತಾಲ್ಲೂಕಿನ ಮಂದೆವಾಲ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ )ಜೇವರ್ಗಿ ತಾಲೂಕ ಘಟಕದ ವತಿಯಿಂದ ರಾಜಶೇಖರ್ ಬಂಟನೂರ್ ನೇತೃತ್ವದಲ್ಲಿ ಕನ್ನಡಿಗರ ಉತ್ಸವ ಕಾರ್ಯಕ್ರಮದಲ್ಲಿ ಶ್ರೀ ಡಾ||ಶಿವಾನಂದ ಮಹಾಸ್ವಾಮಿಗಳು ದಾಸೋಹ ಮಠ ಸೂನ್ನ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಶ್ರೀ ದೊಡ್ಡಪ್ಪಗೌಡ ಎಸ್ ಪಾಟೀಲ್ ನರಿಬೋಳ ಮಾಜಿ ಶಾಸಕರು ಜೇವರ್ಗಿ ರಾಜ್ಯ ಜೆಡಿಎಸ್ ಕೋರ್ ಕಮಿಟಿ ಸದಸ್ಯರು ಕಾರ್ಯಕ್ರಮದ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಕಾರ್ಯಕ್ರಮ ಕುರಿತು ಮಾತನಾಡಿದ ಸೊನ್ನ ಶ್ರೀಗಳು ನಾಡ ನುಡಿ ರಕ್ಷಣೆಗಾಗಿ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ಇಂತಹ ಕಾರ್ಯ ಮಾಡುತ್ತಿರುವದು ಶ್ಲಾಘನೀಯ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಿ ಕನ್ನಡ ಭಾಷೆ ನಾಡು ನುಡಿಗಾಗಿ ದುಡಿದವರನ್ನು ಗುರುತಿಸಿ ಸತ್ಕಾರ ಮಾಡುವುದು ಒಳ್ಳೆದು. ಇದೇ ರೀತಿಯಾಗಿ ರಾಜಶೇಖರ್ ಬಂಟನೂರು ಜನಸೇವೆ ಮಾಡಲಿ ಎಂದರು.
ಆದರೆ ಈ ಕಾರ್ಯಕ್ರಮದಲ್ಲಿ ಅಶ್ಲೀಲವಾಗಿ ನೃತ್ಯ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಆಕ್ಷೇಪ ವ್ಯಕ್ತ ಪಡಿಸಲಾಗಿದ್ದು ಅದಕ್ಕೆ ಪ್ರತಿಕ್ರಿಯ ನೀಡಿದ ಆಯೋಜಕರು ನಮ್ಮ ಕಾರ್ಯಕ್ರಮದಲ್ಲಿ ಯಾವುದೇ ಅಶ್ಲೀಲ ನೃತ್ಯಕ್ಕೆ ಅವಕಾಶ ಕೊಟ್ಟಿಲ್ಲ ಉತ್ತರ ಕರ್ನಾಟಕ ಜಾನಪದ ಕಲೆ ಉಳಿಸಿ ಬೆಳಸಬೇಕು ಎಂದು ಕಲಾವಿದರನ್ನು ಕರಿಸಲಾಗಿತ್ತು ಅವರು ಹಾಡಿನ ಜೊತೆ ನೃತ್ಯ ಸಂಯೋಜನೆ ಮಾಡಿ ತಮ್ಮಲ್ಲಿ ಇರೋ ಕಲೆಯನ್ನು ವ್ಯಕ್ತಪಡಿಸಿದ್ದಾರೆ ಅದಕ್ಕೆ ದಯವಿಟ್ಟು ಯಾರು ಅನ್ಯತೆ ಬಾವಿಸಬಾರದು ಎಂದು ರಾಜಶೇಖರ್ ಭಂಟನೂರ ಹೇಳಿದರು