Friday, March 13, 2026
Flats for sale
Homeಜಿಲ್ಲೆಉಡುಪಿ : ಅಮಾಯಕ ಯುವಕನ ಮೇಲೆ ಗುಂಪಿನಿಂದ ಹಲ್ಲೆ,ಸಿಸಿಟಿವಿಯಲ್ಲಿ ಸೆರೆ.

ಉಡುಪಿ : ಅಮಾಯಕ ಯುವಕನ ಮೇಲೆ ಗುಂಪಿನಿಂದ ಹಲ್ಲೆ,ಸಿಸಿಟಿವಿಯಲ್ಲಿ ಸೆರೆ.

ಉಡುಪಿ : ಮಣಿಪಾಲದ ಸರಳೆಬೆಟ್ಟು ಪ್ರದೇಶದಲ್ಲಿ ನಡೆದ ಆತಂಕಕಾರಿ ಘಟನೆಯೊಂದರಲ್ಲಿ ಸ್ಥಳೀಯ ಆರು ಯುವಕರನ್ನು ಒಳಗೊಂಡ ತಂಡವೊಂದರಿಂದ ಯುವಕನೊಬ್ಬ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಇಡೀ ಹಲ್ಲೆಯ ದೃಶ್ಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ.

ಮಣಿಪಾಲದ ಡಿ & ಟಿ ಬಾರ್ ಎಂದು ಕರೆಯಲ್ಪಡುವ ಸ್ಥಳೀಯ ಬಾರ್‌ನಲ್ಲಿ ದುಷ್ಕರ್ಮಿಗಳು ಒಬ್ಬರಿಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆಡಿದ್ದು ಬಳಿಕ ಆತನಿಗೆ ಮನಬಂದಂತೆ ಥಳಿಸಿದ್ದಾರೆ .ಯುವಕನನ್ನು ಮುಂಬೈ ಮೂಲದ ಮತ್ತು ಮಣಿಪಾಲದ ಖಾಸಗಿ ಕಾಲೇಜಿನ ವಿದ್ಯಾರ್ಥಿ ಅರುಷ್ ಕುಮಾರ್ (21) ಎಂದು ಗುರುತಿಸಲಾಗಿದೆ.

ಹಲ್ಲೆ ನಡೆಸಿದ ಗ್ಯಾಂಗ್ ಮದ್ಯ ಸೇವಿಸುತ್ತಿತ್ತು. ಹಲ್ಲೆಕೋರರು ಯುವಕನಿಗೆ ಸುಮಾರು ದೂರದ ವರೆಗೆ ಹಲ್ಲೆನಡೆಸುತ್ತ ಬಂದಿದ್ದಾರೆಂದು ತಿಳಿದಿದೆ. ಅವರು ಪಟ್ಟುಬಿಡದೆ ಅಟ್ಟಾಡಿಸುತ್ತ ಅರುಶ್ ಅವರನ್ನು ಮಂಜುನಾಥ ಅಪಾರ್ಟ್‌ಮೆಂಟ್‌ನಲ್ಲಿರುವ ಅವರ ನಿವಾಸಕ್ಕೆ ಹಿಂಬಾಲಿಸಿದ್ದಾರೆ, ಬಳಿಕ ಅರುಷ್ ಅವರ ಮೊಬೈಲ್ ಫೋನ್‌ಗೆ ಕರೆ ಮಾಡಿ ಬೆದರಿಸಿದ್ದಾರೆ.

ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಮಣಿಪಾಲ ಪೊಲೀಸರು ಕೂಡಲೇ ಸ್ಥಳಕ್ಕೆ ತೆರಳಿ ಅಗತ್ಯ ಮಾಹಿತಿ ಸಂಗ್ರಹಿಸಿ ದೂರು ದಾಖಲಿಸಿದ್ದಾರೆ.

ಪೊಲೀಸರು ಪ್ರಕರಣದ ಜಾಡು ಹಿಡಿದಿದ್ದು ತನಿಖೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular