Friday, March 6, 2026
Flats for sale
Homeದೇಶಇಂಫಾಲ್ : ಮಣಿಪುರದ ಸಂತ್ರಸ್ಥರಿಗೆ ಪ್ರಧಾನಿ ಮರುವಸತಿಯ ಅಭಯ,ಶಾಂತಿಯ ಹಾದಿಯಲ್ಲಿ ಸಾಗುವಂತೆ ಮಣಿಪುರ ಜನತೆಗೆ ಮನವಿ..!

ಇಂಫಾಲ್ : ಮಣಿಪುರದ ಸಂತ್ರಸ್ಥರಿಗೆ ಪ್ರಧಾನಿ ಮರುವಸತಿಯ ಅಭಯ,ಶಾಂತಿಯ ಹಾದಿಯಲ್ಲಿ ಸಾಗುವಂತೆ ಮಣಿಪುರ ಜನತೆಗೆ ಮನವಿ..!

ಇಂಫಾಲ್ : ಜನಾಂಗೀಯ ಸಂಘರ್ಷ ನಡೆದ ಎರಡು ವರ್ಷಗಳ ಬಳಿಕ ಇದೇ ಮೊದಲ ಬಾರಿ ಮಣಿಪುರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ,
ಹಿಂಸಾಚಾರದಿAದ ಸ್ಥಳಾಂತರಗೊAಡವ ರಿಗೆ ಮರುವಸತಿ ಕಲ್ಪಿಸುವ ಭರವಸೆ ನೀಡಿದರು. ಶಾಂತಿಯ ಹಾದಿಯಲ್ಲಿ ಸಾಗುವಂತೆ ಮಣಿಪುರ ಜನತೆಗೆ ಮನವಿ
ಮಾಡಿದರು.

ಕುಕಿ ಸಮುದಾಯದವರು ಹೆಚ್ಚಾಗಿ ನೆಲೆಸಿರುವ ಚುರಾಚಾಂದ್‌ಪುರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಎಲ್ಲಾ ಸಂಘಟನೆಗಳಿಗೂ ನಾನು ಮನವಿ ಮಾಡಿಕೊಳ್ಳುತ್ತೇನೆ. ಶಾಂತಿಯ ಹಾದಿಯಲ್ಲಿ ಸಾಗಿ ನಿಮ್ಮ ಕನಸುಗಳನ್ನು ಈಡೇರಿಸಿಕೊಳ್ಳಿ. ಮಣಿಪು ರದ ಜನತೆಗೆ ಮಾತು ಕೊಡುತ್ತೇನೆ ನಿಮ್ಮೊಂದಿಗೆ ಕೇAದ್ರ ಸರ್ಕಾರವಿದೆ ಎಂದರು. ಮಣಿಪುರದ ಶಾಂತಿಗಾಗಿ ಎರಡು ಸಮುದಾಯಗಳ ಜತೆ ಕೇಂದ್ರ ಸರ್ಕಾರ ಒಪ್ಪಂದ ಮಾಡಿಕೊಂಡಿದೆ. ರಾಜ್ಯವನ್ನು ಸಹಜಸ್ಥಿತಿಯತ್ತ ತರುವಲ್ಲಿ ನಿರಂತರ ಶ್ರಮಿಸುತ್ತಿದೆ. ಸಂಘರ್ಷದಲ್ಲಿ ಮನೆಗಳನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ಹೊಸದಾಗಿ 7,೦೦೦ ಮನೆ ನಿರ್ಮಿಸುವ ಭರವಸೆ ನೀಡಿದರು.

ಮಣಿಪುರದಲ್ಲಿ ಬಹುಸಂಖ್ಯಾತ ಸಮುದಾಯ ಆಗಿರುವ ಮೈತೇಯಿ ಸಮುದಾಯಕ್ಕೆ ಪರಿಷಿಷ್ಠ ಪಂಗಡ ಸ್ಥಾನಮಾನ ನೀಡಿ ನ್ಯಾಯಾಲಯ ಆದೇಶ ನೀಡಿದ ಬೆನ್ನಲ್ಲೇ ಕುಕೀ ಮತ್ತು ಮೈತೇಯಿ ಸಮುದಾಯಗಳ ಮಧ್ಯೆ ಸಂಘರ್ಷ ವಿಕೋಪಕ್ಕೆ ತಿರುಗಿ 260 ಜನರು ಸಾವನ್ನಪ್ಪಿದ್ದರು. ಕುಕೀ ಸಮುದಾಯದ 4೦,೦೦೦ ಹಾಗೂ ಮೈತೇಯಿ ಸಮುದಾಯ 2೦,೦೦೦ ಒಟ್ಟು 6೦ ಸಾವಿರ ಜನರು ನಿರಾಶ್ರಿತರಾಗಿದ್ದರು.

ಮಣಿಪುರ ರಾಜಧಾನಿ ಇಂಫಾಲ್‌ದಲ್ಲಿ ಪ್ರಧಾನಿ ಮೋದಿ 1,203 ಕೋಟಿ ರೂ. ವೆಚ್ಚದ 17 ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು. ಚುರಾಚಾಂದ್‌ಪುರದಲ್ಲಿ 7,344 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಮೈತೇಯಿ ಸಮುದಾಯದ ಜನರು ಹೆಚ್ಚಿರುವ ಇಂಫಾಲ್‌ದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿ, ಭಾರತ ಮಾತೆಗೆ ಮಣಿಪುರ ರಾಜ್ಯ ರತ್ನವಿದ್ದಂತೆ. ಯಾವುದೇ ರೀತಿಯ ಸಂಘರ್ಷವು ಖಂಡಿಸುವAತದ್ದು. ಮಣಿಪುರ ನೆಲದಲ್ಲಿ ಜನಾಂಗೀಯ ಸಂಘರ್ಷ ನಡೆದದ್ದು ಹಿಂದಿನ ಪೂರ್ವಜರಿಗೆ ಅಷ್ಟೆ ಅಲ್ಲದೆ ಭವಿಷ್ಯದ ಪೀಳಿಗೆಗೆ ಮಾಡಿದ ಅನ್ಯಾಯ ಎಂದರು.

ರಸ್ತೆ ಮೂಲಕವೇ ಮಣಿಪುರ ತಲುಪಿದ ಪ್ರಧಾನಿ ಮೋದಿ: ಭಾರೀ ಮಳೆಯ ಪರಿಣಾಮ ಪ್ರಧಾನಿ ಮೋದಿ ಹೆಲಿಕಾಪ್ಟರ್ ಮೂಲಕ ಮಣಿಪುರಕ್ಕೆ ತೆರಳಲು ಸಾಧ್ಯವಾಗ ಕಾರಣ ರಸ್ತೆ ಮೂಲಕವೇ ಅವರು ಚುರಚಂದಾಪುರ ತಲುಪಿದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ಸೇರಿದಂತೆ ಮಣಿಪುರದ ಜನತೆಗ ಅವರಿಗೆ ಅದ್ಧೂರಿ ಸ್ವಾಗತ ನೀಡಿದರು

RELATED ARTICLES

LEAVE A REPLY

Please enter your comment!
Please enter your name here

Most Popular