Thursday, March 12, 2026
Flats for sale
Homeಕ್ರೈಂಕಲಬುರಗಿ ; ಬುರ್ಖಾ ಧರಿಸದಿದ್ದರೆ ಬಸ್ ಹತ್ತಲು ಬಿಡುವುದಿಲ್ಲವೆಂದ ಚಾಲಕ ಸೇವೆಯಿಂದ ಅಮಾನತು.

ಕಲಬುರಗಿ ; ಬುರ್ಖಾ ಧರಿಸದಿದ್ದರೆ ಬಸ್ ಹತ್ತಲು ಬಿಡುವುದಿಲ್ಲವೆಂದ ಚಾಲಕ ಸೇವೆಯಿಂದ ಅಮಾನತು.

ಕಲಬುರ್ಗಿ : ಕೆಕೆಆರ್‌ಟಿಸಿ ಬಸ್ ಚಾಲಕನೊಬ್ಬ ಬುರ್ಖಾ ಧರಿಸಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿನಿಯೊಬ್ಬಳನ್ನು ಬಸ್‌ನಿಂದ ಕೆಳಗಿಳಿಸುವಂತೆ ಒತ್ತಾಯಿಸಿದ ಘಟನೆ ಮಂಗಳವಾರ ಸಮೀಪದ ಕಮಲಾಪುರದಲ್ಲಿ ನಡೆದಿತ್ತು . ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆದ ಬಳಿಕ .ಬಸ್ ಚಾಲಕನ ವಿರುದ್ಧ ಶಾಲಾ ಮುಖ್ಯೋಪಾಧ್ಯಾಯರು ದೂರು ನೀಡಿದ್ದರು.

ನೀನು ಮುಸಲ್ಮಾನಳಾ ಎಂದು ಪ್ರಶ್ನಿಸಿ ಹೆಸರು ಹೇಳುವಂತೆ ಚಾಲಕ ಕೇಳಿದ್ದಾರೆ. ಆದರೆ ನಾವು ಹೆಸರು ಹೇಳಲಿಲ್ಲ. ಈ ವೇಳೆ ಚಾಲಕ, ನೀನು ಮುಸಲ್ಮಾನರಾಗಿದ್ದರೆ ಮೊದಲು ಬುರ್ಖಾ ಹಾಕಿಕೊಂಡು ಮಾತನಾಡು ಎಂದು ಹೇಳಿದ್ದಾರೆ. ಅದಾಗ್ಯೂ, ಬಸ್ ಹತ್ತಲು ಯತ್ನಿಸಿದಾಗ ಹತ್ತಲು ಬಿಡಲಿಲ್ಲ ಎಂದು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದರು.

ಬುರ್ಖಾ ಧರಿಸದಿದ್ದರೆ ಬಸ್ ಹತ್ತಲು ಬಿಡುವುದಿಲ್ಲ ಎಂದು ಮುಸ್ಲಿಂ ವಿಧ್ಯಾರ್ಥಿನಿಗೆ ತಾಕೀತು ಮಾಡಿದ್ದ ಬಸವ ಕಲ್ಯಾಣ ಡಿಪೊದ ಬಸ್ ಚಾಲಕ ಮಹಿಬೂಬ್ ಪಟೇಲ್ ಎಂಬವನನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬೀದರ್ ವಿಭಾಗೀಯ ನಿಯಂತ್ರಣಾಧಿಕಾರಿ ಸಿ.ಎಸ್ ಪುಲೇಕರ್ ರವರು ಚಾಲಕನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ.

ಊರಿಗೆ ತೆರಳಲು ಬಸ್ ಹತ್ತಲು ಬಂದ ಮುಸ್ಲಿಂ ವಿಧ್ಯಾರ್ಥಿನಿ ಹಿಜಾಬ್ ಧರಿಸಿದ್ದಳು.ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಚಾಲಕ ಮೆಹಬೂಬ್ ಪಟೇಲ್ ‘ ಬುರ್ಖಾ ಏಕೆ ಹಾಕಿಕೊಂಡಿಲ್ಲವೆಂದು’ ಗದರಿಸಿದ್ದು ಹಾಗೂ ವಿಧ್ಯಾರ್ಥಿಯನ್ನು ಬಸ್ ನಿಂದ ಹೊರಗೆ ಎಳೆದಿದ್ದನು.ಈ ಕುರಿತು ಕಮಲಾಪುರ ಸರಕಾರಿ ಕನ್ಯಾ ಪ್ರೌಡಶಾಲೆಯ ಮುಖ್ಯ ಶಿಕ್ಷಕ ಅಂಬಾದಾಸ ಜಮಾದಾರ ಅವರು ಪೋಲಿಸರಿಗೆ ಚಾಲಕ ಮಹಿಬೂಬ್ ವಿರುದ್ಧ ದೂರು ನೀಡಿದ್ದರು. ದೂರನ್ನು ಆದರಿಸಿ ಪೋಲಿಸರು ಎಫ್ಐಆರ್ ದಾಖಲಿಸಿಕೊಂಡಿದ್ದರು. ಈ ವೀಡಿಯೋ ವೈರಲ್ ಆಗಿದ್ದು ,ಘಟನೆ ಬೆನ್ನಲ್ಲೇ ಚಾಲಕನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular