ಉಡುಪಿ : ಜೂನ್ 18, ಭಾನುವಾರ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟ್ನಲ್ಲಿ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಾರ್ಕೂರಿನ ಹತ್ತೊಂಬತ್ತು ವರ್ಷದ ನಿರ್ಮಿತಾ ಅವರು ಸೋಮವಾರ ಮಣಿಪಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಭಾನುವಾರ ಬಸ್ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಚಲಾಯಿಸುತ್ತಿದ್ದ ಶಶಾಂಕ್ (21) ಸ್ಥಳದಲ್ಲೇ ಮೃತಪಟ್ಟಿದ್ದರು . ಇವರಿಬ್ಬರು ಬಾರ್ಕೂರಿನ ನಾಗರಮಠದವರಾಗಿದ್ದು, ಸಂಬಂಧಿಕರಾಗಿದ್ದರು. ಬಾರ್ಕೂರಿನ ಒಂದು ಕುಟುಂಬದ ಒಟ್ಟು ಆರು ಮಂದಿ ಮೂರು ಮೋಟಾರ್ ಬೈಕ್ಗಳಲ್ಲಿ ಆಗುಂಬೆ ಸೂರ್ಯಾಸ್ತದ ಸ್ಥಳಕ್ಕೆ ಬಂದಿದ್ದರು. ಮೃತ ಶಶಾಂಕ್ ಎಂಜಿನಿಯರಿಂಗ್ ಪದವೀಧರ. ದ್ವಿತೀಯ ಪಿಯುಸಿ ಮುಗಿಸಿದ್ದ ನಿರ್ಮಿತಾ ಕಾಲೇಜಿಗೆ ಪ್ರವೇಶ ಪಡೆದಿದ್ದಳು.


