ಆನೇಕಲ್ ; ಬಹು ನಿರೀಕ್ಷೆಯಲ್ಲಿ 24 ಅಂಕಣದ ಎತ್ತರವಾಗಿ ಸಾಂಪ್ರದಾಯಿಕವಾಗಿ ಕಟ್ಟಲಾಗಿದ್ದ ಕುರುಜು ನೆಲಕಚ್ಚಿದೆ. ವಾರದಿಂದಲೇ ಹೀಲಲಿಗೆ ಗ್ರಾಮದ ಇಡೀ ಊರಿಗೆ ಊರೇ ನಿಂತು ಪ್ರತಿಷ್ಟೆಗಾಗಿ ಕಟ್ಟಲಾಗಿದ್ದ ಕುರುಜು ಒಮ್ಮೆಲೇ ನೆಲಕ್ಕುರುಳುವ ಮೂಲಕ ಜನರ ಆಸೆಗೆ ತಣ್ಣೀರೆರಚಿದಂತಾಗಿದೆ.
ಹೀಲಲಿಗೆ ಗ್ರಾಮದ ಸುತ್ತಲೂ ಹೊಸದಾಗಿ ಸ್ಯಾನಿಟರಿ ಲೈನ್, ಕಾಲುವೆ ಕಾಮಗಾರಿಗಳು ನಡೆಯುತ್ತಿದ್ದು ಕಲಗಲಿನ ರಥದ ಚಕ್ರ ಪಿಟ್ ಮುಚ್ಚಳದ ಮೇಲೆ ಬಲಕ್ಕೆ ಹರಿದು ತೂಕಕ್ಕೇ ಕುಸಿದು ಇಡೀ ಎತ್ತರದ ಕುರುಜು ನೆಲಕ್ಕೆ ಅಪ್ಪಳಿಸಿದೆ. ಮುಖ್ಯವಾಗಿ ಸಾವಿರಾರು ಸಂಖ್ಯೆಯ ಜನ ಸಾಗರ ಇದ್ದರೂ ಒಬ್ಬರಿಗೂ ಸಣ್ಣ ಗಾಯಗಳಾಗದೆ ಇರುವುದು ಜನರ ನಿಟ್ಟುಸಿರಿಗೆ ಕಾರಣವಾಗಿದೆ.
ಹೀಲಲಿಗೆಯಿಂದ ಕಮ್ಮಸಂದ್ರ ಮಾರ್ಗದ ಚಿಂತಲಮಡಿವಾಳ ಬಳಸುವ ಮಾರ್ಗದ ಹೈಪರ್ ಮಾರ್ಕೆಟ್ ಮುಂಭಾಗ ನಡೆದ ಘಟನೆ ಇದಾಗಿದೆ. ಈ ಬಾರಿ ಒಟ್ಟು ಏಳು ಕುರುಜುಗಳು ಕಟ್ಟಲಾಗಿದ್ದು. ಹೊಸದಾಗಿ ಹೈಟೆನ್ಷನ್ ರೈಲ್ವೇ ಲೈನ್ ಅಳವಡಿಸಿದ ಕಾರಣಕ್ಕೆ ಈ ಬಾರಿ ಕೊಡತಿ-ಸೂಲಕುಂಟೆ ಕುರುಜುಗಳಷ್ಟೇ ರೈಲ್ವೇ ಹಳಿಯ ಈಚೆಗಿನ ಕುರುಜುಗಳು ಸಿದ್ದಗೊಂಡು ಚಿಂತಲಮಡಿವಾಳದ ರೈಲ್ವೆ ಹಳಿ ಬಳಿಗಷ್ಟೇ ಬರಲಿವೆ ಉಳಿದಂತೆ ಚೊಕ್ಕಸಂದ್ರ, ಹಾರೋಹಳ್ಳಿ, ಕಗ್ಗಲೀಪುರ, ನಾರಾಯಣಘಟ್ಟ ಮತ್ತು ರಾಮಸಾಗರ ಕುರುಜುಗಳು ರೈಲ್ವೇ ಹೈಟೆನ್ಷನ್ ವೈರ್ಗಳ ಕಾರಣಕ್ಕೆ ಈ ಬಾರಿ ಕಟ್ಟಲಿಲ್ಲ. ಈ ಮುನ್ನ ಹನ್ನೊಂದು ಕುರುಜುಗಳು ಮದ್ದೂರಮ್ಮ ದೇವಾಲಯದ ಸುತ್ತ ನಿಂತರೆ ಕಣ್ಣು ತುಂಬಿ ಕೊಳ್ಳಲು ಹೊರ ರಾಜ್ಯಗಳಿಂದಲೂ ಜನ ಸಾಗರ ಹರಿದು ಬರುತಿತ್ತು. ಆದರೆ ರೈಲ್ವೇ ಲೈನ್ ಕಾರಣಕ್ಕೆ ಐದು ಕುರುಜುಗಳು ಗೈರು ಹಾಜರಾಗಿವೆ.
ಉಳಿದಂತೆ ಈ ಬಾರಿ ದೊಡ್ಡನಾಗಮಂಗಲ, ಹೀಲಲಿಗೆ, ಲಕ್ಷ್ಮಿನಾರಾಯಣಪುರ, ರಾಯಸಂದ್ರ, ಸಿಂಗೇನಗ್ರಹಾರ. ಮತ್ತು ಕೊಡತಿ, ಸೂಲಕುಂಟೆ ಕುರುಜುಗಳು ಸೇರಿ ಏಳು ಕುರುಜುಗಳು ಬರಲಿದ್ದು ಇದರಲ್ಲಿ ಇದೀಗ ಹೀಲಲಿಗೆ ನೆಲಕ್ಕೆ ಕುಸಿದಿದ್ದರಿಂದ ಆರೇ ಕುರುಜುಗಳು ಸೆಟ್ಟೇರಿ ಹುಸ್ಕೂರಿನತ್ತ ತೆರಳಿವೆ. ಮೊನ್ನೆಯಿಂದ ಅದ್ದೂರಿಯಾಗಿ ನಡೆಯುತ್ತಿರುವ ಹುಸ್ಕೂರು ಮದ್ದೂರಮ್ಮ ಜಾತ್ರೆ ವಿಶೇಷ ಆಕರ್ಷಣೆಯಾಗಿ ಕುರುಜಗಳೇ ಆಗಿದ್ದು ಪ್ಋಇ ಊರಿನವರು ದೇವಿಯ ಹರಿಕೆ ತೀರಿಸಲು ಪ್ರತಿಷ್ಟೇಯನ್ನೇ ಪಣವಾಗಿಟ್ಟು ಕಟ್ಟುವ ಪರಿಪಾಟ ರೂಢಿಯಲ್ಲಿದೆ.


