Friday, January 16, 2026
Flats for sale
Homeಜಿಲ್ಲೆಉಡುಪಿ : ಕೃಷ್ಣನೂರಿಗೆ ಇಂದು ಪ್ರಧಾನಿ ನರೇಂದ್ರ ಮೋದಿ,ಲಕ್ಷಕಂಠ ಗೀತಾ ಪಾರಾಯಣದಲ್ಲಿ ಭಾಗಿ,3 ಕಡೆ ರೋಡ್...

ಉಡುಪಿ : ಕೃಷ್ಣನೂರಿಗೆ ಇಂದು ಪ್ರಧಾನಿ ನರೇಂದ್ರ ಮೋದಿ,ಲಕ್ಷಕಂಠ ಗೀತಾ ಪಾರಾಯಣದಲ್ಲಿ ಭಾಗಿ,3 ಕಡೆ ರೋಡ್ ಶೋಗೆ ವೇದಿಕೆ, ಬಿಗಿ ಬಂದೋಬಸ್ತ್.

ಉಡುಪಿ : ಲಕ್ಷಕಂಠ ಗೀತಾ ಪಾರಾಯಣಕ್ಕಾಗಿ ಆಗಮಿಸಲಿರುವ ಪ್ರಧಾನಿ ಮೋದಿಯವರ ಸ್ವಾಗತಕ್ಕೆ ಕಡೆಗೋಲು ಕೃಷ್ಣನ ನೆಲೆವೀಡು ಉಡುಪಿ ಸರ್ವಸನ್ನದ್ಧವಾಗಿದೆ.

ಶ್ರೀಕೃಷ್ಣ ಮಠಕ್ಕೆ ಮೊದಲ ಬಾರಿಗೆ ಅಧಿಕೃತ ಭೇಟಿ ನೀಡುತ್ತಿರುವ ನೆಚ್ಚಿನ ಪ್ರಧಾನಿಯವರನ್ನು ಪೂರ್ಣಕುಂಭ ಸ್ವಾಗತ, ಮಂಗಲವಾದ್ಯಗಳ ಸಹಿತ ವೇದ ಮಂತ್ರಗಳ ಪಠನದೊಂದಿಗೆ ಬರಮಾಡಿಕೊಳ್ಳಲಾಗುತ್ತದೆ.

ಶ್ರೀ ಕೃಷ್ಣಮಠದ ರಥಬೀದಿಯಿಂದ ಆರಂಭಗೊಂಡು ಪಾರಾಯಣದ ವೇದಿಕೆಗೆ ಬರುವ ವರೆಗೆ ವೇದ ಮಂತ್ರಗಳ ನಿರಂತರ ಪಠನ, ಮಂಗಳವಾದ್ಯಗಳು, ಪಂಚವಾದ್ಯಗಳ ವಾದನ ಇರಲಿದೆ. ಇದಕ್ಕಾಗಿ ಪ್ರತ್ಯೇಕ ಗುಂಪುಗಳನ್ನು ರಚಿಸಿ ನಿರ್ದಿಷ್ಟಸ್ಥಳ ನಿಯೋಜನೆ ಮಾಡಲಾಗಿದೆ. ಆ ಸ್ಥಳಗಳಲ್ಲಿ ನಿಂತು ಒಂದೊಂದೇ ತಂಡದವರು ವೇದ ಮಂತ್ರ ಘೋಷಣೆಯನ್ನು ನಿರಂತರವಾಗಿ ಮಾಡಲಿದ್ದಾರೆ. ಇದರ ಜತೆಗೆ ಮಂಗಳವಾದ್ಯಗಳ ನಿನಾದ ಇರಲಿದೆ.
ರಾಜಾಂಗಣದ ಬಳಿ ಲಕ್ಷಕಂಠ ಗೀತಾ ಪಾರಾಯಣಕ್ಕಾಗಿ ಸಿದ್ದಗೊಂಡಿರುವ ವೇದಿಕೆ ಸಜ್ಜಾಗಿದೆ.

