ಕಲಬುರಗಿ : ಕಲಬುರಗಿ ಜಿಲ್ಲೆಯ ಜೀಮ್ಸ್ ಆಸ್ಪತ್ರೆಯಲ್ಲಿ ಲಿಫ್ಟ್ ಕೈಕೊಟ್ಟು ಒಂಬತ್ತು ಜನ ಸಿಬ್ಬಂದಿ ಲಾಕ್ ಆದ ಘಟನೆ ನಡೆದಿದೆ.
ಆಸ್ಪತ್ರೆಯ ಮೂರನೇ ಮಹಡಿಯಲ್ಲಿ ತಾಂತ್ರಿಕ ತೊಂದರೆಯಿಂದ ಏಕಾಏಕಿ ಲಿಫ್ಟ್ ಸ್ಥಗಿತಗೊಂಡಿದ್ದು ಆಸ್ಪತ್ರೆ ಸಿಬ್ಬಂದಿಗಳು ಸೇರಿ 9 ಜನ ಸಿಲುಕಿ ಉಸಿರಾಟ ತೊಂದರೆ ಅನುಭವಿಸಿದ್ದಾರೆ. ಒಂದು ಗಂಟೆಗೂ ಅಧಿಕ ಲಿಫ್ಟಿನಲ್ಲಿ ಸಿಲುಕಿಕೊಂಡು ಸಿಬ್ಬಂದಿಗಳು ಒದ್ದಾಡಿದ್ದು ಡ್ರಿಲ್ಲಿಂಗ್ ಮಷೀನ್ ನಿಂದ ಆಸ್ಪತ್ರೆಯ ಗೋಡೆ ಒಡೆದು 9 ಜನರ ರಕ್ಷಣೆ ಮಾಡಲಾಗಿದೆ.