Friday, March 13, 2026
Flats for sale
Homeಜಿಲ್ಲೆಉಡುಪಿ : ಜನಸಾಮಾನ್ಯರ ಕೈಗೆ ಸಿಗದ ಶೋಭಾ ಕರಂದ್ಲಾಜೆ ,10 ವರ್ಷಗಳಿಂದ ಮತ ಹಾಕಿದ ನಮಗಾಗಿ...

ಉಡುಪಿ : ಜನಸಾಮಾನ್ಯರ ಕೈಗೆ ಸಿಗದ ಶೋಭಾ ಕರಂದ್ಲಾಜೆ ,10 ವರ್ಷಗಳಿಂದ ಮತ ಹಾಕಿದ ನಮಗಾಗಿ ನೀವು ಮಾಡಿದ್ದೇನು? ಎಂದು ಸಂಸದೆಗೆ ಮೀನುಗಾರರು ಕ್ಲಾಸ್.

ಉಡುಪಿ : ದಕ್ಷಿಣ ಕನ್ನಡದಿಂದ ಉಡುಪಿ ಚಿಕ್ಕಮಗಳೂರು ಕ್ಷೇತ್ರಕ್ಕೆ ಜಿಗಿದು ಜನಸಾಮಾನ್ಯರ ಕೈಗೆ ಸಿಗದ ಶೋಭಾ ಕರಂದ್ಲಾಜೆ ವಿರುದ್ಧ ಉಡುಪಿ ಚಿಕ್ಕಮಗಳೂರು ಜನ ಆಕ್ರೋಶ ಗೊಂಡಿದ್ದಾರೆ.

ಉಡುಪಿಯ ಪ್ರವಾಸಿ ಮಂದಿರದಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ಇಲಾಖಾಧಿಕಾರಿಗಳ ಸಭೆಯಲ್ಲಿ ಮಲ್ಪೆ ಉಡುಪಿ ಮಧ್ಯಭಾಗದ ಮೂರೂವರೆ ಕಿಲೋಮೀಟರ್ ಉದ್ದದ ಹೆದ್ದಾರಿ ನಿರ್ಮಾಣ ವಿಳಂಬದ ಬಗ್ಗೆ ಮೀನುಗಾರರ ಸಂಘದ ಮುಖಂಡ ಕಿಶೋರ್ ಸುವರ್ಣ ಪ್ರಶ್ನಿಸಿ ಸಂಸದೆ ಶೋಭಾ ಕರಂದ್ಲಾಜೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನೀವು ನಮ್ಮ ಜನಪ್ರತಿನಿಧಿ ಅಲ್ಲವೇ? ನೀವು ಜನರನ್ನು ಯಾಕೆ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಉಡುಪಿ ಚಿಕ್ಕಮಗಳೂರು ಜಿಲ್ಲೆಯ ಜನರು ನಿಮ್ಮ ಮೇಲೆ ವಿಶ್ವಾಸ ಇಟ್ಟು ಮತ ಹಾಕಿ ಗೆಲ್ಲಿಸಿದ್ದೇವೆ. ನಿಮಗೆ 10 ವರ್ಷಗಳಿಂದ ಮತ ಹಾಕಿದ್ದಕ್ಕೆ ನೀವು ನಮಗೆ ಏನು ಮಾಡಿದ್ದೀರಿ?. ಕೋಟ್ಯಂತರ ರೂಪಾಯಿ ಆದಾಯ ಬರುವ ಮಲ್ಪೆ ಬಂದರಿನ ಬಗ್ಗೆ ನಿಮಗೆ ನಿರ್ಲಕ್ಷ್ಯ ಏಕೆ? ಮಲ್ಪೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೈಜ್ಞಾನಿಕ ರೀತಿಯಲ್ಲಿಲ್ಲ.ಆದರೆ ನೀವು ನಮ್ಮ ಮೇಲೆ ವಿಶ್ವಾಸ ಇಟ್ಟಿಲ್ಲ. ರಸ್ತೆಯಲ್ಲಿ ಭೂಮಿ ಕಳೆದುಕೊಳ್ಳುವವರನ್ನು ಸೇರಿಸಿ ಈವರೆಗೆ ಒಂದೇ ಒಂದು ಸಭೆ ಕರೆದಿಲ್ಲ.ಎಂದು ಸಭೆಯಲ್ಲಿ ಭಾಗವಹಿಸಿದ್ದವರು ಶೋಭಾ ಕರಂದ್ಲಾಜೆ ಮುಂದೆ ಸರಣಿ ಪ್ರಶ್ನೆಗಳನ್ನಿಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಕೋಟ್ಯಂತರ ಆದಾಯ ಇರುವ ಈ ರಸ್ತೆ ಪರಿಹಾರಕ್ಕೆ ಕೇವಲ 50 ಕೋಟಿ ರೂ. ಕೊಡಲು ಹಿಂದೇಟು ಏಕೆ? ರಸ್ತೆಯ ಸರ್ವೆ ಮತ್ತು ಪರಿಹಾರದ ಬಗ್ಗೆ ಜನರಿಗೆ ಸಾಕಷ್ಟು ಗೊಂದಲಗಳಿವೆ. ಇದರ ವಿರುದ್ಧ ಹಲವು ಮಂದಿ ಕೋರ್ಟ್‌ಗೆ ಹೋಗಿದ್ದಾರೆ. ಇಲ್ಲಿ ಪರಿಹಾರ ಕಾರ್ಯ ಕೂಡ ವೈಜ್ಞಾನಿಕವಾಗಿ ನಡೆದಿಲ್ಲ. ಹಣಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಆದರೆ ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಶೋಭಾ ಕರಾಂದ್ಲಜೆ ಸರಿಯಾಗಿ ಉತ್ತರ ನೀಡದ್ದೇ ಪ್ರಶ್ನೆ ಎತ್ತ ಮುಖಂಡನ ವಿರುದ್ಧ ಅಕೋಶ ಗೊಂಡಿದ್ದಾರೆ ,ಮೋದಿಯ ಹೆಸರಲ್ಲಿ ಗೇಡು ಬಂದ ಬಳಿಕ ಕ್ಷೇತ್ರದಲ್ಲಿ ಸರಿಯಾಗಿ ಕೆಲಸ ನಿರ್ವಿಸದಿರುವವರ ಅಗತ್ಯ ಇಲ್ಲವೆಂದು ಪರೋಕ್ಷವಾಗಿ ಹೇಳಿದ್ದಾರೆ ,ನಮಗೆ ನಮ್ಮ ಕೈಗೆ ಸಿಗುವ ಸಂಸದರು ಬೇಕು ಹೊರತು ಮನಬಂದಂತೆ ಬಂದು ಅವರರವರ ಕೆಲಸ ಮಾಡಿ ಬಿಟ್ಟು ಹೋಗುವವರ ಅವಶ್ಯಕತೆ ಎಲ್ಲ ಎಂಬುದು ಜಿಲ್ಲೆಯ ಜನರ ಮಾತು,ಇನ್ನು ಕೆಲವೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು ಜನಸ್ಪಂದನೆಗೆ ಸಿಗಲಿರುವ ಸ್ಥಳೀಯ ನಾಯಕರನ್ನು ಆಯ್ಕೆಮಾಡುವುದು ಉತ್ತಮ ಎಂಬುದು ಜನಸಾಮನ್ಯರ ಅನಿಸಿಕೆ.

RELATED ARTICLES

LEAVE A REPLY

Please enter your comment!
Please enter your name here

Most Popular