Wednesday, October 22, 2025
Flats for sale
Homeದೇಶಇಸ್ಲಾಮಾಬಾದ್ : ಭಾರತ ಮಿಲಿಟರಿ ದಾಳಿ ಕುರಿತು ಮಧ್ಯರಾತ್ರಿ 2.30ಕ್ಕೆ ತುರ್ತಾಗಿ ಪತ್ರಿಕಾಗೋಷ್ಠಿ ಕರೆದ ಪಾಕಿಸ್ತಾನದ...

ಇಸ್ಲಾಮಾಬಾದ್ : ಭಾರತ ಮಿಲಿಟರಿ ದಾಳಿ ಕುರಿತು ಮಧ್ಯರಾತ್ರಿ 2.30ಕ್ಕೆ ತುರ್ತಾಗಿ ಪತ್ರಿಕಾಗೋಷ್ಠಿ ಕರೆದ ಪಾಕಿಸ್ತಾನದ ಸಚಿವ..!

ಇಸ್ಲಾಮಾಬಾದ್ : ಪಾಕಿಸ್ತಾನದ ಮಾಹಿತಿ ಸಚಿವ ಅತವುಲ್ಲಾ ತರಾರ್ ಬುಧವಾರ ಮಧ್ಯರಾತ್ರಿ 2.30ಕ್ಕೆ ತುರ್ತಾಗಿ ಪತ್ರಿಕಾಗೋಷ್ಠಿ ಕರೆದು ಭಾರತ ಮುಂದಿನ 24ರಿಂದ 36 ಗಂಟೆಯೊಳಗೆ ಪಾಕಿಸ್ತಾನ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಸಲಿದೆ ಎಂದು ಗೋಳಾಡಿದ್ದಾನೆ.

ಭಾರತ ಮಿಲಿಟರಿ ದಾಳಿ ಮಾಡುವ ಕುರಿತು ನಮಗೆ ವಿಶ್ವಾಸಾರ್ಹ ಬೇಹುಗಾರಿಕಾ ಮಾಹಿತಿ ಬಂದಿದೆ ಎಂದು ಆತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ. ಇದಕ್ಕೆ ಪೂರಕವಾದ ಯಾವುದೇ ಆಧಾರವನ್ನು ತರಾರ್ ನೀಡಿಲ್ಲ. ಆದರೆ ಅಂತಹ ಯಾವುದೇ ದಾಳಿಯನ್ನು ಪೂರ್ಣಬಲದೊಂದಿಗೆ ಪಾಕಿಸ್ತಾನ ಎದುರಿಸ ಲಿದೆ. ತನ್ನ ಸಾರ್ವಭೌಮತೆ ಹಾಗೂ ಪ್ರಾದೇಶಿಕ ಸಮಗ್ರತೆಯನ್ನು ಪಾಕಿಸ್ತಾನ ಯಾವುದೇ ಬೆಲೆ ತೆತ್ತಾದರೂ ರಕ್ಷಿಸುತ್ತದೆ ಎಂದೂ ಎಚ್ಚರಿಕೆ ನೀಡಿದ್ದಾನೆ.

ಕಾಶ್ಮೀರದ ಬೈಸರನ್‌ನಲ್ಲಿ ಏಪ್ರಿಲ್ 22 ರಂದು ಭಯೋತ್ಪಾದಕರು ಭಾರತದ 26 ಪ್ರವಾಸಿಗರನ್ನು ಕೊಂದ ದಾಳಿಯಲ್ಲಿ ಪಾಕಿಸ್ತಾನದ ಕೈವಾಡವಿದೆ ಎಂಬ ಆರೋಪ ಒಂದು ಕಟ್ಟುಕಥೆ ಹಾಗೂ ಆಧಾರರಹಿತ ಆರೋಪ. ಈ ಆರೋಪಗಳನ್ನು ಮುಂದಿಟ್ಟು ದಾಳಿ ಮಾಡಿದರೆ ಅದರಿಂದಾಗುವ ಅನಾಹುತಗಳಿಗೆ ಭಾರತವೇ ಹೊಣೆ ಎಂದು ಬಡಬಡಿಸಿದ್ದಾನೆ. ಪಹಲ್ಗಾಮ್ ಘಟನೆ ಕುರಿತು ಸ್ವತಂತ್ರ ತನಿಖೆಗೆ ಬೆಂಬಲ ಇರುವುದಾಗಿ ಘೋಷಿ ಸಲಾಗಿದೆ. ಇದಕ್ಕೆ ಸಂಬAಧಪಟ್ಟ ವಿಷಯಗಳನ್ನು ತಟಸ್ಥ ತನಿಖಾ ತಂಡ ಪರಿಶೀಲಿಸಬಹುದಾಗಿದೆ. ಆದರೆ ಅಷ್ಟಾದರೂ ಭಾರತ ಯುದ್ಧಕ್ಕೇ ಮುಂದಾಗುತ್ತಿದೆ ಎಂದೂ ಸಚಿವ ಅಳಲು ತೋಡಿಕೊಂಡಿದ್ದಾನೆ.

RELATED ARTICLES

LEAVE A REPLY

Please enter your comment!
Please enter your name here

Most Popular