Wednesday, March 19, 2025
Flats for sale
Homeವಿದೇಶಇಸ್ಲಾಮಾಬಾದ್ : ಉಗ್ರರಿಗೆ - ರಣ ಉಗ್ರರ ದಾಳಿಯ ಭೀತಿ,ಪಾಕಿಸ್ತಾನ ಸೇನೆ ತೊರೆದ 2500 ಸೈನಿಕರು..!

ಇಸ್ಲಾಮಾಬಾದ್ : ಉಗ್ರರಿಗೆ – ರಣ ಉಗ್ರರ ದಾಳಿಯ ಭೀತಿ,ಪಾಕಿಸ್ತಾನ ಸೇನೆ ತೊರೆದ 2500 ಸೈನಿಕರು..!

ಇಸ್ಲಾಮಾಬಾದ್ : ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ನಡೆಸಿದ ದಾಳಿಗಳು ಸೇನೆಯ ಮೇಲೆ ಭಾರಿ ಪರಿಣಾಮ ಬೀರಿದೆ. ಇತ್ತೀಚಿನ ಆತ್ಮಹತ್ಯಾ ದಾಳಿಗಳು ಮತ್ತು ರೈಲು ಅಪಹರಣ ಘಟನೆಗಳ ನಂತರ 2500 ಸೈನಿಕರು ಸೇನೆಯನ್ನು ತೊರೆದಿದ್ದಾರೆ. ಸೈನಿಕರಲ್ಲಿ ಭಯ ಮತ್ತು ಅಭದ್ರತೆಯ ವಾತಾವರಣವಿದ್ದು, ಇದರಿಂದಾಗಿ ಅವರು ಸೌದಿ ಅರೇಬಿಯಾ, ಕತಾರ್, ಕುವೈತ್ ಮತ್ತು ಯುಎಇಯಂತಹ ದೇಶಗಳಲ್ಲಿ ಕೆಲಸ ಮಾಡಲು ತೆರಳುತ್ತಿದ್ದಾರೆ.

ಇತ್ತೀಚೆಗೆ ಪಾಕಿಸ್ತಾನದಲ್ಲಿ ಸೇನೆ ಮತ್ತು ಭದ್ರತಾ ಪಡೆಗಳ ಮೇಲಿನ ದಾಳಿಗಳು ಭಾರಿ ಪ್ರಮಾಣದಲ್ಲಿ ಹೆಚ್ಚಿವೆ. ಬಲೂಚಿಸ್ತಾನ್ ಮತ್ತು ಖೈಬರ್ ಪಖ್ತುಂಖ್ವಾದಲ್ಲಿ ಸೇನೆಯನ್ನುನಿರಂತರವಾಗಿ ಗುರಿಯಾಗಿಸಲಾಗುತ್ತಿದೆ. ಈ ದಾಳಿಗಳಲ್ಲಿ ಹೆಚ್ಚಿನ ಸಂಖ್ಯೆಯ ಸೈನಿಕರು ಮರಣವನಪ್ಪಿದ್ದಾರೆ. ಇದರಿಂದಾಗಿ ಪಾಕಿಸ್ತಾನಿ ಸೇನೆಯ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಿದೆ. ಈ ಹಿನ್ನೆಲೆಯಲ್ಲಿ ಸಾವಿರಾರು ಪಾಕಿಸ್ತಾನಿ ಸೇನಾ ಸೈನಿಕರು ತಮ್ಮ ಕೆಲಸ ಬಿಟ್ಟು ದೇಶ ಬಿಟ್ಟು ಓಡಿಹೋಗುತ್ತಿದ್ದಾರೆ ಎಂಬ ದೊಡ್ಡ ಸುದ್ದಿ ಹೊರಬಿದ್ದಿದೆ.

ಕಾಬೂಲ್ ಫ್ರಂಟ್‌ಲೈನ್ ವರದಿಯ ಪ್ರಕಾರ, ಕಳೆದ ಒಂದು ವಾರದಲ್ಲಿ ಸುಮಾರು 2500 ಸೈನಿಕರು ಸೇನೆಯನ್ನು ತೊರೆದಿದ್ದಾರೆ. ವರದಿಯ ಪ್ರಕಾರ, ಪಾಕಿಸ್ತಾನದ ನಿರಂತರ ದಾಳಿಗಳು ಮತ್ತು ಹದಗೆಡುತ್ತಿರುವ ಆರ್ಥಿಕ ಸ್ಥಿತಿಯಿಂದಾಗಿ, ಸೇನಾ ಸಿಬ್ಬಂದಿ ತಮ್ಮ ಉದ್ಯೋಗಗಳನ್ನು ಬಿಡಲು ಮುಂದಾಗಿದ್ದಾರೆ.. ಅವರು ತಮ್ಮ ಪ್ರಾಣವನ್ನೇ ಪಣಕ್ಕಿಡುವ ಬದಲು, ಸೌದಿ ಅರೇಬಿಯಾ, ಕತಾರ್, ಕುವೈತ್ ಮತ್ತು ಯುಎಇಯಂತಹ ಮಧ್ಯಪ್ರಾಚ್ಯ ದೇಶಗಳಿಗೆ ಕೆಲಸಕ್ಕೆ ಹೋಗಿದ್ದಾರೆ. ಸೇನೆಯೊಳಗೆ ಭಯ ಮತ್ತು ಅಭದ್ರತೆಯ ವಾತಾವರಣವಿದೆ, ಇದರಿಂದಾಗಿ ಸೈನಿಕರು ಹೋರಾಡಲು ಸಿದ್ಧರಿಲ್ಲ ಎಂದು ಹೇಳಲಾಗುತ್ತಿದೆ.

