ಮೇಷ ರಾಶಿ
ಇನ್ನು ಕೆಲವೇ ದಿನಗಳಲ್ಲಿ ಗುರುಬಲ ಬರುವುದರಿಂದ ಯಾವುದಕ್ಕೂ ಹೆದರುವ ಅಗತ್ಯ ಇಲ್ಲ. ಯಾವುದೇ ಕ್ಲೇಶ ನಿಧಾನ ಗತಿ ಆದರೂ ಕೊಂಚ ಸೈರಿಸಿಕೊಳ್ಳಿ. ವೇಗ ಪಡೆದುಕೊಳ್ಳಲು ಕೆಲವೇ ದಿನಗಳು ಬಾಕಿಯಿದೆ. ವಿದ್ಯಾರ್ಥಿಗಳಿಗೆ ಶುಭಫಲಗಳು ಇವೆ. ಈ ರಾಶಿಯವರು ಒಳ್ಳೆಯ ಅಂಕಗಳನ್ನು ಪಡೆದು ಉನ್ನತ ವ್ಯಾಸಂಗಕ್ಕೆ ಉತ್ತಮ ಕಾಲೇಜಿನಲ್ಲಿ ಪ್ರವೇಶ ಪಡೆಯುತ್ತಾರೆ. ರಾಜಕೀಯ ನಾಯಕರಿಗೆ ಬದಲಾವಣೆ ಗೋಚರಿಸುತ್ತದೆ. ಪದವಿ ಅಧಿಕಾರ ಸಿಗುವ ಯೋಗ ಇದೆ.
ವೃಷಭ ರಾಶಿ
ನಿಮಗೆ ಗುರುಬಲ ಇಲ್ಲದಿದ್ದರೂ ರಾಹುಬಲ ಇದೆ. ಇದೇ ಈಗ ನಿಮ್ಮ ಶಕ್ತಿ. ದುರ್ಗೆಯನ್ನು ಆರಾಧಿಸಿ.ಇನ್ನೂ ಹೆಚ್ಚು ಶುಭಫಲಗಳನ್ನು ಪಡೆಯಿತ್ತೀರಿ. ಹಣದ ಅಭಾವ ಕೊಂಚ ಕಾಡಬಹುದು ಆದರೆ ಧನಾಗಮನವೂ ಉತ್ತಮವಾಗಿದೆ. ಪ್ರವಾಸ ಮಾಡುವ ಯೋಗ ಇದೆ. ವೃತ್ತಿಯಲ್ಲಿ ಯಾವುದೇ ಏರಿಳಿತ ಇಲ್ಲದೆ ನೆಮ್ಮದಿ ಇದೆ.
ಮಿಥುನ ರಾಶಿ
ಈಗ ಗುರುಬಲ ಕೊನೆ ಗಳಿಗೆ ಯಲ್ಲಿದೆ. ಯಾವುದಾದರೂ ಮುಖ್ಯ ಕೆಲಸಗಳಿದ್ದರೆ ಈ ತಿಂಗಳು ಮುಗಿಸಿ ಬಿಡಿ. ಈಗ ನಿಮಗೆ ಒಂದು ಸಣ್ಣ ಜಾಗ ಬದಲಾವಣೆ ಇದೆ. ಇದನ್ನು ನೀವೇ ಯೋಚಿಸಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಪರಿವರ್ತನೆ ಮಾಡಿಕೊಳ್ಳಿ. ವೃತ್ತಿಯಲ್ಲಿ ಯಶಸ್ಸು ಇದೆ. ತಾಯಿಗೆ ಒತ್ತಡ ಇರುತ್ತದೆ.
