ಉಡುಪಿ : ಸಂಘಪರಿವಾರದ ಶಕ್ತಿಯುತ ನಾಯಕ ಸುನಿಲ್ ಕುಮಾರನ್ನು ಕಂಡರೆ ಕಾಂಗ್ರೆಸಿಗರಿಗೆ ಯಾಕೆ ಭಯ.ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ನಡೆಯುತ್ತಿದೆಯಾ? ಎಂಬ ಮಾತು ಕೇಳಿಬರುತ್ತಿದೆ ,ಕಾರ್ಕಳ ಕ್ಷೇತ್ರ ದಲ್ಲಿ ಅಭಿವೃದ್ಧಿ ಪತದಿಂದ ಸಾಗುತ್ತಿದೆಯಾ ಇಂತಹ ಪ್ರಶ್ನೆ ಕಾರ್ಕಳದ ಜನರಲ್ಲಿ ಮೂಡುತ್ತಿದೆ .
ಆರ್.ಎಸ್.ಎಸ್ ಮೂಲದಿಂದ ಬಂದ ನಾಯಕನೆಂದರೆ ಸುನಿಲ್ ಕುಮಾರ ಹಲವು ಹೋರಾಟ ನಡೆಸಿ ರಾಜಕೀಯಕ್ಕೆ ಬಂದು ಶಾಸಕ ,ಸಚಿವ ಸ್ಥಾನಗಳನ್ನು ಗಿಟ್ಟಿಸಿಗೊಂಡವರಲ್ಲಿ ಒಬ್ಬರು. ಯಸ್ ಇದೊಂದು ವಿಚಾರಣೆ ಬೇರೆ ಬಿಲ್ಲವ ಸಮಾಜದ ಶಕ್ತಿಯುತ ಯುವ ನಾಯಕ ಮಾಜಿ ಸಚಿವ ಸುನಿಲ್ ಕುಮಾರ್ ರನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ನಡೆಯುತ್ತಿದೆಯೇ ಎಂಬ ಮಾತು ಕೇಳಿಬರುತ್ತಿದೆ .ಪರಶುರಾಮ್ ಥೀಮ್ ಪಾರ್ಕ್ ಕಾಮಗಾರಿ ಪ್ರಾರಂಭವಾದಂದಿನಿಂದ ಬೈಲೂರು ಕ್ಷೇತ್ರವು ವ್ಯಾವಹಾರಿಕವಾಗಿ ಅಭಿವೃದ್ಧಿ ಹೊಂದಿದ್ದು ಇಲ್ಲಿ ರಿಯಲ್ ಎಸ್ಟೇಟ್ ದಂದೆ ಅಂತೂ ದಿನದಿಂದ ದಿನಕ್ಕೆ ಬಾನೆತ್ತರಕ್ಕೆ ಹೋಗಿದೆ. ಇದು ನೂರಕ್ಕೂ ನೂರು ಸತ್ಯ ಯಾಕೆಂದರೆ ಇಲ್ಲಿ ಕಾಮಗಾರಿಯ ಸಂಪೂರ್ಣ ಹಣ ಬಿಡುಗಡೆಯಾಗದೆ ಇರುವುದು ಹಾಗೂ ರಾಜಕೀಯವಾಗಿ ಎಲ್ಲರು ಈ ಪ್ರಕರಣಕ್ಕೆ ಅಶಕ್ತಿ ತೋರಿಸುವು ಹಲವು ಸಂದೇಹಕ್ಕೆ ಎಡೆಮಾಡಿಕೊಟ್ಟಿದೆ.
ಏನಿದು ಪ್ರಕರಣ.
ಉಡುಪಿಯ ಕಾರ್ಕಳ ತಾಲೂಕಿನ ಬೈಲೂರಿನ ಉಮಿ ಕುಂಜ ಬೆಟ್ಟದ ಮೇಲೆ ಪರಶುರಾಮ ಥೀಮ್ ಪಾರ್ಕ್ ಅನ್ನು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, 2023ರ ಜ. 17ರಂದು ಉದ್ಘಾಟಿಸಿದ್ದರು. ಇಡೀ ಥೀಮ್ ಪಾರ್ಕ್ ಅನ್ನು 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಅದರಲ್ಲಿ ಬೃಹತ್ತಾದ ಪರಶುರಾಮನ ಪುತ್ಥಳಿ, ಬಯಲು ರಂಗ ಮಂದಿರ, ಆರ್ಟ್ ಗ್ಯಾಲರಿ, ಭಜನಾ ಮಂದಿರವನ್ನ ನಿರ್ಮಿಸಲಾಗಿತ್ತು ಆದ್ರೆ, ಪರಶುರಾಮನ ಪುತ್ಥಳಿಯನ್ನು ಕಂಚು ಮತ್ತು ಉಕ್ಕಿನಿಂದ ನಿರ್ಮಾಣ ಮಾಡಲಾಗಿದೆ ಎಂದು ಹೇಳಲಾಗಿತ್ತು.
