ಆಲಿಗಢ್ : ಮಾಸಿಕ 15 ಸಾವಿರ ವೇತನ ಪಡೆಯುವ ವ್ಯಕ್ತಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 11 ಕೋಟಿ 11 ಲಕ್ಷ 85 ಸಾವಿರ 991 ರೂ.ಗಳ ಆದಾಯ ತೆರಿಗೆ ಪಾವತಿಸುವಂತೆ ಇಲಾಖೆ ನೋಟಿಸ್ ಕಳುಹಿಸಿರುವುದು ಆಘಾತಕಾರಿ ಘಟನೆ ನಡೆದಿದೆ.
ಆಲಿಗಢದ ಕೀಲಿ ರಿಪೇರಿ ಮಾಡುವ ಯೋಗೇಶ್?
ಶರ್ಮಾ ಜೀವನ ನಡೆಸುವುದೇ ಸಂಕಷ್ಟ ಎಂದು ಆರ್ಥಿಕ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿರುವಾಗ ಐಟಿ ಶಾಕ್ ನೀಡಿದೆ.ಕಳೆದ ಏಳು ವರ್ಷದಿಂದ ಲಾಕ್? ಸ್ಟಿಂಗ್ ? ಮಾಡುವ ಕೆಲಸ ಮಾಡುತ್ತಿರುವ ಯೋಗೇಶ್? ಶರ್ಮಾ, ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಮಾಸಿಕ 15 ರಿಂದ 20 ಸಾವಿರ ರೂ ವೇತನ ಪಡೆಯುತ್ತಿದ್ದು, ಬರುವ ಇಷ್ಟು ವೇತನದಲ್ಲಿ ಮನೆ ನಡೆಸುವುದು ಸವಾಲಾಗಿದೆ. ಹಣದ ಬಿಕ್ಕಟ್ಟಿನಿಂದ ಬಳಲುತ್ತಿರುವ ಅವರು ವಿದ್ಯುತ್? ಬಿಲ್? ಪಾವತಿ ಮಾಡದ ಕಾರಣ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.
ಕಳೆದೆರಡು ವರ್ಷಗಳಿಂದ ಹೆಂಡತಿ ಕ್ಷಯರೋಗದಿಂದ ಬಳಲುತ್ತಿದ್ದು, ಹೆಂಡತಿಯ ಚಿಕಿತ್ಸೆಗೆ ಹಣ ಹೊಂದಿರುವುದರಲ್ಲಿ ಹೈರಾಣಾಗಿದ್ದಾರೆ. ಇಂತಹ ಸಂಕಷ್ಟಗಳ ಮಧ್ಯೆ ಕಳೆದ ತಿಂಗಳು ಅವರಿಗೆ ಆದಾಯ ತೆರಿಗೆ ಇಲಾಖೆ 10 ಲಕ್ಷದ ಐಟಿ ನೋಟಿಸ್? ಜಾರಿ ಮಾಡಿತ್ತು. ಆದರೆ, ಇದನ್ನು ಯೋಗೇಶ್? ನಿರ್ಲಕ್ಷಿಸಿದ್ದರು. ಇದು ಐಟಿ ಅಧಿಕಾರಿಗಳ ಮಿರ್ಲಕ್ಷ್ಯ ಎಂಬ ಆರೋಪಗಳು ಕೇಳಿಬರುತ್ತಿವೆ