ಕಲಬುರಗಿ : ಜಿಲ್ಲೆಯಾ ಜೇವರ್ಗಿ ಪಟ್ಟಣದಲ್ಲಿ ಪ್ರತಿ ವರ್ಷದಂತೆ ಈ ವರ್ಷ ಕೂಡ ಕಲ್ಕತ್ತಾ ದೇವಿ ಜಾತ್ರೆ ಬಹಳ ಸಂಭ್ರಮ ಮತ್ತು ಸಡಗರದಿಂದ ಕುಡಿತ್ತು ಇದು ನಿರಂತರ ಐದು ದಿನಗಳ ಕಾಲ ನಡೆಯುವ ಜಾತ್ರೆ ನಾಲ್ಕನೇ ದಿನ ರಥೋತ್ಸ ಕಾರ್ಯಕ್ರಮ ಜರಗಿತ್ತು ಇದಕ್ಕೆ ತಾಲೂಕ್ ದಂಡಧಿಕಾರಿಗಳು ಚಾಲನೆ ನೀಡಿದರು ಇದಕ್ಕೆ ರಾಜಕೀಯ ಗಣ್ಯರು ನೀಡರು ಹಲವಾರು ಕಲಾ ತಂಡ ಬಂದು ಡೊಳ್ಳು ಕುಣಿತ ಪ್ರದರ್ಶನ ಮಾಡಿದರು
ಶಾಸಕರು ಮತ್ತು KKRDB ಅಧ್ಯಕ್ಷ ಡಾ. ಅಜಯಸಿಂಗ ಕುಟುಂಬ ಸಮೇತ ಬಂದು ಮಾಹಲಕ್ಷ್ಮಿ ದೇವಿಗೆ ಹುಡಿ ತುಂಬಿ ತಾಯಿಯ ಕೃಪೆಗೆ ಪಾತ್ರರಾದರು
ಈ ದೇವಿಯ ದರ್ಶನ ಪಡೆಯಲು ಆಂದ್ರ, ತೆಲಂಗಾಣ, ಮಹಾರಾಷ್ಟದಿಂದ ಭಕ್ತರು ಆಗಮಿಸಿದ್ದು ಬರುವಂತ ಭಕ್ತರಿಗೆ ವಿವಿಧ ಸಂಘ ಸಂಸ್ಥೆಯರು ಪ್ರಸಾದ ವ್ಯವಸ್ಥೆಯನ್ನು ಮಾಡಿದ್ದರು ಇಲ್ಲಿ ಹಾಲುಮತದ ಸಮುದಾಯದ ಜನರು ಉತ್ತರ ಕರ್ನಾಟಕ ಪ್ರಸಿದ್ಧ ಹುಳಿ ಬಾನ ತಯಾರಿಸಿ ಭಕ್ತರಿಗೆ ಅರ್ಪಿಸಿದರು
ರಥೋತ್ಸ ವೇಳೆ ಬಂದಿರೋ ಭಕ್ತರು ಭಂಡಾರ ಎರಚಿದರೆ ಕೆಲವರು ಉತ್ತತ್ತಿ ಬಾಳೆ ಹಣ್ಣು ಎರಚಿ ದೇವಿಯ ಕೃಪೆಗೆ ಪಾತ್ರರಾಗಿ ಸಡಗರ ಸಂಭ್ರಮದಿಂದ ದೇವಿಯ ಜಾತ್ರೆ ಮಾಡಿದರು.


