Thursday, March 12, 2026
Flats for sale
Homeದೇಶಉತ್ತರ ಕನ್ನಡ : ಶಿರೂರು ಗುಡ್ಡ ಕುಸಿತ ಪ್ರಕರಣ : 72 ದಿನಗಳ ಬಳಿಕ ಲಾರಿ...

ಉತ್ತರ ಕನ್ನಡ : ಶಿರೂರು ಗುಡ್ಡ ಕುಸಿತ ಪ್ರಕರಣ : 72 ದಿನಗಳ ಬಳಿಕ ಲಾರಿ ಜೊತೆ ನಾಪತ್ತೆಯಾಗಿದ್ದ ಅರ್ಜುನನ ಮೃತದೇಹ ಎರಡು ತುಂಡಾಗಿ ಪತ್ತೆ.!

ಉತ್ತರ ಕನ್ನಡ : ಅಂಕೋಲಾದ ಶಿರೂರು ಗುಡ್ಡ ಕುಸಿತ ಸ್ಥಳದ ಬಳಿ ಗಂಗಾವಳಿ ನದಿಯಲ್ಲಿ ಮಿಲಿಟರಿ ಮತ್ತು ನೌಕಾದಳ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಮಣ್ಣಿನಡಿ ದೊಡ್ಡ ಲೋಹದ ವಸ್ತು ಪತ್ತೆಯಾಗಿದ್ದು, ಅದು ಲಾರಿ ಇರಬಹುದು ಎಂದು ಅಂದಾಜಿಸಲಾಗಿತ್ತು ಆದರೆ ಹಲವು ದಿನಗಳು ನಡೆಸಿದ ಕಾರ್ಯಾಚರಣೆ ವಿಪರೀತ ಮಳೆಯಿಂದಾಗಿ ವ್ಯರ್ಥವಾಗಿತ್ತು ಆದರೆ ಖ್ಯಾತ ಈಜುಪಟು ಈಶ್ವರ್ ಮಲ್ಪೆ ತಂಡ ಗಂಗಾವಳಿ ನದಿಯಲ್ಲಿ ಸ್ಕೂಬಾ ಡೈವ್ ಕಾರ್ಯಾಚರಣೆ ವೇಳೆ ಕೇರಳ ಮೂಲದ ಚಾಲಕ ಅರ್ಜುನ್ ಓಡಿಸುತ್ತಿದ್ದ ಲಾರಿಯನ್ನು ಪತ್ತೆ ಹಚ್ಚಿದ್ದಾರೆ. 72 ದಿನಗಳ ನಂತರ ನದಿಯಲ್ಲಿ ಲಾರಿ ಹಾಗೂ ಇಬ್ಬರ ಮೃತದೇಹಗಳು ಪತ್ತೆಯಾಗಿದೆ. ಗುಡ್ಡ ಕುಸಿತದ ರಭಸಕ್ಕೆ ನದಿಗೆ ಬಿದ್ದು ಲಾರಿ ನಜ್ಜುಗುಜ್ಜಾಗಿದೆ.

ಜುಲೈ 16 ರಂದು ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗುಡ್ಡ ಕುಸಿದು 11 ಜನ ಮಣ್ಣಿನಲ್ಲಿ ಕೊಚ್ಚಿ ಹೋಗಿದ್ದರು. ಅದರಲ್ಲಿ 8 ಜನರನ್ನು ಈಗಾಗಲೇ ಪತ್ತೆ ಮಾಡಿದ್ದು, ಇನ್ನುಳಿದ ಕೇರಳ ಮೂಲದ ಲಾರಿ ಚಾಲಕ ಅರ್ಜುನ್, ಶಿರೂರಿನ ಲೋಕೇಶ್ ನಾಯ್ಕ ಮತ್ತು ಜಗನ್ನಾಥ ನಾಯ್ಕ ಎಂಬುವವರಿಗಾಗಿ ಹುಡುಕಾಟ ನಡೆಸಲಾಗಿತ್ತು. ಇದೀಗ ಲಾರಿಯೊಳಗೆ ಅರ್ಜುನನ ಮೃತದೇಹ ಎರಡು ತುಂಡಾಗಿ ಪತ್ತೆಯಾಗಿದೆ. ಕೇರಳ ಮೂಲದ ಚಾಲಕ ಅರ್ಜುನ್ ಓಡಿಸುತ್ತಿದ್ದ ಲಾರಿ ಪತ್ತೆಯಾಗಿತ್ತು. ಇದೀಗ ಲಾರಿಯೊಳಗೆ ಅರ್ಜುನನ ಮೃತದೇಹ ಎರಡು ತುಂಡಾಗಿ ಪತ್ತೆಯಾಗಿದೆ. ಗಂಗಾವಳಿ ನದಿಯಿಂದ ಲಾರಿ ಹಾಗೂ ಸಿಕ್ಕಿರುವ ಮೃತದೇಹವನ್ನು ಎತ್ತುವ ಕಾರ್ಯ ಮುಂದುವರೆದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular