ಕಲಬುರಗಿ : ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಒಂದೇ ಗ್ರಾಮದ ನಾಲ್ವರು ಸಾವನಪ್ಪಿದ ಘಟನೆ ಸೇಡಂ ತಾಲ್ಲೂಕಿನ ಹಾಬಾಳ ಗ್ರಾಮದ ಬಳಿ ನಡೆದಿದೆ.
ಮೃತರನ್ಮು ಹಾಬಾಳ ಹ್ರಾಮದ ನಿವಾಸಿ ಸಿದ್ದು (25) ಸುರೇಶ್ (20)ಪ್ರಕಾಶ್(19) ಮಲ್ಲಿಕಾರ್ಜುನ(20) ಎಂದು ತಿಳಿದಿದೆ.
ಡಿಕ್ಕಿಯ ರಭಸಕ್ಕೆ ಎರಡು ಬೈಕ್ ಗಳು ನಜ್ಜು ಗುಜ್ಜಾಗಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ಮಾಹಿತಿ ದೊರೆತಿದೆ.
ಘಟನಾ ಸ್ಥಳಕ್ಕೆ ಸೇಡಂ ಪಿಎಸ್ಐ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.