ಪರ್ಯಾಯ ಶ್ರೀಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರುಸನ್ಯಾಸಾಶ್ರಮ ಪ್ರವೇಶಿಸಿ 50 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಅದರ ಸುವರ್ಣ ಮಹೋತ್ಸವದ ಭಾಗವಾಗಿಯೂ ಈ ಕಾರ್ಯಕ್ರಮ ನಡೆಯ ಲಿದೆ. ವಿಶೇಷವಾಗಿ ದೇವರಿಗೆ ಸುವರ್ಣ ತೀರ್ಥ ಮಂಟಪ ಸಮರ್ಪಣೆಯನ್ನು ಶ್ರೀಪಾದರು ಪ್ರಧಾನಿ ನರೇಂದ್ರ ಮೋದಿಯವರ ಮೂಲಕ ಮಾಡುತ್ತಿದ್ದಾರೆ. ಮೋದಿಯವರು ಶ್ರೀ ಕೃಷ್ಣ ಮಠಕ್ಕೆ ಪ್ರವೇಶಿಸಿ ದೇವರ ದರ್ಶನ ಪಡೆದ ಆನಂತರ ಸುವರ್ಣ ಮಂಟಪದ ಸಮರ್ಪಣೆ ಮಾಡಲಿದ್ದಾರೆ.
ಈ ಹಿನ್ನೆಲೆ ಶ್ರೀಮಠದ ಪರಿಸರ ಸರ್ವಾಲಂಕೃತಗೊಂಡಿದೆ.ಪ್ರಧಾನಿ ನರೇಂದ್ರ ಮೋದಿಯವರ ಆಗ ಮನದ ಹಿನ್ನೆಲೆಯಲ್ಲಿ ಇಡೀ ಮಠದ ಪರಿಸರ ವನ್ನು ಅಲಂಕಾರ ಮಾಡಲಾಗಿದೆ.

ಮೋದಿ ಇಂದಿನ ಕಾರ್ಯಕ್ರಮ

ಆದಿಉಡುಪಿ ಹೆಲಿಪ್ಯಾಡ್‌ ಗೆ ಆಗಮನ

© ಬೆ.11ರಿಂದ ಬನ್ನಂಜೆ-ಕಲ್ಸಂಕದ ವರೆಗೆ ರೋಡ್ ಶೋ

ಶ್ರೀಕೃಷ್ಣ ಮಠದ ರಥಬೀದಿಗೆ ಪ್ರವೇಶ

© ಕನಕ ಮಂದಿರಕ್ಕೆ ಭೇಟಿ, ಕನಕನ ಮೂರ್ತಿಗೆ ಪುಷ್ಪಾರ್ಚನೆ

ಕನಕ ಕಿಂಡಿಗೆ ಜೋಡಿಸಿರುವ ಕನಕ ಕವಚ ಉದ್ಘಾಟನೆ

© ಕನಕನ ಕಿಂಡಿಯ ಮೂಲಕ ಶ್ರೀ ಕೃಷ್ಣ ದರ್ಶನ

ಶ್ರೀ ಕೃಷ್ಣ ದರ್ಶನ, ಸುವರ್ಣ ತೀರ್ಥ ಮಂಟಪ ಉದ್ಘಾಟನೆ

ಮಧ್ವಸರೋವರದಲ್ಲಿ ತೀರ್ಥ ಪ್ರೋಕ್ಷಣೆ

ಪರ್ಯಾಯ ಶ್ರೀಪಾದರಿಂದ ಶ್ರೀ ಕೃಷ್ಣದೇವರ ಎದುರು ಕೋಟಿ ಗೀತಾ ಲೇಖನ ಯಜ್ಞದೀಕ್ಷೆ ಸ್ವೀಕಾರ

ಚಂದ್ರಶಾಲೆಯಲ್ಲಿ ಮಠಾಧೀಶರೊಂದಿಗೆ ಚರ್ಚೆ

ಮುಖ್ಯಪ್ರಾಣ ದೇವರ ದರ್ಶನ

ಗೀತಾ ಮಂದಿರದಲ್ಲಿ ಪರ್ಯಾಯ ಶ್ರೀಪಾದರ ಜತೆ ಚರ್ಚೆ

ಅನಂತಶಯನ ಮೂರ್ತಿ ಉದ್ಘಾಟನೆ

  • ಲಘು ಉಪಾಹಾರ ಸೇವನೆ

ಗೀತಾ ಮಂದಿರದಿಂದ ಭಗವದ್ಗೀತೆ ಪಾರಾಯಣದ

ಮುಖ್ಯ ವೇದಿಕೆಗೆ ಪಯಣ

ಸಾಮೂಹಿಕವಾಗಿ ಭಗವದ್ಗೀತೆಯ 15ನೇ ಅಧ್ಯಾಯ ಪಠನ ಅಶ್ರೀಮಠದಿಂದ ವಿಶೇಷ ಗೌರವಾಭಿನಂದನೆ ಸೀಕಾರ

ಲಕ್ಷಕಂಠ ಗೀತಾ ಪಾರಾಯಣದಲ್ಲಿ ಭಾಷಣ

ಮ.1 ಗಂಟೆಗೆ ವೇದಿಕೆಯಿಂದ ಹೆಲಿಪ್ಯಾಡ್‌ ಗೆ ನಿರ್ಗಮನ ಅಆದಿ ಉಡುಪಿ ಹೆಲಿಪ್ಯಾಡ್ ನಿಂದ ಗೋವಾದ ಕಡೆಗೆ ಪಯಣ.

RELATED ARTICLES

LEAVE A REPLY

Please enter your comment!
Please enter your name here

Most Popular