ಆದ್ರೆ, ಮೂರ್ತಿ ಫೈಬರ್ನಿಂದ ನಿರ್ಮಾಣ ಮಾಡಲಾಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದರು. ಅಲ್ಲದೇ ಸಾಕ್ಷಿ ಸಮೇತ ಕಾಮಗಾರಿಯಲ್ಲಾದ ಅಕ್ರಮವನ್ನು ಬಯಲಿಗೆಳೆದಿದ್ದರು.
ಕಾಂಗ್ರೆಸ್ ನಾಯಕರು ಈ ಪುತ್ಥಳಿಯನ್ನು ಫೈಬರ್ನಿಂದ ನಿರ್ಮಿಸಲಾಗಿದ್ದು, ಕಂಚು, ಉಕ್ಕು ಬಳಸಲಾಗಿದೆ ಎಂದು ಹೇಳಿ ಆ ಹಣವನ್ನು ಈ ಥೀಮ್ ಪಾರ್ಕ್ ನಿರ್ಮಿಸುವ ಜವಾಬ್ದಾರಿ ಹೊತ್ತಿದ್ದ ಸ್ಥಳೀಯ ಶಾಸಕರು ಹಾಗೂ ಮಾಜಿ ಸಚಿವರಾದ ಸುನಿಲ್ ಕುಮಾರ್ ಅವರು ಲೂಟಿ ಮಾಡಿದ್ದಾರೆ ಆರೋಪಿಸಿದ್ದರು.ಬಳಿಕ ಈ ಬಗ್ಗೆ ರಾಜಕೀಯ ಆರೋಪ ಪತ್ಯಾರೋಪಗಳು ಜೋರಾಗಿದ್ದವು.
ಆದರೆ ಇಲ್ಲಿ ನಿಜಾಂಶ ಏನೆಂದರೆ ಇಷ್ಟರ ವರೆಗೆ ಸರಕಾರದ ಖಜಾನೆಯಿಂದ ಹಣ ನೀಡಿದ್ದು ಕೇವಲ 1 ಕೋಟಿ ರೂಪಾಯಿ ಮಾತ್ರ , ಇನ್ನು 5 ಕೋಟಿ ರೂಪಾಯಿ ಸರಕಾರದಿಂದ ಬರಬೇಕಾಗಿದೆ ,ರಸ್ತೆ ಅಗಲೀಕರಣ ,ಹಲವು ಕಾಮಗಾರಿ ಬಾಕಿಉಳಿದುದ್ದು ಸರಕಾರದಿಂದ ಸಂಪೂರ್ಣವಾಗಿ ಹಣ ಪಾವತಿಯಾಗಿಲ್ಲ ಎಂಬ ನಿಜಾಂಶ ಬಯಲಾಗಿದೆ.
ಇನ್ನೇನು ಕೆಲವೇ ತಿಂಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು ಪ್ರಸ್ತುತ ರಾಜ್ಜ್ಯದಲ್ಲಿರುವ ಕಾಂಗ್ರೆಸ್ ಸರಕಾರ ಇನ್ನಿಲ್ಲದ ಭಾಗ್ಯಗನ್ನು ನೀಡಿ ಖಜಾನೆಯನ್ನು ಬರಿದಾಗಿಸಲು ತಯಾರಾಗಿದೆ. ಕಳೆದ ಬಾರಿ ಸುನಿಲ್ ಕುಮಾರ್ ವಿರುದ್ಧ ನಿಂತು ಸೋತ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಯವರು ಹಾಗೂ ತಂಡ ಸೇರಿ ಶಕ್ತಿಯುತ ನಾಯಕ ಸುನಿಲ್ ಕುಮಾರ್ ರವರಿಗೆ ಖೆಡ್ಡಾ ತೋಡಲು ತಯಾರಾಗಿದ್ದಾರೆ ,ಆದರೆ ಇಲ್ಲಿ ಅಂತಹ ಹಗರಣ ನಡೆಯಲಿಲ್ಲ ಎಂಬುದು ಅಧಿಕಾರಿಗಳ ಮಾತು .ಇನ್ನೇನು ತನಿಖೆಗೆ ರಾಜ್ಯಸರಕಾರ ಆದೇಶ ಹೊರಡಿಸಿದೆ ಮುಂದೆ ಯಾವ ರೀತಿ ಸುನಿಲ್ ಕುಮಾರ್ ರವರು ಈ ದೊಡ್ಡ ಚಕ್ರವ್ಯೂಹದಿಂದ ಹೇಗೆ ಹೊರಬರುತ್ತಾರೆ ಎಂಬುದು ಕಾದುನೋಡಬೇಕಾಗಿದೆ.
ರಾಜಕೀಯದಲ್ಲಿ ಕಾಲೆಳೆಯುವವರು ಹೆಚ್ಚು ಆದರೆ ಬಿಜೆಪಿ ಸರಕಾರ ಅಧಿಕಾರದಲ್ಲಿ ಉದ್ಘಾಟನೆಯಾಗಿರುವ ಪರಶುರಾಮ ಥೀಮ್ ಪಾರ್ಕ್ ಇಷ್ಟೊಂದು ಸದ್ದು ಮಾಡುವುದೆಂದರೆ ಇದರಲ್ಲಿ ಏನೋ ಇದೆ ಎಂಬುದು ಕಾರ್ಯಕರ್ತರ ಮಾತು .