ಬಿಎಲ್‌ಎ ದಾಳಿಯಿಂದ ಪಾಕ್ ಸೇನೆಯ ಮೇಲೆ ಪರಿಣಾಮ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ) ನಡೆಸಿದ ದಾಳಿಗಳು ಪಾಕಿಸ್ತಾನಿ ಸೈನಿಕರ ಮನೋಸ್ಥೆöÊರ್ಯ ಕುಗ್ಗಿಸಿವೆ. ಇತ್ತೀಚಿನ ದಾಳಿಗಳಿಂದಾಗಿ ಸೈನಿಕರು ಸೇನೆಯಲ್ಲಿ ಉಳಿಯುವುದು ಕಷ್ಟಕರವಾಗಿದೆ ಎಂದು ವರದಿ ಹೇಳುತ್ತದೆ.

ಪಾಕಿಸ್ತಾನವು ಈಗಾಗಲೇ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟನ್ನು ಎದುರಿಸುತ್ತಿದೆ, ಅಂತಹ ಪರಿಸ್ಥಿತಿಯಲ್ಲಿ ಸೇನೆಯಲ್ಲಿ ಸೈನಿಕರ ಕೊರತೆಯು ಅದರ ಬಲದ ಮೇಲೆ ಗಂಭೀರ ಪರಿಣಾಮ ಬೀರಬಹುದು. ರೈಲು ಅಪಹರಣ ಮತ್ತು ಆತ್ಮಹತ್ಯಾ ದಾಳಿ ಹೆಚ್ಚಿದ ಕಳವಳ ಇತ್ತೀಚೆಗೆ ಬಲೂಚಿಸ್ತಾನದಲ್ಲಿ ಬಿಎಲ್‌ಎ ಹೋರಾಟಗಾರರು ಜಾಫರ್ ಎಕ್ಸ್ಪ್ರೆಸ್ ಅನ್ನು ಅಪಹರಿಸಿದ್ದರು. ಅವರು ರೈಲಿನಲ್ಲಿದ್ದ ಸೇನಾ ಸಿಬ್ಬಂದಿಯನ್ನು ಆಯ್ದು ಕೊಂದರು. ಇದಾದ ನಂತರ, ನೌಶಿಕಿಯಲ್ಲಿ ಪಾಕಿಸ್ತಾನಿ ಸೇನಾ ಬೆಂಗಾವಲು ಪಡೆಯ ಮೇಲೆ
ಆತ್ಮಾಹುತಿ ದಾಳಿ ನಡೆಸಲಾಯಿತು, ಇದರಲ್ಲಿ ಸುಮಾರು 90 ಸೈನಿಕರು ಸಾವನ್ನಪ್ಪಿದರು. ಈ ಘಟನೆಗಳ ನಂತರ ಸೇನೆಯೊಳಗೆ ಭಯದ ವಾತಾವರಣ ನಿರ್ಮಾಣವಾಗಿದ್ದು, ಹೆಚ್ಚಿನ ಸಂಖ್ಯೆಯ ಸೈನಿಕರು ಸೇನೆಯನ್ನು ತೊರೆದು ವಿದೇಶಗಳಿಗೆ ಹೋಗುತ್ತಿದ್ದಾರೆ.

ಆದರೆ, ಪಾಕಿಸ್ತಾನ ಸೇನೆ ಮತ್ತು ಅದರ ಮಾಧ್ಯಮಗಳು ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಸೈನಿಕರು ಈ ರೀತಿ ಸೇನೆಯನ್ನು ತೊರೆಯುವುದನ್ನು ಮುಂದುವರಿಸಿದರೆ, ಭವಿಷ್ಯದಲ್ಲಿ ಪಾಕಿಸ್ತಾನದ ಭದ್ರತಾ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು ಎನ್ನಲಾಗಿದೆ ಎಂಬ ಮಾಹಿತಿ ದೊರೆತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular