ಕಣ್ಣೂರು : ಅದೃಷ್ಟ ಚೆನ್ನಾಗಿದ್ದರೆ 250 ರೂಪಾಯಿ 10 ಕೋಟಿ ಆಗುತ್ತದೆ ಎಂಬುದಕ್ಕೆ ಕೇರಳ ಲಾಟರಿ ಸಮ್ಮರ್ ಬಂಪರ್ ಗೆದ್ದ ಕಣ್ಣೂರು ಆಲಕ್ಕೋಟ್ ಆಟೋ ಚಾಲಕ ನಾಸರ್ ಸಾಕ್ಷಿ. ಬೇಸಿಗೆ ಬಂಪರ್ ಲಾಟರಿಯ ಪ್ರಥಮ ಬಹುಮಾನ 10 ಕೋಟಿ ರೂ.ಗಳನ್ನು ಕಣ್ಣೂರು ಅಳಕೋಡು ಪರಪ್ಪನ ನಾಜರ್ ಪಡೆದುಕೊಂಡಿದ್ದಾರೆ. ಕ್ರಿಕೆಟ್ ಬೆಟ್ಟಿಂಗ್ ಅಲ್ಲ,ಜೂಜು ಅಲ್ಲ ಕೇವಲ 250 ರೂಪಾಯಿಂದ ದಿನಬೆಳಗಾಗುವವರೆಗೆ ಕೋಟ್ಯಧಿಪತಿಯಾದ ರಿಕ್ಷಾಚಾಲಕ,ಲಕ್ಷ್ಮಿ ಯಾವ ರೂಪದಲ್ಲಿ ಬರುತ್ತದೆ ಎಂಬುದಕ್ಕೆ ಈ ನಾಸರ್ ಸಾಕ್ಷಿ ಅಂತ ಹೇಳಬಹುದು..
ಮೊನ್ನೆ ರಾತ್ರಿ ಆಟೋ ಚಾಲಕ ಟಿಕೆಟ್ ತೆಗೆದುಕೊಂಡ ನಾಜರ್ ಇಂದು ಮಧ್ಯಾಹ್ನ ವಿಜೇತರಾಗಿ ಕೋಟ್ಯಧಿಪತಿಯಾಗಿದ್ದಾರೆ. ಮಧ್ಯಮ ವರ್ಗದ ಕುಟುಂಬದಿಂದ ಬಂದ ನಾಸರ್ ಜೀವನಸಾಗಿಸಲು ಆಟೋಚಾಲನೆ ನಡೆಸುತ್ತಿದ್ದರು.ಸದ್ಯ 10 ಕೋಟಿ ಬಂಪರ್ ಡ್ರಾ ಲಾಟರಿ ಗೆದ್ದ ನಾಸರ್ ಇದು ಕನಸ್ಸೋ ನನಸ್ಸೋ ಎಂದು ಖುಷಿಯಲ್ಲಿ ದಿಗ್ಬ್ರಮೆಗೊಂಡಿದ್ದಾರೆ.
ವಿಷು ಬಂಪರ್ ಲಾಟರಿ ಟಿಕೆಟ್‌ಗಳನ್ನು ಗುರುವಾರ ಬಿಡುಗಡೆ ಮಾಡಲು ನಿರ್ಧರಿಸಲಾಗಿದ್ದು, ಮೊದಲ ಬಹುಮಾನ 12 ಕೋಟಿಯಾಗಿದ್ದು,ಟಿಕೆಟ್ ದರ 300 ರೂಪಾಯಿಯಾಗಿದೆ.ಇದರ ಡ್ರಾ ಮೇ 29 ರಂದು ನಡೆಯಲಿದೆ ಎಂಬ ಮಾಹಿತಿ ದೊರೆತಿದೆ.
ಈ ವರ್ಷದ ಬೇಸಿಗೆ ಬಂಪರ್ ದೃಢವಾದ ಟಿಕೆಟ್ ಮಾರಾಟವನ್ನು ಕಂಡಿತು, 36 ಲಕ್ಷ ಮುದ್ರಿತ ಟಿಕೆಟ್‌ಗಳಲ್ಲಿ 33.5 ಲಕ್ಷ ಮಾರಾಟವಾಗಿದೆ.


