ಮೇಷ ರಾಶಿ
ಸೂರ್ಯ ನಿಮ್ಮ ರಾಶಿ ಬಿಟ್ಟು ವೃಷಭಕ್ಕೆ ಪ್ರವೇಶವಾಗಿದ್ದಾನೆ. ಶನಿ ದೃಷ್ಡಿ ಸೂರ್ಯನಮೇಲೆ ಬೀಳುತ್ತದೆ. ಹೀಗಾಗಿ ತಂದೆಯ ಆರೋಗ್ಯಕ್ಕೆ ತೊಂದರೆ ಇದೆ. ಅನಾರೋಗ್ಯ ಇದ್ದರೆ ಉಲ್ಬಣಿಸುತ್ತದೆ. ಗುರು ನಿಮ್ಮ ರಾಶಿಯಿಂದ ಮೂರನೇ ಮನೆಗೆ ಪ್ರಶವಾಗಿದ್ದಾನೆ. ಇದೂ ಸಹ ನಿಮಗೆ ಕೆಲವು ಒತ್ತಡಗಳನ್ನು ತೋರಿಸುತ್ತಿದೆ. ಖರ್ಚುಗಳು ಹೆಚ್ಚಾಗುತ್ತದೆ. ಕೆಲವೇ ದಿನಗಳಲ್ಲಿ ರಾಹುವಿನ ೧೧ ನೇ ಮನೆಯ ಪ್ರವೇಶ ನಿಮಗೆ ಹಣಕಾಸಿನ ಬಲವನ್ನು ತಂದುಕೊಡುತ್ತದೆ.
ವೃಷಭ ರಾಶಿ
ನಿಮಗೆ ಕಳೆದ ಎರಡು ವರ್ಷಗಳಿಂದ ಗುರುಬಲ ಇರಲಿಲ್ಲ ಈಗ ಗುರುಬಲ ಬಂದಿದೆ. ಒಳ್ಳೆಯ ಕೆಲಸಗಳು ನೆನೆಗುದಿಗೆ ಬಿದ್ದಿರುವುದು ಈಗ ಮತ್ತೆ ಚಾಲನೆ ಪಡೆದು ಮುಂದುವರೆಯುತ್ತದೆ. ಅರ್ಹರಿಗೆ ವಿವಾಹ ಯೋಗ ಇದೆ. ಶನಿ ಲಾಭಸ್ಥಾನದಲ್ಲಿ ಇರುವುದರಿಂದ ಹಣಕಾಸಿನ ಹರಿವು ಉತ್ತಮವಾಗಿರುತ್ತದೆ. ವೃತ್ತಿಯಲ್ಲಿ ಯಶಸ್ಸು ಇದೆ. ಕೌಟುಂಬಿಕ ನೆಮ್ಮದಿ ಇದೆ. ಮನಸ್ಸಿಗೆ ಸಮಾಧಾನ ಇರುತ್ತದೆ.
ಮಿಥುನ ರಾಶಿ
ನಿಮ್ಮ ರಾಶಿಗೇ ಗುರು ಬಂದಿದ್ದಾನೆ. ಕೊAಚ ಒತ್ತಡದ ಸಮಯ. ಲಾಭಸ್ಥಾನದಲ್ಲಿ ಬುಧ ಇರುವುದು ಹಣಕಾಸಿನ ನೆರವು ಸಿಗುತ್ತದೆ. ಇನ್ನು ಕೆಲವೇ ದಿನದಲ್ಲಿ ಕೇತು ಮೂರನೇ ಮನೆಗೆ ಪ್ರವೇಶವಾದಾಗ ನಿಮಗೆ ಇನ್ನೂ ಹೆಚ್ಚಿನ ಹಣಕಾಸಿನ ನೆರವು ಸಿಗುತ್ತದೆ. ಆರೋಗ್ಯ ಸುಧಾರಿಸುತ್ತದೆ. ವ್ಯಾಪಾರ ವ್ಯವಹಾರ ಅನುಕೂಲಕರ ವಾಗಿರುತ್ತದೆ.
ಕಟಕ ರಾಶಿ
ಈಗ ಗುರು ನಿಮಗೆ ೧೨ ನೇ ಮನೆಗೆ ಬಂದಿದ್ದಾನೆ. ೧೨ ರ ಗುರು ಖರ್ಚುಗಳನ್ನು ಕೊಡುವುದರ ಜೊತೆಗೆ ಸ್ಥಾನ ಬದಲಾವಣೆ ಯನ್ನೂ ಕೊಡುತ್ತಾನೆ. ಹತ್ತನೇ ಮನೆಯಲ್ಲಿ ಬುಧ ಹನ್ನೊಂದನೇ ಮನೆಯಲ್ಲಿ ಸೂರ್ಯ, ಒಂಬತ್ತರಲ್ಲಿ ಶನಿ ಸಮಯ ಚೆನ್ನಾಗಿ ಇದೆ. ಯಾವುದೇ ಕಂಟಕಗಳಿಲ್ಲ. ನಿಮ್ಮ ರಾಶಿಯಲ್ಲೇ ನೀಚ ಕುಜ ಇದ್ದಾನೆ. ಹೀಗಾಗಿ ಕೈಕಾಲು ದೇಹದ ಮೇಲೆ ಹರಿತ ವಸ್ತುಗಳಿಂದ ಗಾಯವಾಗಬಹುದು ಎಚ್ಚರಿಕೆಯಿಂದ ಇರಿ.
ಸಿಂಹ ರಾಶಿ
ಅಷ್ಠಮಶನಿಯ ಪ್ರಭಾವ ಇದ್ದರೂ ಈಗ ಸಂಪೂರ್ಣ ಗುರುಬಲ ಇದೆ. ಈ ವರ್ಷ ಪೂರ್ತಿ ನೀವು ನಿರಾತಂಕವಾಗಿ ಇರಬಹುದು. ಅಷ್ಟಮಶನಿ ಸಮಸ್ಯೆಗಳನ್ನು ಸವಾಲುಗಳನ್ನೂ ಕೊಡುತ್ತಾನೆ. ಲಾಭದ ಗುರು ಪರಿಹಾರವನ್ನೂ ಯಶಸ್ಸನ್ನೂ ಕೊಡುತ್ತಾನೆ. ದೇವರ ಹಾಗೂ ಧರ್ಮದ ಕಾರ್ಯ ಮಾಡುವ ಅವಕಾಶ ಇದೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿಯಾಗುತ್ತದೆ. ಆರೋಗ್ಯ ಸುಧಾರಿಸುತ್ತದೆ. ಹಣದ ಅನುಕೂಲ ಚೆನ್ನಾಗಿದೆ.
ಕನ್ಯಾ ರಾಶಿ
ಇದುವರೆಗೂ ಇದ್ದ ಗುರುಬಲ ಈಗ ಕಡಿಮೆಯಾಗಿದೆ. ಶನಿಬಲವೂ ಇಲ್ಲ. ಆದರೆ ಮುಂದೆ ಕೆಲವೇ ದಿನಗಳಲ್ಲಿ ರಾಹು ಆರನೇ ಮನೆಗೆ ಬರುತ್ತಾನೆ. ಇದು ನಿಮಗೆ ಹಣಕಾಸಿನ ನೆರವು ನೀಡುತ್ತದೆ. ಹಣದ ಹರಿವು ಉತ್ತಮವಾಗುತ್ತದೆ. ನಿಮ್ಮ ರಾಶಿಯಲ್ಲೇ ಇದ್ದ ಕೇತು ಸಿಂಹರಾಶಿ ಗೆ ಪ್ರವೇಶಿಸಿದ್ದಾನೆ. ಇದು ಆರೋಗ್ಯದ ತೊಂದರೆಗಳನ್ನು ನಿವಾರಿಸುತ್ತದೆ. ಕುಜ ಲಾಭಸ್ಥಾನದಲ್ಲಿ ಇದ್ದರೂ ನೀಚನಾಗಿರುವುದರಿಂದ ಭೂಮಿಯಿಂದ ಅಲ್ಪಲಾಭ ಪಡೆಯುತ್ತೀರಿ. ಗುರುಬಲ ಇಲ್ಲದಿರುವುದರಿಂದ ಒತ್ತಡಗಳು ಇರುತ್ತದೆ.
ತುಲಾ ರಾಶಿ
ಗುರುಬಲ ಬಂದಿರುವುದರಿAದ ಇನ್ನು ನಿಮಗೆ ಅಡೆತಡೆಗಳು ಕಡಿಮೆ. ಅಂದುಕೊAಡ ಕೆಲಸಗಳು ಸರಾಗವಾಗಿ ಆಗುತ್ತದೆ. ಹಣಕಾಸಿನ ಹರಿವು ಉತ್ತಮವಾಗಿದೆ. ಅವಿವಾಹಿತರಿಗೆ ವಿವಾಹ ಯೋಗ ಇದೆ. ಕಾರ್ಯಕ್ಷೇತ್ರದಲ್ಲಿ ಯಶಸ್ಸು, ಗೌರವ ಸಿಗುತ್ತದೆ. ಉನ್ನತ ಅಧಿಕಾರ ಪ್ರಾಪ್ತಿ ಇದೆ. ನಿಮ್ಮ ನಿದ್ದೆಗೆಡಿಸುತ್ತಿದ್ದ ಸಮಸ್ಯೆಗಳೆಲ್ಲ ಈಗ ಪರಿಹಾರ ಆಗುತ್ತದೆ.
ವೃಶ್ಚಿಕ ರಾಶಿ
ಪಂಚಮ ಶನಿ ನಡೆಯುತ್ತಿಗೆ ಈಗ ಗುರುಬಲವು ಇಲ್ಲ. ಕೊಂಚ ಕಠಿಣ ಸಮಯ. ಅಪಮಾನಗಳು ನಷ್ಟಗಳು ಅನುಭವಿಸಬೇಕಾಗಬಹುದು. ಪ್ರತಿ ನಡೆಯಲ್ಲೂ ಎಚ್ಚರ ಇರಲಿ. ತಲೆ ಗಟ್ಟಿ ಇದೆಯೆಂದು ಕಲ್ಲಿಗೆ ಚಚ್ಚಬೇಡಿ.ತಣ್ಣೀರನ್ನೂ ತಣಿಸಿ ಕುಡಿಯಿರಿ. ಯಾವುದೇ ಮುಖ್ಯ ನಿರ್ಧಾರಗಳನ್ಬು ತೆಗೆದುಕೊಳ್ಳಬೇಡಿ. ಕೆಲವು ಕೆಲಸಗಳು ತಂತಾನೇ ವಿಳAಬವಾತ್ತದೆ.
ಧನಸ್ಸು ರಾಶಿ
ಈಗ ಗುರುಬಲ ಬಂದಿದೆ. ಹಣಕಾಸು ಆರೋಗ್ಯ ಎಲ್ಲವೂ ಸುಧಾರಿಸುತ್ತದೆ. ಮುಂದಿನವಾರದಲ್ಲಿ ರಾಹು ಮೂರನೇ ಮನೆಗೆ ಬರುತ್ತಾನೆ. ಇದು ಇನ್ನಷ್ಡು ನಿಮಗೆ ಬಲ ಕೊಡುತ್ತದೆ. ಅರ್ಹರಿಗೆ ಬಡ್ತಿ, ವಿವಾಹ ಪ್ರಸ್ತಾಪಗಳು ಬರುತ್ತವೆ. ಯಾವುದೋ ಒಂದು ಮಹತ್ತರ ಬದಲಾವಣೆ ನಡೆಯುತ್ತದೆ. ನಿಮ್ಮ ಜೀವನದ ಗತಿಯೇ ಬದಲಾಗುತ್ತದೆ. ಯಶಸ್ಸಿನ ಮೆಟ್ಟಿಲೇರುತ್ತೀರಿ.
ಮಕರ ರಾಶಿ
ಈಗ ಶನಿಯ ಬಲ ಇದೆ. ಇನ್ನೂ ಎರಡೂವರೆ ವರ್ಷಗಳ ಕಾಲ ಶನಿಯ ಬಲ ಇರುತ್ತದೆ. ಗುರು ಈಗ ಐದನೇ ಮನೆಯಿಂದ ಆರನೇ ಮನೆಗೆ ಬಂದಿದ್ದಾನೆ. ಮುಂದೆ ರಾಹು ಎರಡನೇ ಮನೆಗೆ ಬರುತ್ತಾನೆ. ನಿಮಗೆ ಹಣಕಾಸಿಗೆ ಕೊರತೆ ಇರುವುದಿಲ್ಲ. ಆರೋಗ್ಯದಲ್ಲಿ ಸ್ವಲ್ಪ ಗಮನ ಇರಲಿ. ಬುಧ ಮೂರನೇ ಮನೆಯಲ್ಲಿ ಇದ್ದಾನೆ ಗ್ರಹಗಳು ಅನುಕೂಲ ವಾಗಿಯೇ ಇವೆ.
ಕುಂಭ ರಾಶಿ
ಈಗ ಗುರುಬಲ ಬಂದಿದೆ. ಒಳ್ಳೆಯ ಸಂಗತಿಗಳು ಅನುಭವಕ್ಕೆ ಬರುತ್ತದೆ. ಹೊಸ ಕೆಲಸ, ಉನ್ನತ ಹುದ್ದೆ ಅಧಿಕಾರ, ಬಡ್ತಿ ಎಲ್ಲವೂ ಈಗ ನಿಮಗೆ ಸುಗಮವಾಗಿ ಸಿಗುತ್ತದೆ. ಮನಸ್ಸಿಗೆ ಉತ್ಸಾಹ ಉಲ್ಲಾಸ ಇದೆ. ಅರ್ಹರಿಗೆ ವಿವಾಹ ಪ್ರಯತ್ನಗಳಲ್ಲಿ ಜಯ ಸಿಗುತ್ತದೆ. ಆಸ್ತಿ ಮನೆ ಕೊಳ್ಳಬಹುದು. ದೇವರ ಅನುಗ್ರಹ ಇದೆ. ಹಿಂದೆ ಇದ್ದ ವಿರೋಧದ ವಾತಾವರಣ ಈಗ ಇರುವುದಿಲ್ಲ. ಕೋರ್ಟು ಕಚೇರಿ ವ್ಯಾಜ್ಯದಲ್ಕಿ ನಿಮಗೆ ಜಯ ಲಭಿಸುತ್ತದೆ.
ಮೀನ ರಾಶಿ
ಎರಡನೇ ಮನೆಯಲ್ಲಿ ಬುಧ ಹಾಗೂ ನಿಮ್ಮ ರಾಶಿಯಲ್ಲಿ ಶುಕ್ರ ಇವೆರಡೂ ಈಗ ನಿಮಗೆ ಬಲ ಕೊಡುತ್ತಿವೆ. ಮುಂದೆ ಕೇತು ಆರನೇ ಮನೆಗೆ ಬರುತ್ತಾನೆ. ಇದು ನಿಮಗೆ ಹಣಕಾಸಿನ ಬಲ ಕೊಡುತ್ತದೆ. ಶತ್ರುಗಳು ದೂರವಾಗುತ್ತಾರೆ. ಗುರು ನಾಲ್ಕನೇ ಮನೆಯಲ್ಲಿ ಇರುವುದರಿಂದ ಕೊಂಚ ಒತ್ತಡಗಳು ಇರುತ್ತದೆ. ನಿಭಾಯಿಸಿಕೊಳ್ಳಬೇಕು.