ಕಟಕ ರಾಶಿ
ಈಗ ನಿಮಗೆ ಗುರು ಬಲ ಬರುವುದರಿಂದ ಯಾವುದೇ ಮುಖ್ಯ ತೀರ್ಮನಗಳನ್ನು ಮುಂದಕ್ಕೆ ಹಾಕಿ. ದುಡುಕಿ ಯಾವುದೇ ನಿರ್ಧಾರಕ್ಕೆ ಬರಬೇಡಿ. ಮುಂದಿನ ದಿನಗಳು ನಿಮಗೆ ಶುಭಪ್ರದವಾಗಿದೆ. ಒಂಬತ್ತನೇ ಮನೆಯಲ್ಲಿ ಶುಕ್ರ, ರಾಹು ಹಾಗೂ ಬುಧ ನಿಮಗೆ ಎಲ್ಲ ವಿಧದಲ್ಲೂ ಯಶಸ್ಸನ್ನು ಕೊಡುತ್ತಾರೆ. ಜವಾಬ್ದಾರಿಗಳು ಹೆಚ್ಚುತ್ತದೆ. ಆದರೂ ಒತ್ತಡ ಕಡಿಮೆಯಾಗಲಿದೆ. ಒಂದಷ್ಟು ಉಸಿರಾಡಬಹುದು.
ಸಿಂಹ ರಾಶಿ
ಈಗ ಗುರುಬಲ ಇದೆ. ಅಂದುಕೊಂಡಿರುವ ಕೆಲಸಗಳನ್ನು ಬೇಗನೇ ಮುಗಿಸಿ. ಈಗ ನಿಧಾನಿಸಿದರೆ ಮುಂದೆ ಅದು ಮುಂದುವರೆಯುವುದೇ ಇಲ್ಲ ಎಂಬAತೆ ಆಗುತ್ತದೆ. ಸರ್ಕಾರದಿಂದ ಏನಾದರೂ ಕೆಲಸ ಆಗಬೇಕಿದ್ದರೆ ಈಗ ಪ್ರಯತ್ನಿಸಿ. ಬೇಗ ಬೇಗ ಕೆಲಸ ಆಗುತ್ತದೆ. ರುಜುಗಳು ಶೀಘ್ರವಾಗಿ ಆಗಿ ನಿಮ್ಮ ಯೋಜನೆಗಳು ಅಪ್ರೂವ್ ಆಗುತ್ತದೆ. ಕೊಂಚ ಮನಸ್ಸಿಗೆ ಕಿರಿಕಿರಿ ಇದೆ. ಸಂಭಾಳಿಸಿಕೊಳ್ಳಿ. ಈ ವಾರ ಹಣಕಾಸಿಗೆ ತೊಂದರೆ ಇಲ್ಲ.
ಕನ್ಯಾ ರಾಶಿ
ಇನ್ನು ಕೆಲವೇ ದಿನದಲ್ಲಿ ಗುರುಬಲ ಬರುವುದರಿಂದ ಈಗ ಕೊಂಚ ಋಣಾತ್ಮಕ ಛಾಯೆಯು ಕಾಣಿಸಿದರೂ ಅಂಜಬೇಡಿ. ಆದಷ್ಟು ಧೈರ್ಯದಿಂದ ಮುನ್ನುಗ್ಗಿ. ಸಂಗಾತಿಯಿAದ ಲಾಭ ಇದೆ. ಶನಿಯ ಬಲ ಹೇಗೂ ನಿಮ್ಮ ಜೊತೆಗೆ ಇದೆ. ಪ್ರವಾಸ ಹೋಗುವ ಯೋಗ ಇದೆ. ಇನ್ನು ಮುಂದೆ ಬರುವ ದಿನಗಳು ನಿಮಗೆ ಲಾಭವನ್ನು ಗೆಲುವನ್ನೂ ತಂದುಕೊಡುತ್ತದೆ.
ತುಲಾ ರಾಶಿ
ಆರನೇ ಮನೆಯಲ್ಲಿ ರಾಹು ಬುಧ, ಮಂಗಳ, ಏಳನೇ ಮನೆಯಲ್ಲಿ ಗುರು, ಸೂರ್ಯ, ಶುಕ್ರ ಇದ್ದಾರೆ. ಆರೂ ಗ್ರಹಗಳೂ ಬಲಾಢ್ಯವಾಗಿದೆ. ಗುರುಬಲ ಎಲ್ಲಕಿಂತ ಹೆಚ್ಚಾಗಿ ನಿಮ್ಮನ್ನು ಕಾಪಾಡುತ್ತದೆ. ಮುಖ್ಯ ತೀರ್ಮಾನಗಳು ಮುಖ್ಯ ಕೆಲಸಗಳು ಆಗಬೇಕಿದ್ದರೆ ಬೇಗನೆ ಮುಗಿಸಿ. ಈ ವಾರ ಕಳೆದರೆ ಕೆಲಸಗಳು ನಿಧಾನಗತಿಯಲ್ಲಿ ಸಾಗುತ್ತದೆ. ಸಾಹಿತ್ಯ ಸಂಗೀತ ಪ್ರಿಯರಿಗೆ ಈ ವಾರ ಶುಭಫಲಗಳು ಇದೆ. ಈ ವಾರದ ಮೊದಲಲ್ಲಿ ಕುಜ ಐದನೇ ಮನೆಯಿಂದ ಆರನೇ ಮನೆಗೆ ಪ್ರವೇಶವಾಗುತ್ತಾನೆ. ಆರರ ಕುಜ ನಿಮಗೆ ಸಹಕಾರಿ.
