Tuesday, February 4, 2025
Flats for sale
Homeಜಿಲ್ಲೆಉಡುಪಿ : ಮೈಕ್ ಬಳಕೆಗೆ ಅನುಮತಿ ಪಡೆಯಲಿಲ್ಲವೆಂದು ಯಕ್ಷಗಾನ ಪ್ರದರ್ಶನ ನಿಲ್ಲಿಸಿದ ಪೊಲೀಸರು..!

ಉಡುಪಿ : ಮೈಕ್ ಬಳಕೆಗೆ ಅನುಮತಿ ಪಡೆಯಲಿಲ್ಲವೆಂದು ಯಕ್ಷಗಾನ ಪ್ರದರ್ಶನ ನಿಲ್ಲಿಸಿದ ಪೊಲೀಸರು..!

ಉಡುಪಿ : ಸರಕಾರ ಅಧಿಕಾರಿಗಳ ಅಸಡ್ಡೆಯಿಂದ ಮೈಕ್​ಗೆ ಅನುಮತಿ ಪಡೆದಿಲ್ಲವೆಂದು ಯಕ್ಷಗಾನ ಪ್ರದರ್ಶನ ನಡೆಯುವ ವೇಳೆ ಯಕ್ಷಗಾನ ಪ್ರದರ್ಶನಕ್ಕೆ ಪೊಲೀಸರು ತಡೆ ಒಡ್ಡಿದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ನಡೆದಿದೆ.

ಇನ್ನೇನು ಒಂದು ಯಕ್ಷಗಾನ ಪ್ರದರ್ಶನ ನಡೆಯಲು ಹಲವು ರೀತಿಯ ಕಾನೂನಿನ ಚೌಕಟ್ಟಿನಲ್ಲಿ ಅನುಮತಿ ಪಡೆಯುವುದು ಅಗತ್ಯ ಆದರೆ ಆಯೋಜಕರು ಜ.10 ರಂದು ಪರವಾನಿಗೆಗಾಗಿ ಸರಕಾರಿ ಕಚೇರಿಗೆ ಹೋದ ಸಂದರ್ಭದಲ್ಲಿ ಪಿಡಿಓ ದಿನ ರಜೆ ಮೇಲೆ ತೆರಳಿದ್ದರು ಮತ್ತೊಮ್ಮೆ ಜನವರಿ 13ರಂದು ಅನುಮತಿಗಾಗಿ ಅಜೆಕಾರು ಠಾಣೆಗೆ ಆಯೋಜಕರು ಹೋಗಿದ್ದರು ಆದರೆ ಪೊಲೀಸರು ಪಂಚಾಯತ್ ಅನುಮತಿ ತರುವಂತೆ ಪೊಲೀಸರು ತಾಕೀತು ಮಾಡಿದ್ದರು. ಆದರೆ ಅನುಮತಿ ದೊರೆಯಾದ ಕಾರಣ ಅನುಮತಿ ಪತ್ರ ಸಿಗದ ಹಿನ್ನೆಲೆ ಪೊಲೀಸರು ಪ್ರದರ್ಶನ ನಿಲ್ಲಿಸಿದ್ದಾರೆ.ಈ ನಿರ್ಧಾರಕ್ಕೆ ಗ್ರಾಮಸ್ಥರು ಮತ್ತು ಯಕ್ಷಗಾನ ಕಲಾವಿದರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರವಾನಗಿ ಪಡೆಯಲು ಆಯೋಜಕರು ಮಾಡಿದ ಪ್ರಯತ್ನಗಳು ವಿಫಲವಾದವು ಎಂಬುದು ತಿಳಿದುಬಂದಿದೆ.

ಮುಂಡ್ಲಿಯ ಈಶ್ವರ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ಆಯೋಜನೆ ಮಾಡಲಾಗಿದ್ದು 10 ಗಂಟೆ ನಂತರ ಧ್ವನಿವರ್ಧಕ ಬಳಸಿದ್ದಕ್ಕೆ ಅಜೆಕಾರು ಠಾಣಾ ಉಪ ನಿರೀಕ್ಷಕ ಶುಭಕರ ಅವರಿಂದ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವೇಳೆ ಗ್ರಾಮಸ್ಥರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದ್ದು, ದೂರು ದಾಖಲಾದ ಬಗ್ಗೆ ಎಫ್​ಐಆರ್​ ತೋರಿಸಿ ಎಂದು ಗ್ರಾಮಸ್ಥರು ಆಗ್ರಹಿಸಿದರು. ಸಾರ್ವಜನಿಕರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಪೊಲೀಸ್ ಸ್ಥಳದಿಂದ ತೆರಳಿದ್ದಾರೆ.

ಪೊಲೀಸರಿಗೆ ಆರಾಧನಾ ಕಲೆ ವಿರುದ್ಧ ಕ್ರಮ ಕೈಗೊಳ್ಳುವ ಅನಿವಾರ್ಯತೆ ಎದುರಾಗಿದ್ದು ಆದೇಶ ಪಾಲಿಸದಿದ್ದರೆ ಆಯಾ ಠಾಣಾಧಿಕಾರಿ ಮೇಲೆ ಕ್ರಮ ಕೈಗೊಳ್ಳುವುದಾಗಿ ಎಸ್​ಪಿ ಎಚ್ಚರಿಸಿದ್ದಾರೆ.ಆದರೆ ಇದೀಗ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು ಹಿಂದೂ ಧರ್ಮದ ಸಂಸ್ಕೃತಿಗೆ ಬಗೆದ ದ್ರೋಹವೆಂದು ಸ್ಥಳೀಯರು ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular