ಉತ್ತರ ಕನ್ನಡ : ಅಂಕೋಲಾದ ಶಿರೂರು ಗುಡ್ಡ ಕುಸಿತ ಸ್ಥಳದ ಬಳಿ ಗಂಗಾವಳಿ ನದಿಯಲ್ಲಿ ಮಿಲಿಟರಿ ಮತ್ತು ನೌಕಾದಳ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಮಣ್ಣಿನಡಿ ದೊಡ್ಡ ಲೋಹದ ವಸ್ತು ಪತ್ತೆಯಾಗಿದ್ದು, ಅದು ಲಾರಿ ಇರಬಹುದು ಎಂದು ಅಂದಾಜಿಸಲಾಗಿತ್ತು ಆದರೆ ಹಲವು ದಿನಗಳು ನಡೆಸಿದ ಕಾರ್ಯಾಚರಣೆ ವಿಪರೀತ ಮಳೆಯಿಂದಾಗಿ ವ್ಯರ್ಥವಾಗಿತ್ತು.
ಖ್ಯಾತ ಈಜುಪಟು ಈಶ್ವರ್ ಮಲ್ಪೆ ತಂಡ ಗಂಗಾವಳಿ ನದಿಯಲ್ಲಿ ಸ್ಕೂಬಾ ಡೈವ್ ಕಾರ್ಯಾಚರಣೆ ವೇಳೆ ಕೇರಳ ಮೂಲದ ಚಾಲಕ ಅರ್ಜುನ್ ಓಡಿಸುತ್ತಿದ್ದ ಲಾರಿಯ ಜಾಕ್ ಇಂದು ಪತ್ತೆಯಾಗಿದ್ದು ಸಿಕ್ಕಿರುವ ಜಾಕ್ ಅರ್ಜುನ್ ಓಡಿಸುತ್ತಿದ್ದ ಲಾರಿದೆ ಎಂದು ಲಾರಿ ಮಾಲಿಕ ಮುಫಿನ್ ಖಚಿತ ಪಡಿಸಿದ್ದಾರೆಂದು ತಿಳಿದಿದೆ.
ಇನ್ನುಳಿದ ಕೇರಳ ಮೂಲದ ಲಾರಿ ಚಾಲಕ ಅರ್ಜುನ್, ಶಿರೂರಿನ ಲೋಕೇಶ್ ನಾಯ್ಕ ಮತ್ತು ಜಗನ್ನಾಥ ನಾಯ್ಕ ರವರಿಗಾಗಿ ಮುಳುಗು ತಜ್ಞರಿಂದ ಶೋಧಕಾರ್ಯ ನಡೆಯುತ್ತಿದೆ. ಗಂಗಾವಳಿ ನದಿಯಲ್ಲಿ ಬೂಮ್ ಫೋಕ್ಲೇನ್ ಮೂಲಕ ಕಾರ್ಯಾಚರಣೆ ನಡೆಸಿದ್ದ ವೇಳೆ ಫೋಕ್ಲೇನ್ ಬಕೆಟ್ಗೆ ಕಬ್ಬಿಣ ಬಡಿದಿತ್ತು. ಈ ಹಿನ್ನಲೆ ನದಿಯಲ್ಲಿ ವಾಹನ ಇದೆ ಎನ್ನಲಾಗಿತ್ತು. ಬಳಿಕ ಕಳೆದ ಜಲೈ 25 ಗಂಗಾವಳಿ ನದಿಯಲ್ಲಿ ಅರ್ಜುನ್ ಟ್ರಕ್ನಲ್ಲಿದ್ದ ಅಕೇಶಿಯ ಮರದ ತುಂಡೊಂದು ಪತ್ತೆಯಾಗಿತ್ತು. ತೇಲಿಬಂದ ಅಕೇಶಿಯ ತುಂಡಲ್ಲಿ ಅರಣ್ಯ ಇಲಾಖೆಯ ಮಾರ್ಕ್ ಇರುವುದರಿಂದ ಸ್ಥಳಕ್ಕೆ ಕಾಣೆಯಾದ ಟ್ರಕ್ ಚಾಲಕ ಅರ್ಜುನ್ ಕಡೆಯ ಟ್ರಕ್ ಮಾಲೀಕರು ತೆರಳಿ ದೃಢಪಡಿಸಿದ್ದರು. ಇದೀಗ ಲಾರಿಯ ಬಿಡಿಭಾಗ ಪತ್ತೆಯಾಗಿದ್ದು ಲಾರಿಯು ಕೂಡ ನದಿಯ ಅಡಿಭಾಗದಲ್ಲಿ ಇರಬಹುದೆಂದು ಅಂದಾಜಿಸಲಾಗಿದೆ.