ವೃಶ್ಚಿಕ ರಾಶಿ
ಇನ್ನು ಕೆಲವೇ ದಿನದಲ್ಲಿ ಗುರುವಿನ ಕೃಪೆಗೆ ಪಾತ್ರರಾಗುತ್ತೀರಿ. ಈ ವಾರ ಸ್ವಲ್ಪ ತಡೆದುಕೊಳ್ಳಿ. ಎಲ್ಲ ಸಂಕಷ್ಟ ಕಿರುಕುಳಗಳಿಗೂ ಕೊನೆ ಇದೆ. ಈಗ ಐದನೇ ಮನೆಯಲ್ಲಿ ರಾಹು ಬುಧ ಕುಜ ಇರುವುದು ಸ್ವಲ್ಪ ತೊಂದರೆ. ಬುಧ ಮೇಷರಾಶಿಗೆ ಬಂದಾಗ ಶುಭಫಲಗಳು ಇವೆ. ಆರರಲ್ಲಿ ಸೂರ್ಯ ಧನಲಾಭ ಕೊಡುತ್ತಾನೆ. ಈ ವಾರ ಕಳೆದರೆ ನಂತರ ಎಲ್ಲವೂ ನಿಮಗೆ ಶುಭ.
ಧನಸ್ಸು ರಾಶಿ
ಈಗ ಗುರುಬಲ ಇರುವುದರಿಂದ ಏನೂ ಭಯವಿಲ್ಲ. ಆದರೆ ನಾಲ್ಕನೇ ಮನೆಯಲ್ಲಿ ರಾಹು ಇರುವುದರಿಂದ ತಾಯಿಗೆ ಕಷ್ಟ ಅಥವಾ ತಾಯಿಯೊಂದಿಗಿನ ಸAಬAಧಕ್ಕೆ ಕೊಂಚ ಧಕ್ಕೆ ಒದಗಬಹುದು. ಬಾಕಿಯಂತೆ ಈಗ ಐದನೇ ಮನೆಯಲ್ಲಿ ಗುರು ಮೂರನೇ ಮನೆಯಲ್ಲಿ ಶನಿ ಸಮಯ ಬಹಳ ಚೆನ್ನಾಗಿದೆ. ವಿದ್ಯಾರ್ಥಿಗಳಿಗೆ ಅನುಕೂಲ ಇದೆ. ವೃತ್ತಿಯಲ್ಲಿ ಕೊಂಚ ಏರಿಳಿತ ಆಗಬಹುದು. ಮುಂದೆ ಒತ್ತಡಗಳು ಹೆಚ್ಚಾಗುವ ಸೂಚನೆ ಇದೆ. ಸಂಭಾಳಿಸಿಕೊಳ್ಳಿ.
