Tuesday, October 21, 2025
Flats for sale
Homeಜಿಲ್ಲೆಕಡಬ : ನೀಟ್ ಸೂಪರ್‌ ಸ್ಪೆಷಾಲಿಟಿ ಪ್ರವೇಶ ಪರೀಕ್ಷೆ,ದೇಶದ ಪ್ರಸಿದ್ಧ ಲಕ್ನೋದ ಕಿಂಗ್ ಜಾರ್ಜ್ ಯುನಿವರ್ಸಿಟಿಯಲ್ಲಿ...

ಕಡಬ : ನೀಟ್ ಸೂಪರ್‌ ಸ್ಪೆಷಾಲಿಟಿ ಪ್ರವೇಶ ಪರೀಕ್ಷೆ,ದೇಶದ ಪ್ರಸಿದ್ಧ ಲಕ್ನೋದ ಕಿಂಗ್ ಜಾರ್ಜ್ ಯುನಿವರ್ಸಿಟಿಯಲ್ಲಿ MCh ನ್ಯೂರೋ ಸರ್ಜರಿ ಸೀಟು ಗಿಟ್ಟಿಸಿದ ಕಡಬದ ಯುವ ವೈದ್ಯ..!

ಕಡಬ : ಇತ್ತೀಚೆಗೆ ನಡೆದ ನೀಟ್ ಸೂಪರ್ ಸ್ಪೆಷಾಲಿಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಕಡಬ ಯುವ ವೈದ್ಯರೋರ್ವರು ದೇಶದ ಪ್ರತಿಷ್ಠಿತ ಲಕ್ನೋ ಕಿಂಗ್ ಜಾರ್ಜ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಸರ್ಕಾರಿ ಕೋಟಾದಡಿ‌ ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ.

ಕಡಬ ತಾಲೂಕಿನ ಎಡಮಂಗಲ ಗ್ರಾಮದ ದೋಣಿಮನೆ ನಿವಾಸಿ ಶ್ರೀ.ದುಷ್ಯಂತ ಗೌಡ ಮತ್ತು ಶ್ರೀಮತಿ ಪ್ರೇಮ ದಂಪತಿಯ ಪುತ್ರರಾಗಿರುವ ಯುವ ವೈದ್ಯ ಡಾ. ಅವಿನ್ ದೋಣಿಮನೆ ರವರು ನೀಟ್ ಪರೀಕ್ಷೆ ಬರೆದು MCh ನ್ಯೂರೋ ಸರ್ಜರಿ (Brain & Spine Surgery) ವ್ಯಾಸಂಗಕ್ಕೆ ಸರಕಾರಿ ಕೋಟದಡಿ ಸೀಟ್ ಪಡೆದುಕೊಂಡಿದ್ದಾರೆ. ತೀರಾ ಬಡ ಕೃಷಿಕ ಕುಟುಂಬದಿಂದ ಬಂದು ತನ್ನ ಸ್ವಂತ ಪರಿಶ್ರಮ ಮತ್ತು ಓದಿನ ಮೂಲಕ ಈಗಾಗಲೇ ಪ್ರಸಿದ್ಧ ವೈದ್ಯರಾಗಿ ಗುರುಸಿಕೊಂಡಿರುವ ಡಾ. ಅವಿನ್ ದೋಣಿಮನೆ ರವರು ಪ್ರಸ್ತುತ ದೆಹಲಿಯ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸೀನಿಯರ್ ರೆಸಿಡೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಈ ಬಗ್ಗೆ ಲಕ್ನೋದಿಂದ ದೂರವಾಣಿಯ ಮೂಲಕ ಮಾತನಾಡಿದ ಡಾ.ಅವಿನ್‌ರವರು ಡಾಕ್ಟರ್ ಆಗುತ್ತೇನೆಂದು ಬಾಲ್ಯದಲ್ಲಿ ಯಾವತ್ತೂ ಕನಸ್ಸು ಕಂಡಿರದ ನಾನು ,ಒಂದು ದಿನ ಇಂತಹ ಪ್ರತಿಷ್ಠಿತ ಯುನಿವರ್ಸಿಟಿಯಲ್ಲಿ ಪ್ರವೇಶ ಸಿಗುತ್ತದೆ ಎಂದು ಊಹಿಸಿಯೇ ಇಲ್ಲ. ನಾವು ಕಂಡ ಜೀವನದ ಕಥೆಯ ಬರಹಗಾರ ನಾವೇ ಆಗಬೇಕು.ಜೀವನ ಒಂದು ಚಾರಣ ಇದ್ದಂತೆ.ಕಲ್ಲು ಮುಳ್ಳಿನ ದಾರಿಯಲ್ಲಿ ಸುಖ ದುಃಖಗಳನ್ನು ಅನುಭವಿಸುತ್ತಾ ಎದೆಗುಂದದೆ ಜೀವನದ ಸಾಧ್ಯತೆಗಳ ಅನ್ವೇಷಣೆ ಮಾಡುತ್ತಾ ಹೋಗುವುದರಲ್ಲಿ ಅದರದ್ದೇ ಆದ ರೋಚಕತೆ ಇದೆ ಎಂದರು.

ನನ್ನ ಹೆತ್ತವರು, ನನ್ನ ಪತ್ನಿ ಡಾ. ಕವಿಶಾ ,ತಮ್ಮ ಡಾ.ಅಶ್ವಿನ್ ದೋಣಿಮನೆ,ನನ್ನ ಜೀವನದ ನಿರ್ಣಾಯಕ ಸಮಯದಲ್ಲಿ ನನಗೆ ಬೆನ್ನೆಲುಬಾಗಿ ನಿಂತ ಮಾವಂದಿರಾದ ಶ್ರೀ.ತಿಮಪ್ಪ ಪಟ್ಟೆ , ಶ್ರೀ. ಆನಂದ್ ಪಟ್ಟೆ ಮತ್ತು ಶ್ರೀ.ಮುರಳಿ ಪಟ್ಟೆ ;ಅಣ್ಣ ಪ್ರವೀಣ ದೋಣಿಮನೆ ಮತ್ತು ಬೆಂಬಲ ನೀಡಿದ ಎಲ್ಲಾ ಕುಟುಂಬದ ಸದಸ್ಯರಿಗೆ,ನನ್ನ ಊರಿನ ಜನರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

Most Popular