ಉಡುಪಿ : ಮಲ್ಪೆಯ ಅಯ್ಯಪ್ಪ ಮಂದಿರದ ವಾರ್ಷಿಕ ಮಹೋತ್ಸವದ ಕೆಂಡ ಸೇವೆಯ ವೇಳೆ ಆಕಸ್ಮಿಕವಾಗಿ ಉರಿಯುತ್ತಿದ್ದ ಇದ್ದಿಲಿಗೆ ಬಿದ್ದು ಅಯ್ಯಪ್ಪ ಭಕ್ತರೊಬ್ಬರು ಗಂಭೀರ ಸುಟ್ಟ ಗಾಯಗಳಿಗೆ ಒಳಗಾಗಿದ್ದಾರೆ.
ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಮತೋಲನ ಕಳೆದುಕೊಂಡು ಕೆಳಗೆ ಬಿದ್ದ ಪರಿಣಾಮ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ಅಲ್ಲಿದ್ದ ಇತರ ಭಕ್ತರು ತಕ್ಷಣ ಆತನ ಸಹಾಯಕ್ಕೆ ಧಾವಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.