ಮಕರ ರಾಶಿ
ಮೂರರಲ್ಲಿ ರಾಹು ಪರಾಕ್ರಮ ವನ್ನು ಧೈರ್ಯ ವನ್ನು ಕೊಡುತ್ತಾನೆ. ಈ ವಾರದ ಮೊದಲಲ್ಲಿ ಕುಜ ಕೂಡ ಮೂರನೇ ಮನೆಗೆ ಪ್ರವೇಶವಾಗಿ ನಿಮಗೆ ಇನ್ನೂ ಹೆಚ್ವಿನ ಲಾಭ ಇದೆ. ಮುಂದಿನ ದಿನಗಳಲ್ಲಿ ಗುರುವಿನ ಅನುಗ್ರಹಕ್ಕೆ ಪಾತ್ರರಾಗುತ್ತೀರಿ. ಕಷ್ಟಗಳೆಲ್ಲ ನಿವಾರಣೆಯಾಗಿ ಭಾಗ್ಯೋದಯವಾಗುತ್ತದೆ. ಹಣಕಾಸಿನ ಹರಿವು ಉತ್ತಮವಾಗುತ್ತದೆ. ಹೊಸ ನೌಕರಿ ಸಿಗುವ ಯೋಗ ಇದೆ. ಅದೃಷ್ಟ ನಿಮ್ಮನ್ನು ಹುಡುಕಿ ಬರುತ್ತದೆ. ಉತ್ಸಾಹದಿಂದ ಬರಮಾಡಿಕೊಳ್ಳಿ.
ಕುಂಭ ರಾಶಿ
ಈಗ ನಿಮಗೆ ಪರೀಕ್ಷಾ ಕಾಲ. ಶನಿ ನಿಮ್ಮ ರಾಶಿಯಲ್ಲೇ ಇದ್ದಾನೆ ಗುರುಬಲ ಇಲ್ಲ. ಹೀಗಾಗಿ ಬಹಳ ಕಿರಿಕಿರಿ ಹಾಗೂ ಸಂಕಷ್ಟಗಳಿವೆ. ಜಾಗ್ರತೆಯಿಂದ ವ್ಯವಹರಿಸಿ. ಎರಡನೇ ಮನೆಯಲ್ಲಿಇರುವ ಶುಕ್ರ ಈ ವಾರದ ಮೊದಲಲ್ಲಿಮೂರನೇ ಮನೆಗೆ ಹೋಗುತ್ತಾನೆ. ಸಹೋದರಿಯರಿಂದ ಅನುಕೂಲ ಇದೆ. ಈಗ ಸೂರ್ಯ ಮೂರನೇ ಮನೆಯಲ್ಲಿ ಇದ್ದಾನೆ ಇದೂ ಸಹ ನಿಮಗೆ ಅಲ್ಪಸ್ವಲ್ಪ ಲಾಭ ಕೊಡುತ್ತದೆ. ಶನಿ ನಿಮ್ಮ ರಾಶಿಯಲ್ಲೇ ಇದ್ದಾನೆ ಇದು ಆರೋಗ್ಯದ ಏರುಪೇರನ್ನು ಖರ್ಚುಗಳನ್ನೂ ತೋರಿಸುತ್ತದೆ. ನಿಮಗೆ ಬೇಡದ ಜಾಗಕ್ಕೆ ವರ್ಗಾವಣೆ ಆಗಬಹುದು ನಾಜೂಕಾಗಿ ನಿಭಾಯಿಸಿ.
ಮೀನ ರಾಶಿ
ನಿಮಗೂ ಕುಂಭರಾಶಿ ಯವರಿಗೂ ಹೆಚ್ಚು ವ್ಯತ್ಯಾಸವೇನೂ ಇಲ್ಲ. ಖರ್ಚು ಹೆಚ್ಚು ಶ್ರಮ ಜಾಸ್ತಿ ಫಲ ಕಡಿಮೆ. ಯಾವುದೋ ಒಂದು ಕುಟುಕು ಮಾತು ಕಿವಿಮೇಲೆ ಬೀಳುತ್ತಲೇ ಇರುತ್ತದೆ. ನಿಮ್ಮ ನೆಮ್ಮದಿ ಕೆಡಿಸುತ್ತದೆ. ಮನೆಯಲ್ಲಿ ಕೊಂಚ ಅಶಾಂತ ವಾತಾವರಣ ಇರುತ್ತದೆ. ಮನೆಯ ಸದಸ್ಯರಿಗೆ ಕೊಂಚ ನೋವಾದರೂ ನೀವು ಸಹಿಸುವುದಿಲ್ಲ. ಆದಷ್ಟು ನಿಮ್ಮ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಿ. ದೇವರ ಮೇಲೆ ನಂಬಿಕೆ ಇರಲಿ.