ಕಲಬುರಗಿ : ಪ್ರೀತಿ ಅಂದರೆ ಇಂಗೆನೇ ಯಾವಾಗ ಏನಾಗೋತ್ತೋ ಗೊತ್ತಾಗಲ್ಲ ,ಈ ಅಪ್ರಾಪ್ತ ವಯಸ್ಕರಂತೂ ಪ್ರೀತಿಯಲ್ಲಿ ಮುಳುಗೋಗ್ಬಿಡ್ತಾರೆ .ಚಿತ್ತಾಪುರ ತಾಲೂಕಿನ ನಾಲವಾರ ಹೋಬಳಿ ವ್ಯಾಪ್ತಿಯ ರಾಂಪುರಹಳ್ಳಿ ಗ್ರಾಮದಲ್ಲಿ ಅಪ್ರಾಪ್ತ ಪ್ರೇಮಿಗಳಿಬ್ಬರು ಕೀಟನಾಶಕ ಸೇವಿಸಿ ಮಂಗಳವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆ ಬುಧವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ತರಕಸಪೇಟ್ ಗ್ರಾಮ ಸಮೀಪದ ಚೌಕಂಡಿ ತಾಂಡಾದ ಯಲ್ಲಮ್ಮ ದೇವಸ್ಥಾನದ ಹತ್ತಿರ ಅಪ್ರಾಪ್ತ ವಯಸ್ಸಿನ ಪ್ರೇಮಿಗಳು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಾAಪೂರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8 ನೇ ತರಗತಿ ಓದುತ್ತಿದ್ದ ರಾಧಿಕಾ ಮೆತ್ತನ್ (15), ಯಾದಗಿರಿ ನಗರದಲ್ಲಿ ಐಟಿಐ ಓದುತ್ತಿರುವ ಕೊಲ್ಲೂರು ಗ್ರಾಮದ ಆಕಾಶ್ ಭೋವಿ (18), ಮೃತರು. ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ವಿಷಸೇವನೆ ಬಳಿಕ ತನ್ನ ತಾಯಿಗೆ ಕರೆ ಮಾಡಿದ ಆಕಾಶ್ ತಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿ ಕರೆ ಕಟ್ ಮಾಡಿದ್ದ ಎನ್ನಲಾಗಿದೆ.
ಗಾಬರಿಗೊಂಡ ಪೋಷಕರು ಹುಡುಕಲು ಪ್ರಾರಂಭಿಸಿದ್ದಾರೆ.ದೇವಸ್ಥಾನ ಹತ್ತಿರ ಇಬ್ಬರು ಬಿದ್ದು ಒದ್ದಾಡುತ್ತಿದ್ದುದು ಗಮನಕ್ಕೆ ಬಂದಿದೆ. ನಂತರ ಕೊಲ್ಲೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.
ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ಕರೆದುಕೊಂಡು ಹೋಗುವಾಗ ಅಸುನೀಗಿದ್ದಾರೆ. ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


