ಕಲಬುರಗಿ : ಕಡಿಮೆ ರಕ್ತದೊತ್ತಡದಿಂದ ಹೃದಯಾಘಾತ ಉಂಟಾಗಿ ಕರ್ತವ್ಯನಿರತ ಕಾರ್ಮಿಕನೊಬ್ಬ ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕೋಡ್ಲಾ ಗ್ರಾಮದ ಶ್ರೀ ಸಿಮೆಂಟ್ ಫ್ಯಾಕ್ಟರಿಯಲ್ಲಿ ಬೆಳಕಿಗೆ ಬಂದಿದೆ.
ಆದರೆ ಮೃತದೇಹವನ್ನು ಧಾರ್ಮಿಕ ವಿಧಿ ವಿಧಾನ ಮೂಲಕ ಶವಸಂಸ್ಕಾರ ಮಾಡುವ ಬದಲು ಸಹೋದ್ಯೋಗಿಗಳು ನಡುರಸ್ತೆಯಲ್ಲಿ ಎಳೆದುಕೊಂಡು ಹೋಗಿ ಅಮಾನವೀಯವಾಗಿ ನಡೆಸಿಕೊಂಡ ರೀತಿ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ, ಆಕ್ರೋಶ ವ್ಯಕ್ತವಾಗಿದೆ. ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರವಾಗಿದೆ.
ಬಿಹಾರ ರಾಜ್ಯದ ಮೂಲದ ಚಂದನಸಿಂಗ್ (35) ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ. ಸಂಪ್ರದಾಯ ಅನುಸಾರ ಅಂತಿಮ ಶವಸಂಸ್ಕಾರ ಮಾಡದೆ ಶ್ವಾನದ ರೀತಿ ಎಳೆದುಕೊಂಡು ಹೋಗಿರುವ ವಿಡಿಯೋ ವೈರಲ್ ಆಗಿದೆ. ಜೀವಂತವಾಗಿದ್ದಾಗ ಕಾರ್ಮಿಕರಂತೆ ನಡೆಸಿಕೊಳ್ಳದ ಶ್ರೀ ಸಿಮೆಂಟ್ ಆಡಳಿತ ಮಂಡಳಿಯು ಕೊನೆಪಕ್ಷ ಮೃತಪಟ್ಟ ಮೇಲೂ ಸಂಪ್ರದಾಯ ಅನುಸಾರ ಅಂತ್ಯಸಂಸ್ಕಾರ ನಡೆಸುವ ಜವಾಬ್ದಾರಿ ಮರೆತಿರುವುದು ನಾಚಿಕೆಗೇಡಿನ ಸಂಗತಿ ಎಂದು ಸ್ಥಳೀಯರು ಆಡಳಿತ ಮಂಡಳಿ ವಿರುದ್ಧ ದೂರಿದ್ದಾರೆ. ಈ
ಕುರಿತು ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.