ಕರಾಚಿ : ಡಿಸೆಂಬರ್ ತಿಂಗಳ ಆರಂಭದಲ್ಲಿ ಬಹ್ರೇನ್‌ನಲ್ಲಿ ನಡೆದ ಖಾಸಗಿ ಪಂದ್ಯಾವಳಿಯಲ್ಲಿ ಭಾರತೀಯ ತಂಡವನ್ನು ಪ್ರತಿನಿಧಿಸಿದ್ದಕ್ಕಾಗಿ ಪಾಕಿಸ್ತಾನದ ಪ್ರಸಿದ್ಧ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಉಬೈದುಲ್ಲಾ ರಜಪೂತ್ ಅವರನ್ನು ರಾಷ್ಟ್ರೀಯ ಒಕ್ಕೂಟವು ಅನಿರ್ದಿಷ್ಟಾವಧಿಗೆ
ನಿಷೇಧಿಸಿದೆ.
ಶನಿವಾರ ನಡೆದ ತುರ್ತು ಸಭೆಯ ನಂತರ ಪಾಕಿಸ್ತಾನ ಕಬಡ್ಡಿ ಫೆಡರೇಶನ್ (ಪಿಕೆಎಫ್) ನಿಷೇಧ ಹೇರಿದ್ದು, ಫೆಡರೇಶನ್ ಅಥವಾ ಇತರ ಸಂಬAಧಿತ ಅಧಿಕಾರಿಗಳಿಂದ ಕಡ್ಡಾಯ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ಪಡೆಯದೆ ಪಂದ್ಯಾವಳಿಯಲ್ಲಿ ಆಡಲು ವಿದೇಶಕ್ಕೆ ಪ್ರಯಾಣಿಸಿದ್ದಕ್ಕಾಗಿ
ರಜಪೂತ್ ತಪ್ಪಿತಸ್ಥರೆಂದು ತೀರ್ಪು ನೀಡಿದೆ. ಶಿಸ್ತು ಸಮಿತಿಯ ಮುಂದೆ ಮೇಲ್ಮನವಿ ಸಲ್ಲಿಸುವ ಹಕ್ಕು ರಜಪೂತ್‌ಗೆ ಇದೆ ಎಂದು ಪಿಕೆಎಫ್ ಕಾರ್ಯದರ್ಶಿ ರಾಣಾ ಸರ್ವರ್ ಹೇಳಿದ್ದಾರೆ.


