ಉಳ್ಳಾಲ : ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ (ರಿ) ಮಂಗಳೂರು ವಿಭಾಗ ಮತ್ತು ಅಬ್ಬಕ್ಕ ಟಿವಿ ಸಹಯೋಗದಲ್ಲಿ ರಾಣಿ ಅಬ್ಬಕ್ಕ 500 ಸರಣಿಯ 14 ನೇ ಕಾರ್ಯಕ್ರಮ ಉಳ್ಳಾಲ ತಾಲೂಕಿನ ಕೊಲ್ಯದ ಸೌಂದರ್ಯ ಸಭಾಂಗಣದಲ್ಲಿ ನಡೆಯಲಿದ್ದು ಸಂಸದರಾದ ಕ್ಯಾ. ಬ್ರಿಜೇಶ್ ಚೌಟ ಹಾಗೂ ಅತಿಥಿ ಗಣ್ಯರು ಪಾಲ್ಗೊಳಲಿದ್ದಾರೆ ಎಂದು ಕೆ.ಆರ್.ಎಂ.ಎಸ್.ಎಸ್ ನ ರಾಜ್ಯ ಜಂಟಿ ಪ್ರಧಾನ ಕಾರ್ಯದರ್ಶಿ ಡಾ| ಮಾಧವ ಎಂ.ಕೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ
ಜುಲೈ14 ಸೋಮವಾರ ಅಪರಾಹ್ನ ಗಂಟೆ 3.30ಕ್ಕೆ ಕಾರ್ಯಕ್ರಮವನ್ನು ಬಿ.ಸಿ ರೋಡ್ ಸಂಚಯಗಿರಿಯ ರಾಣಿಅಬ್ಬಕ್ಕ ಅಧ್ಯಯನ ಕೇಂದ್ರದ ನಿರ್ದೆಶಕರಾದ ಡಾ| ತುಕಾರಾಂ ಪೂಜಾರಿ ಉದ್ಘಾಟಿಸಲ್ಲಿದ್ದು ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿ ಟ್ರಸ್ಟ್ ಅಧ್ಯಕ್ಷರಾದ ದಿನಕರ ಉಳ್ಳಾಲ್ ರಾಣಿ ಅಬ್ಬಕ್ಕ ನ ಕುರಿತು ಉಪನ್ಯಾಸ ನಿಡಲಿದ್ದಾರೆ . ಉದ್ಯಮಿ ಸೌಂದರ್ಯ ರಮೇಶ್ . ಅಬ್ಬಕ್ಕ ಟಿವಿ ಯ ನಿರ್ದೇಶಕರಾದ ಶಶಿಧರ್ ಪೊಯ್ಯತ್ತಬೈಲ್ ಅತಿಥಿಗಳಾಗಿ ಪಾಲ್ಗೊಲಿದ್ದಾರೆ ಎಂದು ಅವರು ತಿಳಿಸಿದರು.
ಬಳಿಕ ನಡೆಯಲಿರುವ ಅಬ್ಬಕ್ಕ ಟಿ.ವಿ 13 ರ ಕಾರ್ಯಕ್ರಮದಲ್ಲಿ ಡಾ| ತುಕಾರಾಂ ಪೂಜಾರಿ ಅವರಿಗೆ ಪ್ರಶಸ್ತಿ ಪ್ರದಾನ ನಡೆಯಲಿದ್ದು ಉಳ್ಳಾಲ ತಾಲೂಕಿನ ಪ್ರಥಮ ಪೈಲೆಟ್ ಚರಣ್ ರಾಜ್ ಶೆಟ್ಟಿ ಕೆಳಗಿನ ಕೋಟೆಕಾರು ಗುತ್ತು ಅವರಿಗೆ ಪುರಸ್ಕಾರ ಪ್ರದಾನವಾಗಲಿದ್ದು ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ದಿವ್ಯಾ .ಎಸ್.ಶೆಟ್ಟಿ , ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ , ಮೂಡ ಅಧ್ಯಕ್ಷರಾದ ಸದಾಶಿವ ಉಳ್ಳಾಲ್, ಕೆ.ಟಿ ಸುವರ್ಣ , ಗೋಪಾಲ ಕುತ್ತಾರು,ವಿಜೇಶ್ ಬಿ.ಶೆಟ್ಟಿ , ಡಾ| ಅಶ್ವಿನಿ ಶೆಟ್ಟಿ,ಉಳ್ಳಾಲ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ವಸಂತ ಕೊಣಾಜೆ ಮುಂತಾದವರು ಪಾಲ್ಗೊಲಿದ್ದಾರೆ . ಕಾರ್ಯಕ್ರಮದ ಆರಂಭದಲ್ಲಿ ಹರೀಶ್ ರಂಗೋಲಿ ಬಳಗದ ಭಕ್ತಿ – ಭಾವ ಸಂಗಮ ನಡೆಯಲಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