ಆಲಪ್ಪುಳ : ಬಡ ಕುಟುಂಬದ ಇದ್ದ ಸಂಪತ್ತು, ಹಣ ಎಲ್ಲವೂ ಕ್ಯಾನ್ಸರ್ ಚಿಕಿತ್ಸೆಗಾಗಿ ಖರ್ಚುಮಾಡಿ ಮನೆಯನ್ನು ಅಡವಿಟ್ಟು ಬ್ಯಾಂಕ್ ಲೋನ್ ಕಟ್ಟದೆ ಮನೆ ಜಪ್ತಿ ಮಾಡಲು ಬಂದ ಘಟನೆ ಕೇರಳದ ಆಲಪ್ಪುಳ ದಲ್ಲಿ ನಡೆದಿದೆ.
ಹಿಡಿದ ಮೀನನ್ನು ಮಾರಿ ಬರುವ ಅಲ್ಪಸ್ವಲ್ಪ ಹಣದಲ್ಲಿ ಜೀವನ ಸಾಗಿಸುತ್ತಿರುವ ರಾಜಪ್ಪನವರದೇ ಕುಟುಂಬದ ಏಕೈಕ ಆಧಾರ. ತಾಯಿಗೆ ಕ್ಯಾನ್ಸರ್, ಮಗಳು ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾರೆ. ಇದೀಗ ಮೊಮ್ಮಗಳಿಗೂ ಕ್ಯಾನ್ಸರ್. ಬಡ ಕುಟುಂಬದ ಇದ್ದ ಸಂಪತ್ತು, ಹಣ ಎಲ್ಲವೂ ಚಿಕಿತ್ಸೆಗಾಗಿ ಖರ್ಚಾಗಿದೆ. ಆದರೆ ಆರೋಗ್ಯ ಸುಧಾರಿಸಿಲ್ಲ. ಮೊಮ್ಮಗಳ ಚಿಕಿತ್ಸೆಗೆ ಮನೆಯ ಮೇಲೆ ಸಾಲ ಮಾಡಿದ್ದಾರೆ. ಈ ಸಾಲ ಕಟ್ಟಲು ಸಾಧ್ಯವಾಗದೆ ಬ್ಯಾಂಕ್ ಅಧಿಕಾರಿಗಳು ಮನೆಯನ್ನೇ ಜಪ್ತಿ ಮಾಡಿದ್ದಾರೆ. ಈ ಮಾಹಿತಿ ತಿಳಿಯುತ್ತಿದ್ದಂತೆ ಕೇಂದ್ರ ಸಚಿವ ಸುರೇಶ್ ಗೋಪಿ ಕುಟುಂಬದ ನೆರವಿಗೆ ಧಾವಿಸಿದ್ದಾರೆ. ಕುಟುಂಬ ಮಾಡಿದ್ದ ಬ್ಯಾಂಕ್ ಸಾಲವನ್ನು ತೀರಿಸಿ ಮನೆಯ ದಾಖಲೆ ಪತ್ರಗಳನ್ನು ಕುಟುಂಬಕ್ಕೆ ಹಿಂದಿರುಗಿಸಿದ್ದಾರೆ. ಇಷ್ಟೇ ಅಲ್ಲ ಈ ಕುಟುಂಬದ ಚಿಕಿತ್ಸೆ ಕುರಿತು ಮಾಹಿತಿ ಪಡೆದಿದ್ದಾರೆ.ಚಿಕಿತ್ಸೆ ನೆರವು ನೀಡಲು ಮುಂದಾಗಿ ಮಾನವೀತೆ ಮೆರೆದಿದ್ದಾರೆ. ಕೇಂದ್ರ ಪ್ರವಾಸೋದ್ಯಮ ರಾಜ್ಯ ಸಚಿವ ಸುರೇಶ್ ಗೋಪಿ ಈ ಕಾರ್ಯಕ್ಕೆ ಎಲ್ಲೆಡೆ ಪ್ರಶಂಶೆ ವ್ಯಕ್ತವಾಗಿದೆ.
