Friday, March 6, 2026
Flats for sale
Homeಜಿಲ್ಲೆಉಡುಪಿ : ಉಡುಪಿಯ ನಾಲ್ವರ ಹತ್ಯೆಗೆ ಹಳೆಯ ದ್ವೇಷದ ಶಂಕೆ.

ಉಡುಪಿ : ಉಡುಪಿಯ ನಾಲ್ವರ ಹತ್ಯೆಗೆ ಹಳೆಯ ದ್ವೇಷದ ಶಂಕೆ.

ಉಡುಪಿ : ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ನೇಜಾರು ಎಂಬಲ್ಲಿ ಭಾನುವಾರ ಬೆಳಗ್ಗೆ ಮಹಿಳೆ ಹಾಗೂ ಆಕೆಯ ಮೂವರು ಮಕ್ಕಳನ್ನು ಅಪರಿಚಿತ ದುಷ್ಕರ್ಮಿಗಳು ಕೊಂದು ಹಾಕಿದ ಮನೆಯಲ್ಲಿ ಯಾವುದೇ ಚಿನ್ನಾಭರಣ ಕಳ್ಳತನವಾಗಿಲ್ಲ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ ತಿಳಿಸಿದ್ದಾರೆ.

ಹಸೀನಾ ಮತ್ತು ಆಕೆಯ ಮಕ್ಕಳಾದ ಅಫ್ನಾನ್, ಐನಾಜ್ ಮತ್ತು ಅಸೀಮ್ ಅವರನ್ನು ಹರಿತವಾದ ಆಯುಧದಿಂದ ಹತ್ಯೆ ಮಾಡಲಾಗಿದ್ದು, ಹಲ್ಲೆಗೊಳಗಾದ ಅತ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಮನೆಯೊಳಗೆ ನಾಲ್ವರೂ ಕೊಲೆಯಾಗಿದ್ದು, ಬೆಲೆಬಾಳುವ ವಸ್ತು ಪತ್ತೆಯಾಗಿಲ್ಲ. ಆರಂಭದಲ್ಲಿ ಇದು ವೈಯಕ್ತಿಕ ಕಾರಣಗಳಿಗಾಗಿ ನಡೆದ ಕೊಲೆ ಎಂದು ತೋರುತ್ತದೆ ಎಂದು ಎಸ್ಪಿ ಹೇಳಿದರು.

ತಾಯಿ ಮತ್ತು ಮೂವರು ಮಕ್ಕಳನ್ನು ಹತ್ಯೆ ಮಾಡಲು ಹಳೆಯ ವೈಯಕ್ತಿಕ ದ್ವೇಷ ಕಾರಣ ಎಂಬುದು ಶಂಕೆ ವ್ಯಕ್ತವಾಗಿದೆ,ಕೊಲೆಯಾದ ಆಫ್ನನ್ ಬೆಂಗಳೂರಿನ ಏರ್ ಇಂಡಿಯಾ ಕಂಪನಿ ಯಲ್ಲಿ ಉದ್ಯೋಗಿಯಾಗಿದ್ದರು ಕಳೆದ ರಾತ್ರೆ ಉಡುಪಿಗೆ ಬಂದಿದ್ದರು,ಆಕೆಯ ಮೇಲೆ ಇದ್ದ ದ್ವೇಷ ಈ ಘಟನೆಗೆ ಕಾರಣವಾಗಿರಬಹುದೆಂದು ಹಾಗೂ ಆರೋಪಿ ಸಾಕ್ಷ್ಯ ನಾಶ ಮಾಡಲು ಇನ್ನುಳಿದ ಮೂವರನ್ನು ಕೊಲೆ ಮಾಡಿರಬಹುದೆಂದು ಹೇಳಲಾಗಿದೆ.ಹಂತಕನ ಪತ್ತೆಗೆ ಐದು ತಂಡ ರಚಿಸಿದ್ದು,ಅಂತಕನ ಸುಳಿವು ಸಂತೆಕಟ್ಟೆ ಸಿಸಿ ಟಿವಿ ಯಲ್ಲಿ ಪತ್ತೆಯಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ ತಿಳಿಸಿದ್ದಾರೆ.

ಆಟೋ ರಿಕ್ಷಾದಲ್ಲಿ ಬಂದ ಹಂತಕ.
ಕೊಲೆ ಮಾಡಿದ ಆರೋಪಿನ್ನು ಸಂತೆಕಟ್ಟೆಯಿಂದ ತಾನೇ ಮನೆಗೆ ಬಿಟ್ಟಿದ್ದಾಗಿ ಆಟೋ ಚಾಲಕ ಸುದ್ದಿಗಾರರಿಗೆ ತಿಳಿಸಿದ್ದಾರೆ,ಆತ ತೃಪ್ತಿ ಸಂತೆಕಟ್ಟೆಯ ಹೂ ಮಾರುಕಟ್ಟೆಯಿಂದ ತೃಪ್ತಿ ಲೇಔಟ್ ಬಿಡಬೇಕೆಂದು ಕೇಳಿಕೊಂಡನು ನಾನು ಆತನನ್ನು ತೃಪ್ತಿ ಲೇಔಟ್ ಗೆ ಬಿಟ್ಟು ಬಂದೆ ,೧೫ ನಿಮಿಷದ ನಂತರ ಆತ ಮತ್ತೆ ನನಗೆ ಸಿಕ್ಕಿರುತ್ತಾನೆ ಆಗ ನಾನೇ ಅವನ ಬಳಿ ಕೇಳಿದೆ ಇಷ್ಟು ಬೇಗ ಬರುತಿದ್ದಾರೆ ನಾನೇ ನಿಮ್ಮನ್ನು ಹಿಂದೆ ಬಿಡುತಿದ್ದೇನೆಂದು ,ಆದರೆ ಅವನ ಮುಖದಲ್ಲಿ ಭಯದ ಛಾಯೆ ಮೂಡಿತ್ತು ಆದರೆ ಕೇವಲ ಅರ್ಧ ಗಂಟೆಯಲ್ಲಿ ಆರೋಪಿ ಈ ಕೃತ್ಯ ವೆಸಗಿದ್ದಾನೆ ಎಂದು ಆಟೋ ಚಾಲಕ ಶ್ಯಾಮ್ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular