ಉಡುಪಿ : ಟೂರಿಸ್ಟ್ ಬೋಟ್ ಮಗುಚಿ ಬಿದ್ದ ಪರಿಣಾಮ ನಾಲ್ವರು ಪ್ರವಾಸಿಗರ ಸ್ಥಿತಿ ಗಂಭೀರವಾದ ಘಟನೆ ಉಡುಪಿ ತಾಲೂಕಿ ಕೋಡಿಬೆಂಗ್ರೆ ಅಳಿವೆ ಬಾಗಿಲಿನಲ್ಲಿ ನಡೆದಿದೆ. ಪ್ರೈವೇಟ್ ರೆಸಾರ್ಟ್ ನಲ್ಲಿ ತಂಗಿದ್ದ ಪ್ರವಾಸಿಗರು ಇಂದು ಟೂರಿಸ್ಟ್ ಬೋಟಿನಲ್ಲಿ ಸಂಚಾರ ಹೋಗಿದ್ದರು ಆ ವೇಳೆ ಸಮುದ್ರದ ಅಲೆಗಳಿಗೆ ಸಿಲುಕಿ ಪ್ರವಾಸಿಗರ ಬೋಟ್ ಮಗುಚಿ ಬಿದ್ದಿದ್ದು ಬೋಟ್ ನಲ್ಲಿ ಒಟ್ಟು 15 ಮಂದಿ ಪ್ರವಾಸಿಗರು ಇದ್ದರೆಂದು ತಿಳಿದಿದೆ. ಸ್ಥಳೀಯರು ಮಗುಚಿ ಬಿದ್ದ ಬೋಟ್ ನಲ್ಲಿದ್ದ ಜನರನ್ನು ರಕ್ಷಿಸಿದ್ದು ಒಟ್ಟು ನಾಲ್ವರು ಗಂಭೀರ ಸ್ಥಿತಿಯಲ್ಲಿದ್ದಾರೆಂದು ತಿಳಿದುಬಂದಿದೆ.
ಮೃತರು ಮೈಸೂರಿನ ಶಂಕರಪ್ಪ( 22), ಸಿಂಧು (23) ಎಂದು ತಿಳಿದುಬಂದಿದೆ.
ಬೋಟ್ ನಲ್ಲಿದ್ದ ಕೆಲವರು ಲೈಫ್ ಜಾಕೆಟ್ ಧರಿಸದ ಕಾರಣ ಹಲವರು ಅಸ್ವಸ್ಥಗೊಂಡಿದ್ದಾರೆಂದು ತಿಳಿದಿದೆ.ಎಲ್ಲರನ್ನು ಸಮುದ್ರದಿಂದ ಮೇಲಕ್ಕೆ ಸ್ಥಳೀಯರು ಎತ್ತಿದ್ದು ಅಸ್ವಸ್ಥಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ತನಿಖೆ ನಡೆಯುತ್ತಿದೆ.