ಬಡ ಕುಟುಂಬ ಈಗಾಗಲೇ ಸಾಲ ಸೋಲ ಮಾಡಿ ಚಿಕಿತ್ಸೆ ನೀಡಿದೆ. ಮೊಮ್ಮಗಳ ಚಿಕಿತ್ಸೆಗೆ ವಿಪರೀತ ಖರ್ಚುಾಗುತ್ತಿದ್ದ ಕಾರಣ ಮನೆಯನ್ನೇ ಅಡವಿಟ್ಟು ಸಾಲ ಪಡೆದಿದ್ದಾರೆ. ಈ ಸಾಲ ಕಟ್ಟಲು ಸಾಧ್ಯವಾಗದೆ ಬ್ಯಾಂಕ್ ಅಧಿಕಾರಿಗಳು ಮನೆ ಜಪ್ತಿ ಮಾಡಿದ್ದರು. ಇದರಿಂದ ಕುಟುಂಬ ಬೀದಿ ಬಿದ್ದಿತ್ತು. ಮಾಹಿತಿ ಸಿಕ್ಕ ಬೆನ್ನಲ್ಲೇ ಸ್ಥಳಕ್ಕೆ ಆಗಮಿಸಿದ ಕೇಂದ್ರ ಸಚಿವ ಸುರೇಶ್ ಗೋಪಿ ನೆರವಿನ ಅಭಯ ನೀಡಿದ್ದಾರೆ. ಇದೇ ವೇಳೆ ಬ್ಯಾಂಕ್‌ನಿಂದ ಪಡೆದ 1,70,000 ರೂಪಾಯಿ ಸಾಲ ಹಾಗೂ ಅದರ ಬಡ್ಡಿ ತೀರಿಸಿ ಬ್ಯಾಂಕ್‌ನಲ್ಲಿದ್ದ ಮನೆಯ ದಾಖಲೆ ಪತ್ರಗಲನ್ನು ಕುಟುಂಬಕ್ಕೆ ಹಿಂದಿರುಗಿಸಿದ್ದಾರೆ.
ಲೋಕೋ ಪೈಲಟ್‌ಗಳ ಸಂಘ ‘ಸಂಘಬಂಧು ಸಮರ್ಪಣ’ ಮುಂದೆ ಬಂದು ರಾಜಪ್ಪನವರ ಹಿರಿಯ ಮೊಮ್ಮಗಳು ಆರಾಧ್ಯಳ ವಿದ್ಯಾಭ್ಯಾಸಕ್ಕೆ ಪ್ರಾಯೋಜಕತ್ವ ನೀಡುವುದಾಗಿ ಸುರೇಶ್ ಗೋಪಿಯವರಿಗೆ ತಿಳಿಸಿದರು.ರಾಜಪ್ಪನವರ ಮೊಮ್ಮಗಳು ಆರಭಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ತಿಳಿದ ಸುರೇಶ್ ಗೋಪಿ, ಅಮೃತಾ ಅಥವಾ ವೆಲ್ಲೂರು ವೈದ್ಯಕೀಯ ಕಾಲೇಜಿನಲ್ಲಿ ಹೆಚ್ಚಿನ ಚಿಕಿತ್ಸೆಗೆ ಅಗತ್ಯವಿರುವ ಎಲ್ಲ ಸಹಾಯವನ್ನು ಕುಟುಂಬಕ್ಕೆ ಭರವಸೆ ನೀಡಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಕಣ್ಣನ್ ಪೆರುಂಬಲಂ ಅವರು ಕುಟುಂಬಕ್ಕೆ ಸಹಾಯ ಕೋರಿ ಸುರೇಶ್ ಗೋಪಿ ಅವರನ್ನು ಸಂಪರ್ಕಿಸಿದ್ದು ಹಾಗೂ ಬಿಜೆಪಿ ವಕ್ತಾರರು ಸೆ.13ರಂದು ಸಚಿವರಿಗೆ ಈ ಕುರಿತು ಸೂಚನೆ ನೀಡಿದ್ದು, ಸಚಿವರು ಕೂಡಲೇ ಕಾರ್ಯಪ್ರವೃತ್ತರಾಗಿದ್ದಾರೆ.ಒಟ್ಟಿನಲ್ಲಿ ಎಲ್ಲ ರಾಜಕಾರಣಿಗಳು ಈ ರೀತಿಯ ಸಹಾಯಹಸ್ತ ನೀಡಿದರೆ ಅದೆಷ್ಟೋ ಕುಟುಂಬಗಳು ಬದುಕಿಬಾಳಬಹುದೆಂಬುದು ಜನಸಾಮನ್ಯರ ಮಾತು .


